ರುದ್ರಚಂಡಿ ಸ್ಯಾಂಡಿಯ ಹೊಡೆತಕ್ಕೆ ನ್ಯೂಯಾರ್ಕ್ ತತ್ತರ

Hurricane Sandy devastates New York
ಬೆಂಗಳೂರು, ಅ. 30 : ರುದ್ರಚಂಡಿ 'ಸ್ಯಾಂಡಿ'ಯ ಬಿರುಗಾಳಿಯಿಂದಾಗಿ ಅಪ್ಪಳಿಸುತ್ತಿರುವ ನಾಲ್ಕು ಮೀಟರ್ ಎತ್ತರದ ಸಮುದ್ರದ ಅಲೆಗಳ ರೌದ್ರನರ್ತನಕ್ಕೆ ನ್ಯೂಯಾರ್ಕ್ ನಗರ ತತ್ತರಿಸಿದೆ. 108 ವರ್ಷದಷ್ಟು ಹಳೆಯದಾಗಿರುವ ನ್ಯೂಯಾರ್ಕ್ ಸಬ್ ವೇ ವ್ಯವಸ್ಥೆ ಕಳೆದ ರಾತ್ರಿಯಂತಹ ದುರಂತವನ್ನು ಯಾವತ್ತೂ ಕಂಡಿಲ್ಲ, ಎಂದೂ ಎದುರಿಸಿಲ್ಲ. ಇದು ಅಮೆರಿಕಾ ಕಂಡ 'ಅತಿದೊಡ್ಡ ದುರಂತ' ಎಂದು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಬಣ್ಣಿಸಿದ್ದಾರೆ.

ಅಮೆರಿಕಾದ ಇಡೀ ಪೂರ್ವ ಕರಾವಳಿಯುದ್ದಕ್ಕೂ ಮನೆಮನೆಗಳಲ್ಲಿ ಸಮುದ್ರದ ನೀರು ನುಗ್ಗಿದೆ. ಲಕ್ಷಾಂತರ ಜನರು ನಿರ್ವಸಿತರಾಗಿದ್ದಾರೆ. ರಸ್ತೆ ತುಂಬ ಬುಡಸಮೇತ ಕಿತ್ತುಬಿದ್ದಿರುವ ಮರಗಳು. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಡಜನ್‌ಗೂ ಹೆಚ್ಚು ನಗರಗಳಲ್ಲಿನ 10 ಲಕ್ಷಕ್ಕೂ ಜನರನ್ನು ಸ್ಥಳಾಂತರಿಸಲಾಗಿದೆ. ಗುರುದ್ವಾರಾಗಳಲ್ಲಿ ಮನೆಮಠ ಕಳೆದುಕೊಂಡಿರುವ ಜನರು ಬೀಡುಬಿಟ್ಟಿದ್ದಾರೆ.

ಅಮೆರಿಕ ಎಂದೂ ಕಂಡರಿಯದಂತಹ ಭೀಕರ ಚಂಡಮಾರುತದಿಂದಾಗಿ ಅಮೆರಿಕದ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಹೊಡೆತ ನೀಡಲಿದೆ. ಎರಡು ದಿನಗಳಿಂದ ಅಮೆರಿಕಾದ ಹಣಕಾಸು ಮಾರುಕಟ್ಟೆಗಳು ಬಂದ್ ಆಗಿವೆ. ನವೆಂಬರ್ 6ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಪ್ರಚಾರಕ್ಕೂ ಬಿರುಗಾಳಿ ಅಡ್ಡಗಾಲು ಹಾಕಿದೆ. ಶಾಲೆಗಳಿಗೆ ಬೀಗ ಹಾಕಲಾಗಿದೆ, ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ, 13 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಬಲವಾದ ಬಿರುಗಾಳಿ 90 ಮೈಲು (145 ಕಿ.ಮೀ.) ವೇಗದಲ್ಲಿ ಬೀಸುತ್ತಿದೆ. 3ರಿಂದ 4 ಮೀಟರ್ ಎತ್ತರದ ಬಲಿಷ್ಠ ಕಡಲ ಅಲೆಗಳು ತೀರವನ್ನು ಅಪ್ಪಳಿಸುತ್ತಿವೆ. ಅತ್ಯಂತ ಸಂಕಷ್ಟಮಯ ಸ್ಥಿತಿಯಲ್ಲಿ ಇಂಥ ಪರಿಸ್ಥಿತಿ ಬಂದೊದಗಿದೆ. ಬಿರುಗಾಳಿ ಮಂಗಳವಾರ ಸಂಜೆಯ ಹೊತ್ತಿಗೆ ಕೆನಡಾವನ್ನು ಅಪ್ಪಳಿಸಲಿದೆ ಎಂದು ನ್ಯೂಯಾರ್ಕ್‌ನ ಬ್ರೂಕ್‌ಹೆವೆನ್‌ನಲ್ಲಿರುವ ಹವಾಮಾನ ಇಲಾಖೆಯ ತಜ್ಞ ಜೆಫ್ರಿ ಟಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿರ್ಜನವಾಗಿರುವ ರಸ್ತೆಗಳ ತುಂಬ ತುಂಬಿಕೊಂಡಿರುವ ನೀರಿನ ಮೇಲೆ ಗಿಡಮರಗಳು, ಕಸಕಡ್ಡಿಗಳು ತೇಲಾಡುತ್ತಿವೆ. ಸೇತುವೆಗಳನ್ನು ಬಂದ್ ಮಾಡಲಾಗಿದೆ. ಬೋಸ್ಟನ್‌ನಿಂದ ವಾಷಿಂಗ್ಟನ್ ನಡುವಿನ ಸಬ್‌ವೇ ಬಂದ್ ಮಾಡಲಾಗಿದೆ. ಈಸ್ಟ್ ರಿವರ್ ಕೆಳಗಿರುವ ಏಳು ಸಬ್‌ವೇ ಸುರಂಗದಲ್ಲೆಲ್ಲ ನೀರು ತುಂಬಿಕೊಂಡಿದೆ. ನ್ಯೂಯಾರ್ಕ್‌ನಲ್ಲಿಯೇ 7 ಜನರು ಸತ್ತಿದ್ದು, ಒಟ್ಟು 16 ಜನರು ಅಸುನೀಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ಜೀವನವೇ ನಿಂತನೀರಂತಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+