ಗಣೇಶ ವಿಸರ್ಜನೆ ಅನುಕೂಲಕ್ಕೆ ಸಂಚಾರಿ ವಾಹನ
ಬೆಂಗಳೂರು,
ಸೆ.18: ಗಣೇಶ ಹಬ್ಬದ ಆಚರಣೆಯಿಂದ ಉಂಟಾಗುವ ಜಲ ಮಾಲಿನ್ಯ ತಡೆಗಟ್ಟಲು ಸಂಚಾರಿ ಗಣೇಶ ವಿಸರ್ಜನಾ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.ಸಾರ್ವಜನಿಕರು ಹೆಚ್ಚೆಚ್ಚು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಖರೀದಿಸಿದರೆ ಒಳ್ಳೆಯದು ಎಂದು ಮೇಯರ್ ವೆಂಕಟೇಶ್ ಮೂರ್ತಿ ಹೇಳಿದ್ದಾರೆ. id="toptextpromo">ಕರ್ನಾಟಕ
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ನಗರದ ವಿವಿಧ ಬಡಾವಣೆಗಳಲ್ಲಿ ಸೆ.19ರ ಸಂಜೆಯಿಂದ ರಾತ್ರಿಯವರೆಗೆ ಗಣೇಶ ವಿಸರ್ಜನೆಗೆಂದು ಸಂಚಾರಿ ವಾಹನದ ಸೇವೆಒದಗಿಸುತ್ತಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಂಡಳಿ ಮನವಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>
*
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಸಂಜೆ 5 ರಿಂದ 7, ಜಯನಗರ 4ನೇ ಹಂತದ ಪೊಲೀಸ್ ಠಾಣೆ ಬಳಿ ಸಂಜೆ 7.15 ರಿಂದ ರಾತ್ರಿ 10ರ ತನಕ ಸಂಚಾರಿ ಗಣೇಶ ವಿಸರ್ಜನಾ ವಾಹನ ಲಭ್ಯವಿದೆ.* ಬೆಂಗಳೂರು ಪೂರ್ವ ವಿಭಾಗದಲ್ಲಿ ಸಂಜೆ 4ರಿಂದ 7.45,
* ಜೀವನ್‌ಭೀಮಾನಗರ ಪೊಲೀಸ್ ಠಾಣೆ ಬಳಿ ಸಂಜೆ 8 ರಿಂದ 10 ರವರೆಗೆ
* ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಸಂಜೆ 3 ರಿಂದ 6,
* ಮಲ್ಲೇಶ್ವರ ಪೊಲೀಸ್ ಠಾಣೆ ಬಳಿ ಸಂಜೆ 6 ರಿಂದ 6.30 ರವರೆಗೆ,
* ಮಲ್ಲೇಶ್ವರ 13 ನೆ ಅಡ್ಡರಸ್ತೆಯಲ್ಲಿ ಸಂಜೆ 6.30 ರಿಂದ 7.30
* ಮಲ್ಲೇಶ್ವರ 18ನೆ ಅಡ್ಡ ರಸ್ತೆ ಬಳಿ ಸಂಜೆ 7.30 ರಿಂದ ರಾತ್ರಿ 10 ರ ತನಕ ಸೇವೆ ಲಭ್ಯವಿದೆ.












Click it and Unblock the Notifications