ಕೆಲ್ಸ ಬೇಕಂದ್ರೆ ಹುಡ್ಗೀರು ಆಕರ್ಷಕವಾಗಿರಬೇಕು:ಮುಲಾಯಂ

unattractive-rural-women-wont-benefit-mulayam-up
ಬಾರಾಬಂಕಿ, ನ.10: ನಿನ್ನೆ ಮತ್ತೊಬ್ಬ ಘನಂಧಾರಿ ರಾಜಕಾರಣಿ ನಮ್ಮ ಹಳ್ಳಿಯ ಹೆಣ್ಣುಮಕ್ಕಳ ಬಗ್ಗೆ ಕೇವಲವಾಘಿ ಮಾತನಾಡಿ, ಬಾಯಿಚಪಲ ತೀರಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಹುಡುಗಿಯರು ಬೆಡಗಿಯರಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಗುರುವಾರ ಮಹಿಳಾ ರ‍್ಯಾಲಿಯಲ್ಲಿ ಮಾತನಾಡುತ್ತಾ ಮುಲಾಯಂ ಹೀಗೆ ಹೇಳಿದ್ದಾರೆ: ಮಹಿಳಾ ಮೀಸಲು ಮಸೂದೆಯಿಂದ ಮುಂದುವರಿದ ವರ್ಗದ ಹುಡುಗಿಯರು/ಮಹಿಳೆಯರಷ್ಟೇ ಮೇಲೆ ಮೇಲೆ ಹೋಗುತ್ತಿರುತ್ತಾರೆ. ಆದರೆ ನಿಮ್ಮಂಥ ಬಡ ಮಹಿಳೆಯರು ಹಿಂದೆ ಹಿಂದಕ್ಕೆ ತಳ್ಳಲ್ಪಡುತ್ತಾರೆ. ಏಕೆಂದರೆ ನಿಮ್ಮಲ್ಲಿ (ಹಳ್ಳಿ ಮಹಿಳೆಯರಲ್ಲಿ) ಆಕರ್ಷಣೆ ಎಂಬೋದೆ ಇರೊಲ್ಲ.
Bade bade gharon ki ladkiya aur mahilayan kewal upar ja sakti hain...yaad rakhna...apko mauka nahi milega..hamare gaon ki mahila me akarshan itna nahin!

ಇದನ್ನು ಕೇಳಿಸಿಕೊಂಡ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್‌ ಅವರು 'ಮುಲಾಯಂ ಈ ಹೇಳಿಕೆ ಖಂಡನೀಯ. ಹಳ್ಳಿಯ ಮಹಿಳೆಯರನ್ನು ನೋಡುವ ಮುಲಾಯಂ ದೃಷ್ಟಿ ಬದಲಾಗಬೇಕು. ಆಕರ್ಷಕವಾಗಿರಬೇಕು ಎಂದರೆ ನಾವೇನು ಮಾರಾಟದ ವಸ್ತುವೆ? ಅಲ್ಲದೆ ಮುನ್ನುಗ್ಗುವ ಛಾತಿ ಎಲ್ಲ ಮಹಿಳೆಯರಲ್ಲೂ ಇದೆ' ಎಂದು ಮುಲಾಯಂರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಷಮೆಯಾಚಿಸೋಲ್ಲ- 'ರಾಮ' ಜೇಠ್ಮಲಾನಿ:
ಈ ಮಧ್ಯೆ, ಶ್ರೀರಾಮನ ಕುರಿತು ತಾವು ನೀಡಿರುವ ಹೇಳಿಕೆ ಬಗ್ಗೆ ತಮಗೆ ಯಾವುದೇ ವಿಷಾದವಿಲ್ಲ. ತನ್ನ ಹೇಳಿಕೆಗಾಗಿ ಕ್ಷಮೆಯಾಚಿಸುವುದಿಲ್ಲ. ತಮ್ಮ ಮಾತುಗಳನ್ನು ವಾಪಸ್ ತೆಗೆದುಕೊಳ್ಲುವುದೂ ಇಲ್ಲ ಎಂದು ಬಡಬಡಾಯಿಸಿರುವ ಹಿರಿಯ ವಕೀಲ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ 'ರಾಮ' ಜೇಠ್ಮಲಾನಿಗೆ ಮತ್ತೂ ಒಂದು ಸಂಶಯ ಕಾಡುತ್ತಿದೆಯಂತೆ! ರಾಮಾಯಣದ ನಾಯಕ ಇತಿಹಾಸ ಪುರುಷನೇ? ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.

ನಿನ್ನೆ ಟಿವಿ9ನಲ್ಲಿ ಖ್ಯಾತ ಜ್ಯೋತಿಷಿ ಸಚ್ಚಿದಾನಂದ ಬಾಬು ಒಂದು ಸಮಂಜಸ ಪ್ರಶ್ನೆಯನ್ನೇ ಎತ್ತಿದ್ದಾರೆ. 'ಆಯ್ತು, ಇದೇ ಜೇಠ್ಮಲಾನಿ ಬೇರೆ ಧರ್ಮದ ಯಾವುದಾದರೂ ಒಂದು ಪಾತ್ರಧಾರಿಯ ಬಗ್ಗೆ ಹೀಗೆ ಹೇಳಿಕೆ ನೀಡಿ ಅರಗಿಸಿಕೊಳ್ಳಲಿ ನೋಡೋಣ?' ಎಂದು ಸವಾಲು ಎಸೆದಿದ್ದಾರೆ. ಇದಕ್ಕೆ ಜೇಠ್ಮಲಾನಿಗೆ ಖಂಡಿತ ಜಾಣಗುರುಡು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+