ಪಿಎಂ ಕೊಟ್ಟ ತೀರ್ಪು ಅವಿದ್ಯಾವಂತನೂ ನೀಡೊಲ್ಲಾ

Ambarish statement on PM decision on Cauvery water dispute
ಬೆಂಗಳೂರು, ಅ 2: ಕಾವೇರಿ ಹಿತ ರಕ್ಷಣಾ ಸಮಿತಿ ಕರೆದಿದ್ದ ತುರ್ತು ಸಭೆ ಈಗ ಸ್ವಲ್ಪ ಹೊತ್ತಿಗೆ ಮುನ್ನ ಮುಗಿದಿದೆ. ಕಾವೇರಿ ನದಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕೊಟ್ಟ ತೀರ್ಪು ಒಬ್ಬ ಅವಿದ್ಯಾವಂತನೂ ಕೊಡುವುದಿಲ್ಲ ಎಂದು ನಟ ಮತ್ತು ಕಾಂಗ್ರೆಸ್ ಮುಖಂಡ ರೆಬೆಲ್ ಸ್ಟಾರ್ ಅಂಬರೀಶ್ ಗಂಭೀರ ಹೇಳಿಕೆ ನೀಡಿದ್ದಾರೆ.

ಕರ್ನಾಟಕವೂ ಭಾರತ ದೇಶದ ಭಾಗ ಎನ್ನುವುದನ್ನು ಪ್ರಧಾನಿಗಳು ಮರೆತಂದಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಅನ್ಯಾಯ ಕಾವೇರಿ ವಿಚಾರದಲ್ಲಿ ರಾಜ್ಯದ ಮೇಲೆ ನಡೆಯುತ್ತಲೇ ಇದೆ. ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಂಬರೀಶ್ ತಮ್ಮದೇ ಪಕ್ಷದ ಪ್ರಧಾನಿ ಮೇಲೆ ಸಿನಿಮಾ ಮಾದರಿಯಲ್ಲೇ ಗುಡುಗಿದ್ದಾರೆ.

ಸಭೆಯಲ್ಲಿ ಆದಿಚುಂಚನಗಿರಿ ಮತ್ತು ಸುತ್ತೂರು ಮಠದ ಸ್ವಾಮೀಜಿಗಳು, ಮಂಡ್ಯ ಸಂಸದ ಚೆಲುವರಾಯ ಸ್ವಾಮಿ, ಕರವೇ ಎರಡೂ ಬಣದ ನಾಯಕರುಗಳಾದ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ, ರೈತ ಸಂಘದ ಮುಖಂಡರುಗಳು, ಕನ್ನಡಪರ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.

ಕಾವೇರಿ ಹೋರಾಟ ನಾಳೆ ತೀವ್ರ ಸ್ವರೂಪ ಪಡೆಯುವ ಎಲ್ಲಾ ಸಾಧ್ಯತೆಯಿದೆ. ಸುಮಾರು 20 ಸಾವಿರ ರೈತರು ಕೆಆರ್ಎಸ್ ಮುತ್ತಿಗೆ ಚಳುವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾವೇರಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಮಾದೇಗೌಡ ಸಭೆಯ ನಂತರ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿಗರು ಕಾವೇರಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಮತ್ತೆ ಮಾದೇಗೌಡ ಕರೆ ನೀಡಿದ್ದಾರೆ. ಭಾಗವಹಿಸದೇ ಇದ್ದಲ್ಲಿ ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ ಎಂದು ಮಗುದೊಮ್ಮೆ ಎಚ್ಚರಿಸಿದ್ದಾರೆ.

ಬೆಂಗಳೂರು, ಮೈಸೂರು ಹೆದ್ದಾರಿ ಸಂಚಾರ ಇಂದು ಕೂಡಾ ವ್ಯತ್ಯಯಗೊಂಡಿದೆ. ಹೆದ್ದಾರಿಯಲ್ಲೇ ಶಾಮಿಯಾನ ಹಾಕಿ, ಊಟ ಮಾಡಿ ರೈತರು ಪ್ರತಿಭಟನೆ ಸಲ್ಲಿಸಿದ್ದಾರೆ.

ಚಾಮರಾಜನಗರ, ಮೈಸೂರು, ಮಂಡ್ಯದಿಂದ ಬೆಂಗಳೂರು ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಇತರ ರಸ್ತೆಗಳನ್ನು ಪ್ರತಿಭಟನಾಕಾರರು ಬಂದ್ ಮಾಡುವ ಮೂಲಕ ಈ ಭಾಗದಲ್ಲಿ ರಸ್ತೆ ಸಂಚಾರ ಅಕ್ಷರಸಃ ಏರುಪೇರಾಗಿದೆ.

ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ: ಕಾವೇರಿ ಹೋರಾಟದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿಸಲಾಗಿದೆ. 8ನೇ ತರಗತಿಯಿಂದ 10ನೇ ತರಗತಿಯವರೆಗಿನ ಪರೀಕ್ಷೆಯನ್ನು ಮುಂದೂಡಿ ಜಿಲ್ಲಾಧಿಕಾರಿ ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+