ಬೆಂಗ್ಳೂರಿಗರಿಗೆ ಮಂಡ್ಯದಿಂದ ಮಾದೇಗೌಡ್ರ ಎಚ್ಚರಿಕೆ ಸಂದೇಶ
ಮಂಡ್ಯ, ಸೆ 22: ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜು ಆಗುತ್ತಿರುವುದು ಕಾವೇರಿ ನದಿಯಿಂದ. ಇದನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ಭಾಷೆಯ ಜನರು ಮೊದಲು ತಿಳಿದು ಕೊಳ್ಳಬೇಕು.
ಕಾವೇರಿ ನದಿ ಪ್ರಾಧಿಕಾರದಿಂದ ನಮಗೆ ಅನ್ಯಾಯವಾಗಿದೆ. ನಮ್ಮ ಹೋರಾಟಕ್ಕೆ ಬೆಂಗಳೂರಿಗರು ಬೆಂಬಲಿಸಬೇಕು.
ಇಲ್ಲವಾದಲ್ಲಿ ಬೆಂಗಳೂರಿಗೆ ಸರಬರಾಜು ಆಗುವ ಕಾವೇರಿ ನಾಲೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಕಾವೇರಿ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಮಾಜಿ ಸಂಸದ ಜಿ ಮಾದೇಗೌಡ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಬಾರಿ ಕಾವೇರಿ ಹೋರಾಟ ಆರಂಭವಾದಾಗ ನಮ್ಮ ರಾಜಧಾನಿಯಿಂದ ನಮಗೆ ನಿರೀಕ್ಷಿತ ಮಟ್ಟದ ಬೆಂಬಲ ಸಿಗುತ್ತಿಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗುತ್ತದೆ. ಕಾವೇರಿ ನದಿ ಬರೀ ಮಂಡ್ಯ, ಮೈಸೂರಿಗೆ ಸೇರಿದ್ದಲ್ಲ.

ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ, ದೇಶದ ಎಲ್ಲಾ ಭಾಗದ ಜನ ನೆಲೆಸಿರುತ್ತಾರೆ. ಕಾವೇರಿ ನದಿ ನೀರು ಸರಬರಾಜು ಬೆಂಗಳೂರಿಗೆ ಬಂದ್ ಮಾಡಿದರೆ ಊಹಿಸಲೂ ಅಸಾಧ್ಯವಾದ ತೊಂದರೆ ಬೆಂಗಳೂರಿಗರು ಅನುಭವಿಸ ಬೇಕಾತ್ತದೆ.
ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಾದೇಗೌಡರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಾವೇರಿ ಕಣಿವೆ ಭಾಗದಲ್ಲಿ ಪ್ರತಿಭಟನೆಯ ಕಾವು ಏರುತ್ತಲೇ ಇದೆ. ಪ್ರಧಾನಿಯವರ ಮಲತಾಯಿ ಧೋರಣೆ ಖಂಡಿಸಿ ಟಿ ನರಸೀಪುರದಲ್ಲಿ ಕರವೇ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಬಾರಿ ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಅಕ್ಟೋಬರ್ 6ರಂದು ಕರೆನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರಮಂಡಲಿ ತನ್ನ ಬೆಂಬಲ ನೀಡಲಿದೆ.
ಅಂಬರೀಷ್ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ದ ಎಂದು ಸಾ.ರಾ.ಗೋವಿಂದು ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ.











Click it and Unblock the Notifications