ವೇಶ್ಯಾವಾಟಿಕೆ ಜಾಲದಿಂದ ವಿದೇಶಿ ಮಹಿಳೆಯರು ಪಾರು

ಇಂಟರ್ನೆಟ್ ಮುಖಾಂತರ ಈ ಮೂವರನ್ನು ಸಂಪರ್ಕಿಸಿ ಕಲನ್‌ಗುಟ್‌ನಲ್ಲಿರುವ ಡಿಸ್ಕೋಥೆಕ್‌ವೊಂದಕ್ಕೆ ಬಿಳಿ ಮಾರುತಿ ಕಾರಿನಲ್ಲಿ 9.45ರ ಸುಮಾರಿಗೆ ಕರೆತರುತ್ತಿರುವ ಸಂದರ್ಭದಲ್ಲಿ ಅವರನ್ನು ಪಾರು ಮಾಡಲಾಗಿದೆ. ಇಂಥ ಕೃತ್ಯ ನಡೆಯುತ್ತಿದೆ ಎಂದು ಸುಳಿವು ದೊರೆತ ಮೇರೆಗೆ ಪೊಲೀಸರು ದಾಳಿ ಮಾಡಿ ಕಾರಿನ ಚಾಲನನ್ನು ಬಂಧಿಸಿ, ಮಹಿಳೆಯರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ವಿದೇಶಿ ದಂಪತಿಗಳು ವೇಶ್ಯಾವಾಟಿಕೆ ಜಾಲ ಬೀಸಿದ್ದರು. ಕಿರ್ಗಿಸ್ತಾನದ ಕೊಲೋಪೋನ್ ಎರ್ಜೊನೋವೊ ಎಂಬಾತನನ್ನು ಶುಕ್ರವಾರ ಸಂಜೆ ಕಲನ್‌ಗುಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ತೆಗೆದುಕೊಂಡಿರುವ ಮೂವರು ಮಹಿಳೆಯರನ್ನು ವಿಚಾರಣೆ ಮುಗಿಯುವವರೆಗೆ ಸುರಕ್ಷಿತ ಸ್ಥಾನದಲ್ಲಿ ಇರಿಸಲಾಗಿದೆ.
ಇಂಟರ್ನೆಟ್ ಮುಖಾಂತರ ವಿದೇಶಿ ಮಹಿಳೆಯರ ಫೋನ್ ನಂಬರ್ ಸಂಗ್ರಹಿಸುತ್ತಿದ್ದ ಈ ದಂಪತಿಗಳು, ಫೋನ್ ನಂಬರ್ ನೀಡಿದ ಮಹಿಳೆಯರನ್ನು ಸಂಪರ್ಕಿಸಿ ತಮ್ಮ ಜಾಲದಲ್ಲಿ ಬೀಳಿಸುತ್ತಿದ್ದರು. ಯಾರಾದರೂ ಕರೆ ಸ್ವೀಕರಿಸದಿದ್ದರೆ ಅಂಥವರನ್ನು ಬಿಟ್ಟು ಬೇರೆ ಮಹಿಳೆಯರಿಗೆ ಜಾಲ ಬೀಸುತ್ತಿದ್ದರು. ಇಂಥ ಜಾಲ ಬೀಸಲಾಗಿದೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ಮಾಡಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಟರ್ನೆಟ್ಟಿನಲ್ಲಿ ಜನರಿಂದ ಫೋನ್ ನಂಬರ್ ಅಥವಾ ಈಮೇಲ್ ಐಡಿ ಮತ್ತು ವಿಳಾಸಗಳನ್ನು ಸಂಗ್ರಹಿಸುವುದು ಸರ್ವೇಸಾಮಾನ್ಯವಾಗಿದೆ. ಈ ಜಾಲದ ಅರಿವಿಲ್ಲದೆ ಅನೇಕ ಮಹಿಳೆಯರು ವೇಶ್ಯಾವಾಟಿಕೆಯ ಪಾಲಾಗುತ್ತಿದ್ದಾರೆ. ಹೀಗಾಗಿ, ಇಂಟರ್ನೆಟ್ಟಿನಲ್ಲಿ ವ್ಯವಹರಿಸುವಾಗ ಅಪರಿಚಿತರಿಗೆ ಅನಗತ್ಯವಾಗಿ ವಿಳಾಸ, ಫೋನ್ ನಂಬರ್ ನೀಡದಿರುವುದು ಉತ್ತಮ ಎಂದು ಪೊಲೀಸರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.












Click it and Unblock the Notifications