ಸೋನಿಯಾ ಗಾಂಧಿಗೆ ನೊಬೆಲ್ ಶಾಂತಿ ಪಾರಿತೋಷಕ?

ಈ ಮಧ್ಯೆ, ಆಡಳಿತಾರೂಢ UPA ಅಧ್ಯಕ್ಷೆಯೂ ಆಗಿರುವ CP ಸೋನಿಯಾ ಗಾಂಧಿ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಂತೆ ದೆಹಲಿ ಮೂಲದ ಸಂಸ್ಥೆಯೊಂದು ಶಿಫಾರಸ್ಸು ಮಾಡಿದೆ.
International Awakening Centre ಎಂಬ ಈ ಸಂಸ್ಥೆಯು ಶಾಂತಿದೂತ ಸೋನಿಯಾಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವಂತೆ ತಿಳಿಸಿದೆ. 'ಸೋನಿಯಾ ಗಾಂಧಿ ಅವರು ವಿಶ್ವ ಶಾಂತಿ ಪ್ರಿಯರು. ಅವರೊಬ್ಬ ಅದ್ಭುತ ಸಾಮಾಜಿಕ ಕಾರ್ಯಕರ್ತೆ. ಹಾಗಾಗಿ ಸೋನಿಯಾಗೆ ನೊಬೆಲ್ ಶಾಂತಿ ನೀಡುವಂತೆ' ಸಂಸ್ಥೆ ಸೂಚಿಸಿದೆ.
ಸಂಸ್ಥೆಯು ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಗೆ ಈ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ, ನಾರ್ವೆಯಲ್ಲಿರುವ ನೊಬೆಲ್ ಪ್ರಶಸ್ತಿ ಸಂಸ್ಥೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಸಂಸ್ಥೆ ಹೇಳಿದೆ.
ಸಂಸ್ಥೆಯ ಪ್ರಸ್ತಾವನೆಗೆ ಮನ್ನಣೆ ಸಿಕ್ಕಿ ಸೋನಿಯಾಗೆ ನೊಬೆಲ್ ಶಾಂತಿ ದಕ್ಕುತ್ತದೋ ಇಲ್ಲವೋ ಎಂಬ ಕುತೂಹಲ ತಣಿಯಲಿ ಮುಂದಿನ ಶುಕ್ರವಾರದರವರೆಗೂ (ಅ. 12) ಕಾಯಬೇಕು. ಏಕೆಂದರೆ ಅಂದು 2012ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಲಭಿಸಿತು ಎಂಬುದು ಇಡೀ ಜಗತ್ತಿಗೆ ತಿಳಿಯಲಿದೆ.












Click it and Unblock the Notifications