ಯಡಿಯೂರಪ್ಪ ಹೆಸರು ಹೇಳಿದ್ರೆ ಬೇಲಿ ಗೂಟವೂ ಗೆಲ್ಲುತ್ತೆ

ಯಡಿಯೂರಪ್ಪ ನೇತೃತ್ವದ KJP ಪ್ರಾದೇಶಿಕ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂದಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಅವರು ರಾಜ್ಯ ರಾಜಕಾರಣದಲ್ಲಿ KJP ನಿರ್ಣಾಯಕ ಪಾತ್ರ ವಹಿಸಲಿದೆ. KJPಯಿಂದ BJP ಬಹಳ ನಷ್ಟ ಅನುಭವಿಸಲಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಹರಪನಹಳ್ಳಿಯಲ್ಲಿ ಮಾತನಾಡಿದ ಶ್ರೀಗಳು ಕರ್ನಾಟಕದ ಇತಿಹಾಸದಲ್ಲಿ ಈ ಹಿಂದೆ ಸ್ಥಾಪನೆಯಾಗಿದ್ದ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ. ಆದರೆ ಈಗಿನ ಸ್ಥಿತಿ ಭಿನ್ನವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಯಡಿಯೂರಪ್ಪ ಅವರು ನಾಲ್ಕು ದಶಕಗಳ ಕಾಲ ನಿರಂತರವಾಗಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿ, ಜನಾನುರಾಗಿಯಾಗಿದ್ದಾರೆ. ಆದ್ದರಿಂದ ಯಡಿಯೂರಪ್ಪ ಮತ್ತು KJP ಪಕ್ಷವನ್ನು ಜನ ಕೈಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರ ಬಗ್ಗೆ ಮೊದಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿತ್ತು. ಕಾಲ ಮಿಂಚಿದ ಮೇಲೆ ಅರುಣ್ ಜೇಟ್ಲಿ ಆಗಮಿಸಿ, ಮನವೊಲಿಸಲು ಯತ್ನಿಸಿ, ವಿಫಲರಾಗಿದ್ದಾರೆ.
ಯಡಿಯೂರಪ್ಪ ಹೆಸರು ಹೇಳಿದ್ರೆ ಬೇಲಿ ಗೂಟವೂ ಗೆಲ್ಲುತ್ತೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಹೇಳಿ, ಬೇಲಿಯ ಗೂಟ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂದು ಶಾಸಕ ಎಚ್ ಹಾಲಪ್ಪ ಹೇಳಿದ್ದಾರೆ. ರಾಜ್ಯವನ್ನು ಅಭಿವೃದ್ಧಿಯಲ್ಲಿ 2ನೆಯಬ ಸ್ಥಾನಕ್ಕೆ ಮೇಲೆತ್ತಿದ ಜನಪರ ಕಾಳಜಿಯ ವ್ಯಕ್ತಿ ಯಡಿಯೂರಪ್ಪ ಅವರು ನಿಜವಾದ ಜನನಾಯಕ ಎಂದು ಹಾಲಪ್ಪ ಸೊರಬದಲ್ಲಿ ಮಂಗಳವಾರ ಬಣ್ಣಿಸಿದ್ದಾರೆ.












Click it and Unblock the Notifications