ಪ್ರಿಯತಮೆಯ ಕಿಡ್ನಿ 10 ಲಕ್ಷಕ್ಕೆ ಮಾರಿದ ಪ್ರಿಯಕರ

ನಿನ್ನ ಒಂದು ಕಿಡ್ನಿ ಕೊಡಲು ಒಪ್ಪುವುದಾದರೆ ನಿನ್ನನ್ನು ಮದುವೆಯಾಗುತ್ತೇನೆ ಎನ್ನುವ ಪ್ರಿಯತಮನ ಮಾತಿಗೆ ಮರುಳಾದ ಹುಡುಗಿ ಮದುವೆಯೂ ಆಗದೆ ಕಿಡ್ನಿಯನ್ನೂ ಕಳೆದುಕೊಂಡು ಮೋಸ ಹೋಗಿದ್ದಾಳೆ.
ಈ ಸಂಬಂಧ ಕೊಲ್ಲಂ ನಗರದ ಉಲಿಯಕೋವಿಲ್ ನಿವಾಸಿ ಶಿವಕುಮಾರ್ ಎನ್ನುವನನ್ನು ನಗರದ ನಾರ್ತ್ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಮೋಸಹೋದ ಹುಡುಗಿಯ ಹೆಸರು ಮಂಜು ಆಲಿಯಾಸ್ ಚಿಂಚು.
ಈಕೆಯ ಕಿಡ್ನಿಯನ್ನು ತಿರುವನಂತಪುರಂನಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ತೆಗೆದು ಹತ್ತು ಲಕ್ಷ ರೂಪಾಯಿಗೆ ಶಿವಕುಮಾರ್ ಮಾರಾಟ ಮಾಡಿದ್ದ. ಕಿಡ್ನಿ ತೆಗೆಯಲು ಆಸ್ಪತ್ರೆಗೆ ಬೋಗಸ್ ದಾಖಲೆ ಒದಗಿಸಿದ್ದ ಎಂದು ಪೋಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಕೇರಳದಲ್ಲಿ ಕಿಡ್ನಿ ಮಾರಾಟ ದಂಧೆ ಅವ್ಯಾಹುತವಾಗಿ ನಡೆಯುತ್ತಿದ್ದು ಪೊಲೀಸರು ಈ ಸಂಬಂಧ ಮತ್ತಿಬ್ಬರನ್ನು ಬಂಧಿಸಿದ್ದಾರೆ.












Click it and Unblock the Notifications