ಕೆಜಿಪಿ ಚೊಚ್ಚಲ ಸಮಾವೇಶದಲ್ಲಿ ಬಿಎಸ್ವೈ ವಿಭಿನ್ನ ಹೆಜ್ಜೆ

ಹಾವೇರಿಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ಕರ್ನಾಟಕ ಜನತಾ ಪಕ್ಷದ ಚೊಚ್ಚಲ ಸಮಾವೇಶದಲ್ಲಿ 15 ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಕೆಜಿಪಿ ತನ್ನ ಪಕ್ಷದ ಟಿಕೆಟ್ ನೀಡಲಿದೆ.
ಸಂಘ ಪರಿವಾರ ಮತ್ತು ಬಿಜೆಪಿಗೆ ಟಾಂಗ್ ಕೊಟ್ಟು ತಾನೊಬ್ಬ ಜಾತ್ಯಾತೀತವಾದಿ ರಾಜಕಾರಿಣಿ ಎಂದು ಸಾರಲು ಹೊರಟಿರುವ ಯಡಿಯೂರಪ್ಪ ಲಿಂಗಾಯಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಸಮಾವೇಶವನ್ನು ವಿಭಿನ್ನವಾಗಿ ಚಾಲನೆಗೊಳಿಸಲಿದ್ದಾರೆಂದು ತಿಳಿದು ಬಂದಿದೆ.
ಮಾಜಿ ಸಚಿವರಾದ ಜಬ್ಬರ್ ಖಾನ್ ಹೊನ್ನಾಳಿಗೆ ಹುಬ್ಬಳ್ಳಿ ಗ್ರಾಮಾಂತರ, ಸಗೀರ್ ಅಹಮದ್ ಗೆ ಚಿಕ್ಕಮಗಳೂರು, ಪ್ರೊ. ಮಮ್ತಾಜ್ ಆಲಿಖಾನ್ ಗೆ ಶಿವಾಜಿನಗರದಿಂದ ಕೆಜೆಪಿ ಟಿಕೆಟ್ ನೀಡಲಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಅಲ್ಪಸಂಖ್ಯಾತ ಸಮುದಾಯದ ಮತ್ತೊಬ್ಬ ಪ್ರಭಾವಿ ನಾಯಕ ಸಿ ಎಂ ಇಬ್ರಾಹಿಂ ಕೆಜಿಪಿ ಸೇರುವಂತೆ ಯಡಿಯೂರಪ್ಪ ಅವರು ಇಬ್ರಾಹಿಂ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಒಂದು ವೇಳೆ ಅವರು ಕೆಜೆಪಿ ಸೇರಿದರೆ ಭದ್ರಾವತಿ ಇಲ್ಲವೇ ಬೆಂಗಳೂರಿನ ಅವರು ಬಯಸುವ ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಲಿದ್ದಾರೆ ಎನ್ನಲಾಗಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಇದನ್ನರಿತ ಯಡಿಯೂರಪ್ಪ ಆ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ.












Click it and Unblock the Notifications