ಶೆಟ್ಟರ್ 'ಸಮ್ಮಿಶ್ರ ಸರಕಾರಕ್ಕೆ' ಯಡಿಯೂರಪ್ಪ ವಾರ್ನಿಂಗ್

ಯಡಿಯೂರಪ್ಪ ಹೇಳಿದ್ದೇನು?
ನಾನು ಬಿಜೆಪಿ ಬಿಟ್ಟು ಯಾವಾಗಲೋ ಹೊರ ಬಂದಿದ್ದೇನೆ. ಹಾಗಾಗಿ ನನ್ನ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿರುವ ನೀವು (ಶೆಟ್ಟರ್) ಯಡಿಯೂರಪ್ಪ ಬೆಂಬಲಿತ ಸಮ್ಮಿಶ್ರ ಸರಕಾರ ನಡೆಸುತ್ತಿದ್ದೀರಿ. ನನ್ನ ಬೆಂಬಲಿಗ ಶಾಸಕರು/ಸಚಿವರು ನಿಮ್ಮ ಸರಕಾರದ ಬೆನ್ನಿಗೆ ಇದ್ದಾರೆ. ಒಂದು ವೇಳೆ ನೀವೇನಾದರೂ ಹೆಚ್ಚಿನ ಬುದ್ಧಿ ಉಪಯೋಗಿಸಿ ನನ್ನ ವಿರುದ್ಧ ಕತ್ತಿ ಮಸೆಯಲು ಮುಂದಾದರೆ ಹಾಲಿ ಸರಕಾರದ ಕಥೆ ಅಷ್ಟೇ.
ಹಾಗಾಗಿ ಈಗಿನ ಸರಕಾರ ಉಳಿಯುವುದು/ಬೀಳುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ನನ್ನ ಬೆಂಬಲಿಗರ ವಿರುದ್ಧ ಏನೇ ಕ್ರಮ ಕೈಗೊಂಡರೂ ಅದರ ಫಲ ಉಣ್ಣುವವರು ನೀವೇ ಎಂದು ಯಡಿಯೂರಪ್ಪ ಗರಮಾಗರಂ ಆಗಿ ಹೇಳಿದ್ದಾರೆ. ಗಮನಾರ್ಹವೆಂದರೆ ಮೊದಲ ಬಾರಿಗೆ, ಸ್ವತಃ ಯಡಿಯೂರಪ್ಪ ಅವರು ಶೆಟ್ಟರ್ ಸರಕಾರವನ್ನು ಸಮ್ಮಿಶ್ರ ಸರಕಾರ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ ಸರಕಾರದ ಕಾರ್ಯವೈಖರಿ ಬಗ್ಗೆ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ ಅವರು ಕಸ ಎತ್ತೋಕೆ ಯೋಗ್ಯತೆ ಇಲ್ಲದವರು ಅಧಿಕಾರದಲ್ಲಿ ಹೇಗೆ ಮುಂದುವರಿದ್ದೀರಿ? ನಾನಾಗಿದ್ದರೆ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡ್ತಿದ್ದೆ ಎಂದು ಗುರುವಾರ ಆರ್ಭಟಿಸಿದ್ದಾರೆ.












Click it and Unblock the Notifications