ಕುಡಿ ಬೇಡ್ವೋ ಎಂದು ಅಮ್ಮ ಬೈದಿದ್ದಕ್ಕೆ ಆತ್ಮಹತ್ಯೆ

 Student Tilak suicide Hassan
ಹಾಸನ, ಅ.4: ಸ್ನೇಹಿತರ ಬಲವಂತಕ್ಕೆ ಮದ್ಯಪಾನ ಮಾಡಿ ಬಂದ ಮಗನನ್ನು ಆತನ ತಾಯಿ ಬೈದಿದ್ದೇ ತಪ್ಪಾಗಿ ಹೋಯಿತು. ಭಾವನಾತ್ಮಕ ಜೀವಿಯಾಗಿದ್ದ ಹುದುಗ, ತನ್ನ ಅಮ್ಮ ಹೇಳಿದ ಬುದ್ಧಿ ಮಾತು ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ನಗರಸಭೆಯ ಮಾಜಿ ಸದಸ್ಯ ಎಚ್.ಆರ್.ಎನ್. ಕಂಠಿ ಅವರ ಸಹೋದರ, ಕೃಪೇಶ್ ಅವರ ಮಗ ಇಂಜಿನಿಯರಿಂಗ್ ವಿದ್ಯಾರ್ಥಿ 23 ವರ್ಷದ ತಿಲಕ್. ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಾರಾಂತ್ಯದಲ್ಲಿ ತನ್ನ ಗೆಳೆಯರೊಡನೆ ಪುರದಮ್ಮ ಮತ್ತು ಜೇನುಕಲ್ ಸಿದ್ದೇಶ್ವರ ಬೆಟ್ಟಕ್ಕೆ ಹೋಗಿ ಬಂದಿದ್ದನು. ಹೊರಗಡೆ ಸುತ್ತಾಟಕ್ಕೆ ಹೋಗಿ ಸೋಮವಾರ ಮುಂಜಾನೆ ಮನೆಗೆ ಬಂದಾಗ ಆತನ ಸ್ಥಿತಿ ಕಂಡು ಹೌಹಾರಿದ ಆತನ ತಾಯಿ ಬುದ್ಧಿವಾದ ಹೇಳಿದ್ದಾರೆ.ಇದರಿಂದ ಮಂಕಾಗಿ ಹೋದ ತಿಲಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಯುವ ಬಗ್ಗೆ ಗೆಳತಿಗೆ ಹೇಳಿದ್ದ: ಫ್ಯಾನಿಗೆ ಶೆರ್ವಾನಿಯಲ್ಲಿ ನೇಣು ಬಿಗಿದುಕೊಂಡು ತಿಲಕ್ ಸಾಯುವ ಮುನ್ನ ತನ್ನ ಗೆಳತಿಗೆ ಕರೆ ಮಾಡಿದ್ದಾನೆ. ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ತಿಲಕ್ ವ್ಯಾಸಂಗ ಮಾಡುತ್ತಿದ್ದನು.

ಶೆರ್ವಾನಿಯಿಂದ ಆತ್ಮಹತ್ಯೆ ಮಾಡಿಕೊಂಡರೆ ಸಾಯಬಹುದೇ ಎಂದು ತನ್ನ ಸ್ನೇಹಿತನಿಗೆ ಫೋನಿನಲ್ಲಿ ತಿಲಕ್ ಕೇಳಿದ್ದಾನೆ.

ತಿಲಕ್ ಏನೋ ಅನಾಹುತ ಮಾಡಿಕೊಳ್ಳುತ್ತಿದ್ದಾನೆ ಎಂಬ ಸುಳಿವು ಆ ಹುಡುಗಿಗೆ ಗೊತ್ತಾಗಿದೆ. ತಕ್ಷಣವೇ ಆ ಹುಡುಗಿ ಇತರೆ ಸ್ನೇಹಿತರಿಗೆ ವಿಷಯ ತಿಳಿಸಿದ್ದಾಳೆ. ಸ್ನೇಹಿತರು ಬರುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ತಿಲಕ್ ಬಾಗಿಲು ಹಾಕಿಕೊಂಡು ಒಂದೂವರೆ ಗಂಟೆಗೂ ಅಧಿಕ ಒಬ್ಬಂಟಿಯಾಗಿ ರೋದಿಸಿದ್ದಾನೆ. ನಂತರ ಗೆಳತಿಗೆ ಕರೆ ಮಾಡಿ ಸಾಯುವ ನಿರ್ಧಾರ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.

ತಿಲಕ್. ತುಂಬಾ ಒಳ್ಳೆಯ ಹುಡುಗ. ನಾಯಕತ್ವ ಗುಣ ಹೊಂದಿದ್ದನು. ಆದರೆ ಭಾವನಾತ್ಮಕ ಜೀವಿಯಾಗಿದ್ದ. ಆತನ ಸ್ನೇಹಿತರೊಂದಿಗೆ ಮದ್ಯ ಪಾನ ಮಾಡಿದ್ದ. ಆದರೆ ಮದ್ಯಪಾನದ ಅಭ್ಯಾಸ ಇರಲಿಲ್ಲ ಎಂದು ಗೆಳಯರು ಹೇಳಿದ್ದಾರೆ.

ಮದ್ಯಪಾನ ಮಾಡಿದ್ದಕ್ಕಾಗಿ ತಿಲಕ್ ನ ತಾಯಿ ಆಕ್ಷೇಪವೆತ್ತಿದರು. ಆಗಾಗ್ಗೆ ಹಲವು ಬಾರಿ ಮಗನಿಗೆ ಬುದ್ಧಿ ಕೂಡ ಹೇಳುತ್ತಿದ್ದರು. ಮಗನ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ತಿಲಕ್ ಗೆ ಇದು ಕಿರಿಕಿರಿ ಎನಿಸಿರಬಹುದು. ತಾಯಿಗೆ ಈತನ ಮೇಲೆ ಅಗಾಧವಾದ ಪ್ರೀತಿ ಇತ್ತು ಎಂದು ತಿಳಿದು ಬಂದಿದೆ.

ಓದಿನಲ್ಲಿ ಅಷ್ಟೇನೂ ಚುರುಕಾಗಿರಲಿಲ್ಲ. ಒಟ್ಟಾರೆ ಒಳ್ಳೆಯ ಹುಡುಗ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+