ಕಿಂಗ್ ಫಿಶರ್ ಏರ್ ಲೈನ್ಸ್ ಹಾರಾಟ ಬಂದ್: DGCA

vijay-mallya-kingfisher-airlines-grounded-dgca
ನವದೆಹಲಿ, ಅ.20: ಕೊನೆಗೂ ವಿಜಯ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಹಾರಾಟ ಬಂದ್ ಆಗಿದೆ. DGCA ಕಿಂಗ್ ಫಿಶರ್ ಹಾರಾಟವನ್ನು ತಕ್ಷಣದಿಂದ ಸ್ಥಗಿತಗೊಳಿಸಿ, ಈ ಆದೇಶ ನೀಡಿದೆ. ಇದರೊಂದಿಗೆ ಕಿಂಗ್ ಫಿಶರ್ ವಿಮಾನಗಳ ಇಂದ್ರ ವೈಭೋಗ ತಳಕಚ್ಚಿದಂತಾಗಿದೆ.

ಭಾರತ ಸರ್ಕಾರವು ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಶೇ. 49ರಷ್ಟು ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಒಂದು ತಿಂಗಳ ಹಿಂದಷ್ಟೆ ಅವಕಾಶ ಕಲ್ಪಿಸಿತ್ತು. ಆದರೆ FDI ಸಹ ಕಿಂಗ್ ಫಿಶರ್ ಒಡೆಯ ವಿಜಯ ಮಲ್ಯ ಅವರ ನೆರವಿಗೆ ಬಂದಿಲ್ಲ.

ಆರ್ಥಿಕ ಸಂಕಷ್ಟ ಮತ್ತು ಸಿಬ್ಬಂದಿ ಮುಷ್ಕರದಿಂದ ತತ್ತರಿಸಿ ಲಾಕೌಟ್‌ ಘೋಷಿಸಿರುವ ವಿಜಯ್‌ ಮಲ್ಯ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆಯ ಹಾರಾಟ ಪರವಾನಿಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂದು ರದ್ದುಗೊಳಿಸಿದೆ.

ತಿಂಗಳ ಹಿಂದೆಯೇ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಗಳ ಹಾರಾಟದ ಭವಿಷ್ಯ ಮಸುಕಾಗಿತ್ತು. ಸಂಸ್ಥೆಯ ಸಿಬ್ಬಂದಿ, ಇಂಜಿನಿಯರುಗಳು ನಿರಂತರವಾಗಿ ಮುಷ್ಕರದಲ್ಲಿ ತೊಡಗಿದ್ದರು. ಇದರಿಂದ ಪ್ರಯಾಣಿಕರಿಗೆ ಭಾರಿ ತೊಡಕುಂಟಾಗಿತ್ತು. ಇದರಿಂದ ಹೊರಬರಲು ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಎಂದು DGCA ಕೇಳಿತ್ತು.

ಆದರೆ ಈ ನೋಟಿಸ್ ಗೆ ಕಿಂಗ್ ಫಿಶರ್ ಸೂಕ್ತ ಉತ್ತರ ನೀಡುವ ಸ್ಥಿತಿಯಲ್ಲಿರಲ್ಲಿಲ್ಲ. ಸುರಕ್ಷಿತ, ಸಮರ್ಥ ಮತ್ತು ನಂಬಿಕಾರ್ಯ ಸೇವೆಯನ್ನೊದಗಿಸಲು ವಿಫಲವಾಗಿದೆ. ಆದ್ದರಿಂದ ಅನಿವಾರ್ಯವಾಗಿ ಇಂದಿನಿಂದ ಅಧಿಕೃತವಾಗಿ ಕಂಪನಿಯು ತನ್ನ ಯಾವುದೇ ವಿಮಾನವನ್ನು ಹಾರಾಟ ಮಾಡುವಂತಿಲ್ಲ ಎಂದು DGCA ಘೋಷಿಸಿತು.

ಸುಮಾರು 6 ತಿಂಗಳಿಂದ ಕಿಂಗ್ ಫಿಶರ್ ಒಡೆಯ ವಿಜಯ ಮಲ್ಯ ಆರ್ಥಿಕ ನಷ್ಟದ ಸುಳಿಗೆ ಸಿಲುಕಿದ್ದರು. ಇದರಿಂದ ಹೊರಬರಲು ಇತ್ತೀಚೆಗೆ ಅಖಂಡ ನಿಷ್ಠೆಯಿಂದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಪೂಜೆ ಸಲ್ಲಿಸಿ, ಚಿನ್ನದ ಬಾಗಿಲು ಅರ್ಪಿಸಿದ್ದರು. ಆದರೆ ಅದ್ಯಾವುದೂ ಮಲ್ಯ ಕೈಹಿಡಿದಿಲ್ಲ.

ಈ ಮಧ್ಯೆ, ಕಿಂಗ್ ಫಿಶರ್ ಒಡೆಯ ವಿಜಯ ಮಲ್ಯಗೆ ಅನೇಕ ಸಂಕಷ್ಟಗಳು ಎದುರಾಗಿವೆ. ಒಂದು ಚೆಕ್ ಬೌನ್ಸ್ ಕೇಸಿನಲ್ಲಿ ಪೊಲೀಸರು ಅವರನ್ನು ಬಂಧಿಸುವಂತೆ ಹೈದರಾಬಾದ್ ನ್ಯಾಯಾಲಯ ಆದೇಶಿಸಿದೆ. ಹಾಗೆಯೇ, ಕಿಂಗ್ ಫಿಶರ್ ಉದ್ಯೋಗಿ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+