ಗೆಳತಿಗೆ ಕಳಂಕ: ಯುಎಸ್ ಮಹೀಂದ್ರಾ ಸತ್ಯಂ ಟೆಕ್ಕಿ ಸೆರೆ

28 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಸಾಯಿ ಕುಮಾರ್ ಬಂಧಿತ ಆರೋಪಿ. ಬಾಧಿತ ಮಹಿಳೆಯು ಮಾಜಿ ಸಹೋದ್ಯೋಗಿ ಸಾಯಿ ಕುಮಾರ್ ಯಾಗಿದ್ದು, ಈ ಹಿಂದೆ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳು. ಇದರಿಂದ ವ್ಯಘ್ರಗೊಂಡ ಸಾಯಿಕುಮಾರ್ ದ್ವೇಷ ಸಾಧಿಸಲು ಹೀಗೆಲ್ಲ ಮಾಡಿದ್ದಾನೆ ಎಂದು ಸಿಐಡಿ ಹೆಚ್ಚುವರಿ ಡಿಜಿಪಿ ಎಸ್ ವಿ ರಮಣ ಮೂರ್ತಿ ತಿಳಿಸಿದ್ದಾರೆ.
ಮೂರು ವರ್ಷದ ಹಿಂದೆ ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿರುವಾಗ ಗೆಳಯರಾದರು. ಆ ಸಂದರ್ಭದಲ್ಲೇ ಗೆಳೆತನವನ್ನು ಪ್ರೇಮಕ್ಕೆ ತಿರುಗಿಸಿದ ಸಾಯಿಕುಮಾರ್ ಆಕೆಯ ಮುಂದೆ ತನ್ನ ಪ್ರೇಮವನ್ನು ತೋಡಿಕೊಂಡಿದ್ದ. ಆದರೆ ಆಕೆ ಒಲ್ಲೆ ಎಂದಿದ್ದಳು.
'ಇದರಿಂದ ಬೇಸತ್ತ ಸಾಯಿ ಕುಮಾರ್ ಆಕೆಯ ಮೇಲೆ ಬ್ಲ್ಯಾಕ್ ಮೇಲ್ ಮಾಡತೊಡಗಿದ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ. ಆದರೆ ಆಕೆ ಧೈರ್ಯದಿಂದ ನೇರವಾಗಿ ಸಾಯಿ ಕುಮಾರನನ್ನು ಮಾತನಾಡಿಸಿ, ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು' ಎಂದು ರಮಣ ಮೂರ್ತಿ ಹೇಳಿದ್ದಾರೆ.
ಆದರೆ 2011ರಲ್ಲಿ ಸಾಯಿ ಕುಮಾರ್ ಅಮೆರಿಕಕ್ಕೆ ತೆರಳುತ್ತಿದ್ದಂತೆ ಆಟ ಶುರುವಿಟ್ಟುಕೊಂಡ. ಆಕೆಯ ಹೆಸರಿಗೆ ಕೆಟ್ಟ ಕೆಟ್ಟದಾಗಿ ಇಮೇಲ್ ಬರೆಯುವುದು. ಅಶ್ಲೀಲ ಚಿತ್ರಗಳನ್ನು ಕಳಿಸುವುದು. ಆಕೆಯ ಸ್ನೇಹಿತರು-ಬಂಧುಗಳಿಗೂ ಇಂತಹ ಸಂದೇಶಗಳನ್ನೇ ಕಳುಹಿಸಿ ತೊಡಗಿದ. ಇದಕ್ಕಾಗಿ ಆಕೆಯ ಇಮೇಲ್ ಹ್ಯಾಕ್ ಮಾಡಿದ್ದ.
ಈ ಬಗ್ಗೆ ದೂರು ಬಂದ ತಕ್ಷಣ ಸಿಐಡಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಆದರೆ ತನ್ನ ಗುರುತು/ ಅಸ್ತಿತ್ವವನ್ನು ಪತ್ತೆಯಾಗಬಾರದೆಂದು ಆತ ನಕಲಿ ಸರ್ವರ್ ಮೂಲಕ ಹೀಗೆ ಮಾಡುತ್ತಿದ್ದ. ಕೊನೆಗೆ ಸಂದರ್ಭ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ ಪೊಲೀಸರು ಆತನಿಗಾಗಿ ಬಲೆ ಬೀಸಿದರು. ನಿನ್ನೆ ಸಾಯಿ ಕುಮಾರ್ ಅಮೆರಿಕದಿಂದ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಸಿಐಡಿ ಪೊಲೀಸರ ವಶವಾದ.












Click it and Unblock the Notifications