ಕಾವೇರಿ: ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸಿದ ಕಾಂಗ್ರೆಸ್

ಇದರಿಂದ ತಮಿಳುನಾಡಿಗೆ ನೀರು ಬಿಡಬೇಕೋ, ಬೇಡ್ವೋ ಎಂದು ತಿಳಿಯದೆ ಸಿಎಂ ಶೆಟ್ಟರ್ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಸಿದ್ದರಾಮಯ್ಯ ಲೇವಡಿ: ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸಿದ ಪ್ರತಿಪಕ್ಷಗಳು ಕೋರ್ಟಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸರಕಾರದ ಸಂಪೂರ್ಣ ವೈಫಲ್ಯದಿಂದಾಗಿ. ರೈತರು ಮತ್ತು ಇಲ್ಲಿನ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಕೋರ್ಟಿಗೆ ಮನವರಿಕೆ ಮಾಡಿಕೊಡಲು ರಾಜ್ಯದ ವಕೀಲರು ವಿಫಲರಾಗಿದ್ದಾರೆ. ಒಟ್ಟಾರೆಯಾಗಿ ಸರಕಾರದ ಬೇಜವಾಬ್ದಾರಿತನದಿಂದಾಗಿ ರಾಜ್ಯಕ್ಕೆ ವ್ಯತರಿಕ್ತವಾದಂತಹ ತೀರ್ಪು ಬಂದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ರಾಜ್ಯದ ಹಿತವನ್ನು ಕಾಯುವಲ್ಲಿ ಸರಕಾರ ವಿಳಂಬವಾಗಿದೆ. ನಿನ್ನೆ ಪ್ರಮುಖ ವಕೀಲರೇ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ರೇವಣ್ಣ ಹಿತನುಡಿ: ನೀರು ಬಿಡಬೇಕು ಅಥವಾ ಬಿಡಬಾರದು ಎಂದು ಹೇಳೊಲ್ಲ. ಆದರೆ ಪ್ರಧಾನಿ ಅವರು ವಸ್ತುಸ್ಥಿತಿಯನ್ನು ಅರಿಯದೆ ತಮಿಳುನಾಡು ಪರ ಆದೇಶ ಹೊರಡಿಸಿರುವುದು ತಪ್ಪು. ರಾಜ್ಯ ಸರಕಾರ ತಕ್ಷಣ ಮೇಲ್ಮನವಿ ಹೋಗಬೇಕು' ಎಂದು ಜೆಡಿ ಎಸ್ ನಾಯಕ ಎಚ್ ಡಿ ರೇವಣ್ಣ ತಿಳಿಸಿದ್ದಾರೆ.
'ಪ್ರಾಧಿಕಾರದ ಅಧಿಕೃತ ತಂಡ ತಕ್ಷಣ ಕಾವೇರಿ ಅಚ್ಚಕಟ್ಟು ಪ್ರದೇಶದಲ್ಲಿ ಅಧ್ಯಯನ ಪ್ರವಾಸ ಮಾಡಿ, ವಸ್ತುಸ್ಥಿತಿಯನ್ನು ಕೋರ್ಟಿಗೆ ತಿಳಿಸಿಕೊಡಬೇಕು' ಎಂದು ರೇವಣ್ಣ ಆಗ್ರಹಿಸಿದರು.
ಖರ್ಗೆ ಪ್ರತಿಕ್ರಿಯೆ ಏನು: ಅದಕ್ಕೂ ಮುನ್ನ ಈ ಮಧ್ಯೆ, ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾವೇರಿದ ಚರ್ಚೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಚ್ ಡಿ ರೇವಣ್ಣ, ಕಾನೂನು ಸಚಿವ ಸುರೇಶ್ ಕುಮಾರ್, ಅಶೋಕ್, ಟಿಬಿ ಜಯಚಂದ್ರ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮುಂತಾದವರು ಪಾಲ್ಗೊಂಡಿದ್ದಾರೆ. ಅಡ್ವೊಕೇಟ್ ಜನರಲ್ ವಿಜಯ್ ಶಂಕರ್ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಸಹ ಉಪಸ್ಥಿತರಿದ್ದರು.












Click it and Unblock the Notifications