ಅ.13ರಂದು ಬೆಂಗಳೂರು ವಿಕಿಪೀಡಿಯಾ 50ನೇ ಸಭೆ

ಇದು ವಿಕಿಪೀಡಿಯಾ ಸದಸ್ಯರೆಲ್ಲ ಮತ್ತೊಮ್ಮೆ ಸೇರಿ ಉಭಯ ಕುಶಲೋಪರಿ ವಿಚಾರಿಸಲೊಂದು ಸುಸಂದರ್ಭ. ಜೊತೆಗೆ ವಿಕಿಪೀಡಿಯಾ ಬಗ್ಗೆ ಆಸಕ್ತಿಯುಳ್ಳವರು, ವಿಕಿಸ್ನೇಹಿತರನ್ನು ಗಳಿಸಿಕೊಳ್ಳಬೇಕು ಎಂಬ ಆಸೆಯುಳ್ಳವರು, ವಿಕಿಪೀಡಿಯಾ ಸದಸ್ಯರಾಗಬಯಸುವವರು ಈ ಸಭೆಯಲ್ಲಿ ಭಾಗವಹಿಸಬಹುದಾಗಿದೆ. ಶನಿವಾರ ಸಂಜೆ 4ರಿಂದ 7ರವರೆಗೆ ವಿಚಾರ ಸಂಕಿರಣ, ನಾನಾ ವಿಷಯಗಳ ಬಗ್ಗೆ ಚರ್ಚೆ. ನಡೆಯಲಿದೆ.
ಕಾರ್ಯಕ್ರಮದ ವಿವರ
* 'ದಕ್ಷಿಣ ಏಷ್ಯಾದಲ್ಲಿ ವಿಕಿಪೀಡಿಯಾ ಸ್ಥಿತಿಗತಿ' ಕುರಿತು ಬಿಶಾಖಾ ದತ್ತ (ವಿಕಿಪೀಡಿಯಾ ಫೌಂಡೇಷನ್, ಬೋರ್ಡ್ ಸದಸ್ಯೆ) ಅವರಿಂದ ಪ್ರಾಸ್ತಾವಿಕ ಭಾಷಣ.
* 'ಭಾರತದಲ್ಲಿ ವಿಕಿಪೀಡಿಯಾದ ಭವಿಷ್ಯ ಮತ್ತು ಅವಕಾಶಗಳು' ವಿಷಯ ಕುರಿತು ವಿಚಾರ ಸಂಕಿರಣ. ಭಾಗವಹಿಸುತ್ತಿರುವವರು - ಅಚಲ್ ಪ್ರಭಲಾ, ಅರುಣ್ ರಾಮರತ್ನಂ, ಬಿಶಾಖಾ ದತ್ತ, ಗೌತಮ್ ಜಾನ್, ನಿಶಾಂತ್ ಷಾ.
* 'ವಿಕಿ ಲೌನ್ಸ್ ಮೌಂಟೇನ್ಸ್' ಗಿನ್ನಿಸ್ ಬುಕ್ ದಾಖಲಾದ ಪುಸ್ತಕ ಕುರಿತು ಮಾತುಕತೆ. ಮಾತನಾಡುವವರು - ನವೀನ್ ಫ್ರಾನ್ಸಿಸ್ ಮತ್ತು ಕಾರ್ತಿಕ್ ನಾಡಾರ್.
* 'ದಿ ಮೆಕ್ಯಾನಿಕ್ಸ್ ಆಫ್ ರನ್ನಿಂಗ್ ವಿಕಿಪೀಡಿಯಾ ಮೀಟಪ್ಸ್ ಇನ್ ಬೆಂಗಳೂರು' ವಿಷಯ ಕುರಿತು ಟಿನು ಚೆರಿಯನ್ ಅವರಿಂದ ಭಾಷಣ.
* ಭಾರತದ ವಿಕಿಪೀಡಿಯಾ ಶಾಖೆಯ ಹೊಸ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರ ಪರಿಚಯ.
ಕಾರ್ಯಕ್ರಮ ನಡೆಯುವ ಸ್ಥಳ
ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್
ಸದರ್ನ್ ರೀಜನಲ್ ಸೆಂಟರ್,
4ನೇ ಮುಖ್ಯರಸ್ತೆ, ದೊಮ್ಮಲೂರು ಕ್ಲಬ್ ಹತ್ತಿರ
ದೊಮ್ಮಲೂರು 2ನೇ ಹಂತ
ಬೆಂಗಳೂರು - 560 071.











Click it and Unblock the Notifications