'ದಾನ ಚಿಂತಾಮಣಿ' ಲಲಿತಾ ಟೀಎಸ್ಸಾರ್ ವಿಧಿವಶ

ಅವರು ಕೆಲದಿನಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. 'ಛೂಬಾಣ' ಅಂಕಣ ಖ್ಯಾತಿಯ ಟೀಎಸ್ಸಾರ್ ಮತ್ತು ಲಲಿತಾ ದಂಪತಿಗೆ ಮಕ್ಕಳಿರಲಿಲ್ಲ. ಮೃತರಿಗೆ ಇಬ್ಬರು ಸೋದರರು ಮತ್ತು ಇಬ್ಬರು ಸೋದರಿಯರು ಇದ್ದಾರೆ. ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಇಂದು (ಗುರುವಾರ) ಮೃತರ ಅಂತ್ಯಕ್ರಿಯೆ ನಡೆಯಿತು.
'ದಾನ ಚಿಂತಾಮಣಿ' ಲಲಿತಾ ಟೀಎಸ್ಸಾರ್: ಕಿದ್ವಾಯಿ ಆಸ್ಪತ್ರೆ ಸೇರಿದಂತೆ ನಾನಾ ಸಂಘ-ಸಂಸ್ಥೆಗಳಿಗೆ ಲಲಿತಾ ಅವರು ಸಾಕಷ್ಟು ಧನ ಸಹಾಯ ಮಾಡಿದ್ದಾರೆ. ಸಮಾಜ ಸೇವಾಸಕ್ತರಾಗಿದ್ದ ಲಲಿತಾ ಟೀಎಸ್ಸಾರ್, ಕಿದ್ವಾಯಿ ಆಸ್ಪತ್ರೆಯ ವಾರ್ಡ್ ಗಳ ನವೀಕರಣಕ್ಕೆ 60 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದರು.
ನವೀಕರಣಗೊಂಡ ವಾರ್ಡ್ ಉದ್ಘಾಟನೆಗೆ ಆಗಮಿಸಿದ್ದ ಧರ್ಮಸ್ಥಳದ ಡಾ. ವೀರೇಂದ್ರ ಹಗ್ಗಡೆ ಅವರು ಲಲಿತಮ್ಮನವರ ಪ್ರೇರಣೆಯಿಂದ 4.5 ಕೋಟಿ ರೂಪಾಯಿ ನೆರವನ್ನು ಘೋಷಿಸಿದ್ದರು.
ಕರ್ನಾಟಕ ಸರಕಾರವು ಟಿ.ಎಸ್. ರಾಮಚಂದ್ರರಾವ್ ಅವರ ಸ್ಮರಣಾರ್ಥ (ನಿಧನ- ಏಪ್ರಿಲ್ 1977) 'ಟೀಎಸ್ಸಾರ್ ಪ್ರಶಸ್ತಿ'ಯನ್ನು 1993 ರಿಂದ ಒಂದು ಲಕ್ಷ ರೂ ಮೊತ್ತದ ಬಹುಮಾನವನ್ನು ಪ್ರತಿ ವರ್ಷ ಅರ್ಹ ಪತ್ರಕರ್ತರಿಗೆ ಕೊಡಮಾಡುತ್ತಿದೆ.












Click it and Unblock the Notifications