ಅಂತರ್ಜಾತಿ ವಿವಾಹ ಬಂಧನಕ್ಕೆ 53 ಲಕ್ಷ ರೂ. ಬಹುಮತಿ

ಮಹಾರಾಷ್ಟ್ರದ ಸಮಾಜ 'ಕಲ್ಯಾಣ' ಇಲಾಖೆಯು ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಅವಧಿಯಲ್ಲಿ 123 ಜೋಡಿಗಳು ಸತಿಪತಿಗಳಾಗಿದ್ದಾರೆ. ಇಲಾಖೆಯ ವತಿಯಿಂದ ಈ ದಂಪತಿಗೆ ಒಟ್ಟು 53 ಲಕ್ಷ ರೂಪಾಯಿ ಸಂದಾಯವಾಗಿದೆ.
2010ರ ಮುನ್ನ 24 ಜೋಡಿಗಳು ಸತಿಪತಿಗಳಾಗಿದ್ದಾರೆ. ತಲಾ ಜೋಡಿಗೆ 15 ಸಾವಿರ ಸಂದಾಯವಾಗಿದೆ. ತದನಂತರ, 2010ರ ಫೆಬ್ರವರಿಯಲ್ಲಿ ಮತ್ತಷ್ಟು ಸಕ್ರಿಯವಾದ ಇಲಾಖೆಯು ಯೋಜನೆಗೆ ತಿದ್ದುಪಡಿ ತಂದಿತು. ಅಲ್ಲಿಂದೀಚೆಗೆ 99 ಜೋಡಿಗಳು ಸಪ್ತಪದಿ ತುಳಿದವು. ಇದರಿಂದ ಜೋಡಿಗೆ ತಲಾ 50 ಸಾವಿರ ರೂ. ವಿತರಿಸಲಾಯಿತು.
ಅಂದಹಾಗೆ ಯೋಜನೆಗೆ ರಾಜ್ಯ ಸರಕಾರ ಶೇ. 50ರಷ್ಟು ಹಣ ನೀಡಿದರೆ ಕೇಂದ್ರವು ಉಳಿದ ಮೊತ್ತವನ್ನು ವಿತರಿಸುತ್ತದೆ. ಅಂದಹಾಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗ ಅಥವಾ ಅಲೆಮಾರಿ ಜನಾಂಗದ ವ್ಯಕ್ತಿಯನ್ನು ಹಿಂದೂ/ಬ್ರಾಹ್ಮಣ/ಲಿಂಗಾಯತ/ಜೈನ್ ಅಥವಾ ಸಿಖ್ ಸಮುದಾಯದ ವ್ಯಕ್ತಿಯನ್ನು ಮದುವೆಯಾದರೆ ಈ ಯೋಜನೆಯ ಫಲಾನುಭವಿಗಳಾಗಬಹುದು. ಅಂತಹ ದಂಪತಿಗೆ ಯೋಜನೆಯ ಧನ ಸಹಾಯ ಪ್ರಾಪ್ತಿಯಾಗುತ್ತದೆ.
ಮದುವೆ ಪ್ರಮಾಣ ಪತ್ರ, ವ್ಯಾಸಂಗದ ಪತ್ರ, ಮದುವೆ ಫೋಟೋ, ಸ್ಥಳೀಯ ಜನಪ್ರತಿನಿಧಿಯಿಂದ ಪತ್ರ, ಜಂಟಿ ಬ್ಯಾಂಕ್ ಖಾತೆ ವಿವರ, ರೇಶನ್ ಕಾರ್ಡ್ ಪ್ರತಿಯನ್ನು ಸೂಕ್ತ ಅರ್ಜಿಯೊಂದಿಗೆ ಇಲಾಖೆಗೆ ಸಲ್ಲಿಸಬೇಕು.
ಈ ರೀತಿ ಅರ್ಜಿ ಗುಜರಾಯಿಸಿ 6 ತಿಂಗಳಲ್ಲಿ ಮದುವೆ ಬಹುಮತಿ ಹಣ ದಂಪತಿಗೆ ಸಂದಾಯವಾಗುತ್ತದೆ. ಆದರೆ ಇದು ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನೂ ಅನೇಕ ದಂಪತಿಗೆ ಈ ಯೋಜನೆ ಅರಿವಿಗೆ ಬಂದಿಲ್ಲ.












Click it and Unblock the Notifications