ಬಿಎಸ್ ವೈಗೆ ಬುದ್ಧಿಭ್ರಮಣೆಯಾಗಿದೆ: ಎಚ್ ಡಿ ಕುಮಾರಸ್ವಾಮಿ

ಶೆಟ್ಟರ್ ಪ್ರಯಾಸಪಟ್ಟು ಸರ್ಕಾರ ನಡೆಸಿದ್ದು ಸಾಕು. ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ನಿಲ್ಲಲಿ. ಬಿಜೆಪಿ -ಜೆಡಿಎಸ್ ಮೈತ್ರಿ ಸಾಧ್ಯತೆ ಯಡಿಯುರಪ್ಪ ಅವರು ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಡಿಯೂರಪ್ಪ ಹೇಳಿಕೆಯಲ್ಲಿ ನಿಜಾಂಶವಿಲ್ಲ.
ಬಿಜೆಪಿ ಜೊತೆ ಕೈಜೋಡಿಸುವ ಪ್ರಮೇಯವೇ ಇಲ್ಲ. ಈ ರೀತಿ ಹೇಳಿಕೆ ನೀಡುವವರಿಗೆ ಬುದ್ಧಿಭ್ರಮಣೆಯಾಗಿರಬೆಕು. ಎಷ್ಟೇ ಪ್ರಾದೇಶಿಕ ಪಕ್ಷ ಬಂದರೂ ಜೆಡಿಎಸ್ ಗೆ ಧಕ್ಕೆಇಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ಮುಖಂಡರ ಕಿಡಿ: ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಇಂಥ ಹೇಳಿಕೆ ನೀಡುವುದು ಅವ್ರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತಿದೆ.
ಯಡಿಯೂರಪ್ಪ ಅವರು ಈಗ ಹತಾಶೆಗೊಂಡಿದ್ದಾರೆ. ಮಾನಸಿಕವಾಗಿ ದುರ್ಬಲವಾಗಿರುವುದರಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಜೆಡಿಎಸ್ ಉಪಾಧ್ಯಕ್ಷ ಎಂಡಿ ಚಂದ್ರಶೇಖರ್ ಹೇಳಿದ್ದಾರೆ.
ಬಿಎಸ್ ವೈ ಹೇಳಿದ್ದು ಏನು?: ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿದರೆ ನೋಡಲು ಆಗುವುದಿಲ್ಲ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜೆಡಿಎಸ್ ನ ಕೈಗೊಂಬೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಹಾದಿಯನ್ನೇ ಜಗದೀಶ್ ಶೆಟ್ಟರ್ ಅವರು ಹಿಡಿದಿದ್ದಾರೆ. ಆದರೆ, ನಾವೇ ಅವರನ್ನು ಸಿಎಂ ಕುರ್ಚಿಯ ಮೇಲೆ ಕೂರಿಸಿದ್ದರಿಂದ ಕೆಳಗಿಳಿಸುವ ಪ್ರಯತ್ನವನ್ನು ಮಾಡುವುದಿಲ್ಲ.
ಆದರೆ, ನನ್ನ ಬೆಂಬಲಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿದ್ದರೆ ಸುಮ್ಮನಿರುವುದಿಲ್ಲ. ಜೆಡಿಎಸ್ ಮಾತುಕೇಳಿಕೊಂಡು ಬಾಲಚಂದ್ರ ಜಾರಕಿಹೊಳಿಗೆ ಹೆಚ್ಚಿನ ಖಾತೆ ನೀಡಲು ಶೆಟ್ಟರ್ ಮುಂದಾಗಿದ್ದಾರೆ.
ನನ್ನ ಬೆಂಬಲಿಗರಿಗೆ ಸ್ಥಾನಮಾನ ಸಿಗಲಿ. ಹಾಗೂ ಧನಂಜಯಕುಮಾರ್ ಗೆ ಸಂಬಳ ನೀಡದಿದ್ದರೆ ಸುಮ್ಮನಿರಲ್ಲ. ಶೆಟ್ಟರ್ ಆವರು ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಲಿ ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದರು.
ಸುಮಾರು 40 ವರ್ಷದ ಬಿಜೆಪಿ ಸಖ್ಯವನ್ನು ಕಳೆದುಕೊಂಡು ಹೊಸ ಪಕ್ಷ ಸ್ಥಾಪಿಸುವ ಹೊಸ್ತಿಲಲ್ಲಿರುವ ಯಡಿಯೂರಪ್ಪ ಅವರು ಕೊಪ್ಪಳದಲ್ಲಿ ರೆಡ್ಡಿ ಸೋದರ
ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಲು ಒಲವು ತೋರಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ 2 ಜೊತೆ ಎಸ್ ಪಿ ಉತ್ತಮ ಬಾಂಧವ್ಯ ಹೊಂದಿದೆ.
ಹೀಗಾಗಿ ಯಡಿಯೂರಪ್ಪ ಅವರ ಬೆನ್ನ ಹಿಂದೆ ಕಾಂಗ್ರೆಸ್ ನಿಲ್ಲಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್ ಆರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಯಡಿಯೂರಪ್ಪ ಸಹವಾಸ ಸಾಕು ಎಂದು ಹೇಳಿದೆ.
ಹಾಗಾದರೆ ಯಡಿಯೂರಪ್ಪ ಹೇಳಿರುವ 'ಪ್ರಾದೇಶಿಕ ಪಕ್ಷ' ಯಾವುದು? ಹೊಸ ಪಕ್ಷಕ್ಕೆ ಆರ್ಥಿಕ ನೆರವು ಸಿಕ್ಕಿದ್ದು ಎಲ್ಲಿಂದ? ರಾಷ್ಟ್ರೀಯ ಪಕ್ಷ ಬಿಎಸ್ ವೈಗೆ ನೆರಳಾಗಿ ನಿಲ್ಲುತ್ತದೆಯೇ? ಈ ಬಗ್ಗೆ ಮುಂದಿನ ಲೇಖನದಲ್ಲಿ ನಿರೀಕ್ಷಿಸಿ....












Click it and Unblock the Notifications