• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣಾ ಚಿಹ್ನೆಗೆ ಕಾಯುತ್ತಿರುವ ಯಡಿಯೂರಪ್ಪ

By Mahesh
|

ಬೆಂಗಳೂರು, ನ.9 : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಿದ ಬೆನ್ನಲ್ಲೇ ಅಧಿಕೃತ ಚಿನ್ಹೆ ಪಡೆಯಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಜನತಾ ಪಕ್ಷಕ್ಕೆ 'ಸೈಕಲ್' ಅಥವಾ 'ಹೊಲ ಉಳುವ ರೈತ' ಚಿಹ್ನೆಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ.

ಈ ಹಿಂದೆ ಆಯುಧಪೂಜೆ ದಿನ(ಅ.23) ದಂದು 'ಹೊಸ ಪಕ್ಷದ ಹೆಸರು, ಚಿನ್ಹೆ ಕೋರಿ ಚುನಾವಣಾ ಆಯೋಗಕ್ಕೆ ನಾನು ಅರ್ಜಿ ಹಾಕಿಲ್ಲ. ಡಿಸೆಂಬರ್ ನಲ್ಲಿ ಹಾವೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಹೊಸ ಪಕ್ಷ ಘೋಷಣೆ ಮಾಡುತ್ತೇನೆ. ನಂತರ ಆಯೋಗಕ್ಕೆ ಅರ್ಜಿ ಹಾಕಲಾಗುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೆಜೆಪಿಗೆ ಯಾವ ಚಿಹ್ನೆ ಸಿಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಸೈಕಲ್ ಹಾಗೂ ಹೊಲ ಉಳುವ ರೈತನ ಚಿಹ್ನೆ ಅಂತಿಮವಾಗಿ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.

ಈಗಿನ ನಿಯಯದ ಪ್ರಕಾರ ರಾಷ್ಟ್ರೀಯ ಪಕ್ಷಗಳು ಹೊಂದಿರುವ ಚಿಹ್ನೆಗಳನ್ನು ಹೊರತುಪಡಿಸಿ ಯಾವುದೇ ಸ್ವತಂತ್ರ ಚಿಹ್ನೆಗಳನ್ನು ನೋಂದಾಯಿತ ಪ್ರಾದೇಶಿಕ ಪಕ್ಷಗಳು ಪಡೆಯಬಹುದಾಗಿದೆ.

ಚುನಾವಣಾ ಆಯೋಗದ ಸ್ವತಂತ್ರ ಪಟ್ಟಿಯಲ್ಲಿರುವ ಚಿಹ್ನೆಗಳನ್ನು ನೋಂದಾಯಿತ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಪಡೆಯಲು ರಾಜ್ಯಾದ್ಯಂತ ಪಡೆಯಲು ರಾಜ್ಯದಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ 10ಕ್ಕೂ ಹೆಚ್ಚು ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬೇಕು.

ಚುನಾವಣಾ ಅಯೋಗ ಪ್ರಾದೇಶಿಕ ಪಕ್ಷ ಒಟ್ಟು ವಿಧಾನಸಭಾ ಕ್ಷೇತ್ರದಲ್ಲಿ ಶೇ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಾವುದೇ ಪ್ರಾದೇಶಿಕ ಪಕ್ಷದ ಅಭ್ಯರ್ಥಿಯಾಗಲಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಆ ಪಕ್ಷಕ್ಕೆ ಸ್ವತಂತ್ರ ಪಟ್ಟಿಯಲ್ಲಿರುವ ಚಿಹ್ನೆಗಳನ್ನು ನೀಡಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷ ರಾಜ್ಯದಲ್ಲಿ ಸ್ವತಂತ್ರ ಪಟ್ಟಿಯಲ್ಲಿರುವ 'ಸೈಕಲ್' ಅಥವಾ 'ಹೊಲ ಉಳುವ ರೈತ' ಚಿಹ್ನೆ ಪಡೆಯಲು ನಿರ್ಧರಿಸಿದೆ.

ಪಕ್ಷಕ್ಕೆ ಚಿಹ್ನೆಯನ್ನು ಪಡೆಯುವ ಸಂಬಂಧ ಚುನಾವಣಾ ಆಯೋಗಕ್ಕೆ ಸದ್ಯದಲ್ಲೇ ಅರ್ಜಿ ಸಲ್ಲಿಸಲಾಗಿದೆ. ಇನ್ನು ದಿನದೊಳಗೆ ಪಕ್ಷಕ್ಕೆ ಚಿಹ್ನೆ ಲಭ್ಯವಾಗಲಿದೆ ಎಂದು ಪಕ್ಷದ ನೂತನ ಅಧ್ಯಕ್ಷ ಧನಂಜಯಕುಮಾರ್ ಹೇಳಿದ್ದಾರೆ.

ಚುನಾವಣಾ ಆಯೋಗದ ಕಾನೂನುಗಳ ಪ್ರಕಾರವೇ ಕೆಜೆಪಿ ಚುನಾವಣಾ ಚಿಹ್ನೆಯನ್ನು ಪಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.ಈ ಎರಡು ಚಿಹ್ನೆ ಸಿಗದಿದ್ದರೆ 'ಉದಯಿಸುತ್ತಿರುವ ಸೂರ್ಯ' ಪಡೆಯಲು ಪಕ್ಷ ಚಿಂತಿಸಿದೆ ಎಂದು ಧನಂಜಯ್ ಹೇಳಿದರು.

2011ರ ಏಪ್ರಿಲ್ 28ರಂದು ಪದ್ಮನಾಭ ಪ್ರಸನ್ನಕುಮಾರ್ ಎಂಬುವವರು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಸೈಕಲ್ ಗುರುತನ್ನೂ ಪಡೆದಿದ್ದಾರೆ. ಇದನ್ನೇ ಯಡಿಯೂರಪ್ಪ ಅವರು ಈಗ ಅಧಿಕೃತವಾಗಿ ತಮ್ಮ ಪಕ್ಷವನ್ನಾಗಿ ಘೋಷಿಸಲಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದಲ್ಲಿ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಿದ್ದರಿಂದ ಜನಮಾನಸದಲ್ಲಿ 'ಯಡಿಯೂರಪ್ಪ ಸೈಕಲ್' ಇನ್ನೂ ಭದ್ರವಾಗಿ ಕುಳಿತಿದೆ. ಹಾಗಾಗಿ ಯಡಿಯೂರಪ್ಪನವರು ಸೈಕಲ್ ಗುರುತನ್ನೇ ಪಡೆಯಲು ಇಚ್ಛಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former CM BS Yeddyurappa seeks Bicycle of Farmer ploughing symbol for his upcoming new regional party. Election commission of India is still has to approve regional party status and official symbol to Karnataka Janata Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more