ಮಲ್ಪೆ ಬೀಚಿನಲ್ಲಿ ಚನ್ನಪಟ್ಟಣದ ಅಮ್ಮ-ಮಗಳ ಆತ್ಮಹತ್ಯೆ

channapatna-mother-daughter-suicide-malpe-mary-beach
ಉಡುಪಿ, ಅ.10: ಮೊನ್ನೆ ಸೋಮವಾರ ಮಧ್ಯಾಹ್ನ ಸೆಂಟ್ ಮೇರಿ ದ್ವೀಪದಲ್ಲಿ ಒಬ್ಬ ಮಹಿಳೆ ಮತ್ತು ಯುವತಿಯ ಶವಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿಜ್ಕಕೂ ಅದೊಂದು ಕರುಣಾಜನಕ ಕಥೆ.

ಅದಕ್ಕೂ ಮೊದಲು, ಸೀರೆಯುಟ್ಟಿದ್ದ 38 ವರ್ಷ ವಯಸ್ಸಿನ ಮಹಿಳೆ ಮತ್ತು ಟಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದ 11 ವರ್ಷದ ಬಾಲಕಿಯ ಶವ ಮಲ್ಪೆ ಬೀಚಿನಲ್ಲಿ ಕೊರಕಲು ಕಲ್ಲುಗಳ ಮಧ್ಯೆ ಬಿದ್ದಿತ್ತು ಎಂದು ವರದಿಯಾಗಿತ್ತು. ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವರಮಹಾಲಕ್ಷ್ಮಿ ಮತ್ತು ಗಗನ ಅವರನ್ನು ರಾಮನಗರ ಜಿಲ್ಲೆ ಚನ್ನಪಟ್ಟಣದ ಅಮ್ಮ-ಮಗಳು ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇವರಿಬ್ಬರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಅಕ್ಟೋಬರ್ 8ರಂದು ಇವರಿಬ್ಬರೂ ಸೆಂಟ್ ಮೇರಿ ದ್ವೀಪಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಕಾರಣವೇನು?: ಇಬ್ಬರೂ ಗೌರವಸ್ಥ ಕುಟುಂಬದವರು. 2 ತಿಂಗಳ ಹಿಂದೆ ಚನ್ನಪಟ್ಟಣದ ಬಿಜೆಪಿ ಕೌನ್ಸಿಲರ್ ಗಂಗಾಧರ್ ಮತ್ತು ವರಮಹಾಲಕ್ಷ್ಮಿ ಅವರ ಏಕೈಕ ಪುತ್ರ ಚಂದನ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಇದರಿಂದ ದಂಪತಿ ತುಂಬಾ ನೊಂದಿದ್ದರು. ವರಮಹಾಲಕ್ಷ್ಮಿ ಅವರ ಪತಿ ಗಂಗಾಧರ್ ಅವರಂತೂ ಹಾಸಿಗೆ ಹಿಡಿದಿದ್ದರು. ಇದು ವರಮಹಾಲಕ್ಷ್ಮಿ ಅವರನ್ನು ಮತ್ತಷ್ಟು ಘಾಸಿಗೊಳಿಸಿತ್ತು.

ಇದರಿಂದ ಮುಕ್ತಿ ಪಡೆಯಲು ವರಮಹಾಲಕ್ಷ್ಮಿ ಅವರು ತಮ್ಮ ಏಕೈಕ ಪುತ್ರಿಯ ಜತೆ ದೂರದ ಸೆಂಟ್ ಮೇರಿ ದ್ವೀಪಕ್ಕೆ ಬಂದವರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿಗೆ ಧುಮುಕುವ ಮುನ್ನ ಮನೆಯವರಿಗೆ ಮೊಬೈಲ್ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+