ವೇಶ್ಯಾವಾಟಿಕೆ ಜಾಲ: ಐಪಿಎಲ್ ಚೀರ್ ಲೀಡರ್ ಸೆರೆ
ಪುಣೆ, ಅ.18: ಬಾಲಿವುಡ್ ಸ್ಟಾರ್ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ನಲ್ಲಿ ಚಿಯರ್ ಲೀಡರ್ ಆಗಿದ್ದ ಯುವತಿಯೊಬ್ಬಳನ್ನು ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸನಾ ಜೊತೆಗೆ ಆಕೆಗೆ ಗಿರಾಕಿ ಗಳನ್ನು ಒದಗಿಸುತ್ತಾ ದಳ್ಳಾಲಿ ಕೆಲಸ ಮಾಡುತ್ತಿದ್ದ ಮಾಡೆಲ್ ಸೀಮಾ ಜಗತಪ್ ಅವರನ್ನು ಕೂಡಾ ಬಂಧಿಸಲಾಗಿದೆ. ಗ್ರಾಹಕರಿಂದ ಪ್ರತಿ ರಾತ್ರಿ ಸೇವೆಗೆ ಸುಮಾರು 1.5 ಲಕ್ಷ ರು ವಸೂಲಿ ಮಾಡುತ್ತಿದ್ದರು. ಇದರ ಜೊತೆಗೆ ಹೋಟೆಲ್ ಬಿಲ್ ಹಾಗೂ ಇತರೆ ಖರ್ಚು ವೆಚ್ಚಗಳು ಪ್ರತ್ಯೇಕವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮಾನವ ಕಳ್ಳ ಸಾಗಣೆ ಕಾಯಿದೆ(Prevention of Immoral Trafficking Act) ಅನ್ವಯ ಸೆಕ್ಷನ್ 4,5 ಹಾಗೂ 8 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಕೊರೆಗಾವ್ ಪಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ರಾಹಕರ ಸೋಗಿನಲ್ಲಿ ಪೊಲೀಸ್ ಅಧಿಕಾರಿಗಳು ಸನಾ ಸಂಪರ್ಕ ಸಾಧಿಸಿದ್ದಾರೆ. ನಂತರ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ಬಾಲಿವುಡ್ ಸ್ಟಾರ್ ಒಡೆತನದ ಐಪಿಎಲ್ ತಂಡದ ಚಿಯರ್ ಲೀಡರ್ ಎಂದು ತಿಳಿದು ಬಂದಿದೆ.












Click it and Unblock the Notifications