ಗಂಡನ ಕಿರುಕುಳ: ಅಮೆರಿಕದಲ್ಲಿ ಇಂಜಿನಿಯರ್ ಆತ್ಮಹತ್ಯೆ

ಮುನಗಲ ಸರಿತಾ ಅವರು 13 ತಿಂಗಳ ಹಿಂದೆ ಎಂಬಿಎ ಪದವೀಧರ ಅನ್ನಪ್ಪರೆಡ್ಡಿ ಸುಧೀರ್ ರೆಡ್ಡಿ ಎಂಬುವವರನ್ನು ಮದುವೆಯಾಗಿದ್ದರು. ಪತಿಯ ಜತೆಯಿರಲು ಅಕ್ಟೋಬರ್ 4 ರಂದು ಮುನಗಲ ಸರಿತಾ ಅಮೆರಿಕಕ್ಕೆ ತೆರಳಿದ್ದರು. ಮೊನ್ನೆ ಗುರುವಾರ ವಿಸ್ಕಾನ್ಸಿನ್ ಮ್ಯಾಡಿಸನ್ ಬಳಿಯಿರುವ ಪತಿಯ ಅಪಾರ್ಟ್ಮೆಂಟ್ ಮನೆಯಲ್ಲಿ ಕೇಬಲಿನಿಂದ ನೇಣು ಬಿಗಿದುಕೊಂಡು ಮುನಗಲ ಸರಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ತನ್ನ ಭಾವಮೈದುನ ಗೌರವ ರೆಡ್ಡಿಗೆ ಸರಿತಾ ಈ ಮೇಲ್ ಮೂಲಕ ರವಾನಿಸಿದ್ದ ಮರಣ ಪತ್ರದಿಂದ ಆಕೆಯ ಆತ್ಮಹತ್ಯೆ ವಿಷಯ ಬಹಿರಂಗವಾಗಿದೆ.
ಸರಿತಾ ಅವರ ತಂದೆ ಮುನಗಲ ಶ್ರೀನಿವಾಸ ರೆಡ್ಡಿ ಅವರು ನೆಲ್ಲೂರಿನ ಬುಚ್ಚಿರೆಡ್ಡಿಪಾಳ್ಯಂನಲ್ಲಿ ಎಸ್ ಬಿಐ ಶಾಖೆಯಲ್ಲಿ ಕ್ಯಾಷಿಯರ್ ಆಗಿದ್ದಾರೆ. ತಮ್ಮ ಮಗಳ ಸಾವಿಗೆ ಅಳಿಯ ಸುಧೀರನೇ ಕಾರಣ ಎಂದು ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ತನ್ನ ಮಗಳ ಸಾವಿನಿಂದ ಶೀಕ ಸಾಗರದಲ್ಲಿ ಮುಳುಗಿದ್ದ ಶ್ರೀನಿವಾಸ ರೆಡ್ಡಿ, ತನ್ನ ಮಗಳನ್ನು ಚೆನ್ನಾಗಿ ಓದಿಸಿ, ಇಂಜಿನಿಯರ್ ಮಾಡಿಸಿದ್ದೆ. ಅನವಿಗೆ ಇಷ್ಟವಿರಲಿಲ್ಲವೆಂದರೆ ಡೈವೋರ್ಸ್ ಪಡೆದು ಅವಳ ಬದುಕನ್ನು ಅವಳು ರೂಒಇಸಿಕೊಳ್ಳುತ್ತಿದ್ದಳು ಎಂದು ಅಲವತ್ತುಕೊಂಡಿದ್ದಾರೆ.
ಅಂದಹಾಗೆ ಸುಧೀರ್ ಗೆ ಅಮೆರಿಕದಲ್ಲಿ ನಿಕ್ಕಿ ಎಂಬ ಮಹಿಳೆಯ ಜತೆ ಲಿವಿಂಗ್ ಟುಗೆದರ್ ಸಂಬಂಧವಿದ್ದು, ವಿಚ್ಛೇದನ ನೀಡುವಂತೆ ಸರಿತಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.












Click it and Unblock the Notifications