ಗಾಂಧಿ ಅಹಿಂಸೆ ವಿರೋಧಿಸಿ ದಲಿತರ ಚಿಕನ್ ಫೆಸ್ಟ್

Chicken festival to oppose Gandhi's ahimsa
ಹೈದರಾಬಾದ್, ಅ. 3 : ವಾಕ್ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಪಡಿಸಲು, ಪ್ರತಿಭಟನೆ ವ್ಯಕ್ತಪಡಿಸಲು ಎಲ್ಲರಿಗೂ ಹಕ್ಕಿದೆ. ಹಾಗಂತ, ಮಹಾತ್ಮ ಗಾಂಧಿಯವರ 'ಅಹಿಂಸಾ' ನೀತಿಯನ್ನು 'ಚಿಕನ್ ಫೆಸ್ಟಿವಲ್' ನಡೆಸುವ ಮೂಲಕ ಪ್ರತಿಭಟಿಸುವುದು ಸರಿಯೆ?

ಹೈದರಾಬಾದ್‌ನಲ್ಲಿರುವ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯಕ್ಕೆ ಸೇರಿದ ದಲಿತ ಮತ್ತು ಹಿಂದುಳಿದ ಜನಾಂಗಕ್ಕೆ ಸೇರಿದ ನೂರಾರು ವಿದ್ಯಾರ್ಥಿಗಳು ಅಕ್ಟೋಬರ್ 2 ಮಹಾತ್ಮ ಗಾಂಧಿ ಜಯಂತಿಯಂದು, ಕೋಳಿ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸುವ ಮುಖಾಂತರ, ಗಾಂಧೀಜಿಯವರ ಅಹಿಂಸಾ ನೀತಿಗೆ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪಿತ ಗಾಂಧೀಜಿಯ ಗೌರವಾರ್ಥವಾಗಿ ದೇಶದೆಲ್ಲೆಡೆ ಮದ್ಯ ಮಾರಾಟ ಮತ್ತು ಪ್ರಾಣಿಬಲಿಯನ್ನು ಅನೇಕ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಹಾಗಿದ್ಯಾಗ್ಯೂ, ಈ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತ್ರಿವೇಣಿ ಹಾಸ್ಟೆಲ್‌ನಲ್ಲಿ, ಮಾಂಸಾಹಾರ ಮಾರಾಟವನ್ನು ನಿಷೇಧಿಸಿದ್ದನ್ನು ವಿರೋಧಿಸಿ ಚಿಕನ್ ಫೆಸ್ಟಿವಲ್ ಆಚರಿಸಿದರು.

ಗಾಂಧೀಜಿಯವರು ಮನುಸ್ಮೃತಿಯನ್ನು ಬೆಂಬಲಿಸುತ್ತಿದ್ದುದೇ ಒಂದು ರೀತಿಯ ಹಿಂಸಾತ್ಮಕ ಆಚರಣೆಯಿದ್ದಂತೆ ಎಂದು ಆ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಲಿತರ ಉದ್ಧಾರಕ್ಕಾಗಿ ಸಾಕಷ್ಟು ದುಡಿದಿದ್ದ ಮಹಾತ್ಮ ಗಾಂಧಿಯವರ ಅಹಿಂಸಾ ನೀತಿಯನ್ನೇ ದಲಿತ ವಿದ್ಯಾರ್ಥಿಗಳು ಹಿಂಸಾತ್ಮಕವಾಗಿ ವಿರೋಧಿಸಿದ್ದು ನಾಚಿಕೆಗೇಡಿನ ಸಂಗತಿ ಎಂದು ಬುದ್ಧಿಜೀವಿಗಳು ಹೇಳಿದ್ದಾರೆ.

ಗಾಂಧೀಜಿಯವರ ಜಾತಿವಾದವನ್ನು ದಲಿತರನ್ನು ಉದ್ಧಾರ ಮಾಡಲು ಶ್ರಮಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರೇ ವಿರೋಧಿಸಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಕೋಳಿ ಉತ್ಸವವನ್ನು ಮಾದಿಗ ವಿದ್ಯಾರ್ಥಿಗಳ ಒಕ್ಕೂಟ, ಬಹುಜನ ಸ್ಟುಡೆಂಟ್ಸ್ ಫ್ರಂಟ್, ಎಸ್‌ಸಿ ಎಸ್‌ಟಿ ವಿದ್ಯಾರ್ಥಿ ಸಂಗಂ, ತೆಲಂಗಾಣ ವಿದ್ಯಾರ್ಥಿ ಸಂಘಗಳು ಆಯೋಜಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+