ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ರಾತ್ರಿ ಮಾತುಕತೆ ವಿಫಲ: ಇಂದೂ ಕದಂತಾಲ್

By Srinath
|
Google Oneindia Kannada News

ksrtc-union-strike-dead-lock-continues-talks-fail
ಬೆಂಗಳೂರು, ಸೆ. 14: ಬಿಎಂಟಿಸಿ ಸೇರಿದಂತೆ ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಫಲವಾಗಿ ರಾಜಧಾನಿ ಸೇರಿದಂತೆ ನಾಡಿನಾದ್ಯಂತ ಜನರಲ್ಲಿರುವ ಮಧುರ ಬಾಂಧವ್ಯ ಮತ್ತು ಸಾಮಾಜಿಕ ಕಳಕಳಿ ತುಸು ಹೆಚ್ಚಾಗಿಯೇ ಅಭಿವ್ಯಕ್ತವಾಗುತ್ತಿದೆ.

ನಟರಾಜ ಸರ್ವಿಸ್ಸಿನಲ್ಲಿರುವವರು ರಸ್ತೆಯಲ್ಲಿ ಹೋಗುತ್ತಿರುವ ವಿಶಾಲ ಹೃದಯದ ಖಾಸಗಿ ವಾಹನದವರತ್ತ ಕೈ ತೋರಿಸಿದರೆ ಅವರು ಸೀದಾ ಬಂದು ನಟರಾಜರನ್ನು ಕರೆದೊಯ್ಯುತ್ತಿದ್ದಾರೆ. ಅಂದಹಾಗೆ ನೀವೂ ಯಾರಿಗಾದರೂ ಡ್ರಾಪ್/ಲಿಫ್ಟ್ ಕೊಟ್ಟರಾ? ಏಕೆಂದರೆ

ವಿಧಾನಸೌಧದಲ್ಲಿ ನಿನ್ನೆ ಮಧ್ಯ ರಾತ್ರಿ ನಡೆದ ಮಾತುಕತೆ ಸಂಪೂರ್ಣವಾಗಿ ವಿಫಲವಾಗಿದೆ. ನಾನೊಂದು ತೀರ ನೀನೊಂದು ತೀರ ಎಂದು ಸರಕಾರ ಮತ್ತು ಬಸ್ ನೌಕರರು ಸಂಧಾನ ಸಭೆಯಿಂದ ವಿಮುಖರಾಗಿ ಎದ್ದುಹೋಗಿದ್ದಾರೆ.

'ಯಾವುದೇ ಕಾರಣಕ್ಕೂ ನಾವು ಮುಷ್ಕರ ವಾಪಸ್ ತೆಗೆದುಕೊಳ್ಳುವುದಿಲ್ಲ. ನಮಗೂ ಸಾಕಾಗಿ ಹೋಗಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರ/ರಾಜಕೀಯ/ ಕಿರುಕುಳಕ್ಕೆ ಅಂತ್ಯ ಹೇಳಲೇಬೇಕಾಗಿದೆ. ನಾವಂತೂ ಪಟ್ಟು ಸಡಿಲಿಸುವುದಿಲ್ಲ' ಎಂದು ಸರಕಾರಿ ಬಸ್ ನೌಕರರು ವಿಧಾನೌಧದ ನೆಲಮಹಡಿಯಲ್ಲಿ ನಿಂತು ಇಡೀ ರಾಜ್ಯಕ್ಕೆ ಕೇಳಿಸುವಂತೆ ಹಾರ್ನ್ ಮಾಡಿದ್ದಾರೆ.

ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಸರಕಾರಕ್ಕೆ ಇದು ಕೇಳಿಸಿಲ್ಲ. 'ಮಧ್ಯರಾತ್ರಿಯಾಯಿತು' ಎಂದು ಅಲ್ಲೇ ಪವಡಿಸಿಬಿಟ್ಟಿದೆ. 'ನಾವೂ ಅಷ್ಟೇ ನೌಕರರ ಬೇಡಿಕೆಗೆ ಮಣೆ ಹಾಕುವುದಿಲ್ಲ. ಕಷ್ಟಾನೋ ನಷ್ಟಾನೋ. ಕೆಲಸಕ್ಕಂತೂ ಬರಲೇ ಬೇಕು, ಬಸ್ಸುಗಳನ್ನು ರಸ್ತೆಗೆ ಇಳಿಸಲೇಬೇಕು' ಎಂದು ಮೊಂಡು ಹಠಹಿಡಿದಿದೆ.

ಜಾಸ್ತಿ ಮಾತನಾಡಿದರೆ ಎಸ್ಮಾ ಜಾರಿಗೆ ತರುತ್ತೇವೆ ಎಂದು ಎಲ್ಲ ಮಾಧ್ಯಮಗಳ ಮೂಲಕ ತನ್ನ ಬಸ್ ನೌಕರರನ್ನು ಎಚ್ಚರಿಸಿದೆ. ಆದರೆ ನೌಕರರು 'ಎಸ್ಮಾ ತಂದರೆ ಸರಕಾರವೇ ಭಸ್ಮ' ಎಂಬ ಘೋಷವಾಕ್ಯ ರಚಿಸಿಕೊಂಡಿದ್ದಾರೆ.

ಈ ಮಧ್ಯೆ ಬಸ್ ಪ್ರಯಾಣಿಕನ ಗೋಳು ಆ ದೇವರಿಗೇ ಪ್ರೀತಿ ಎನ್ನುವಂತಿದೆ. ನಿನ್ನೆ ಮೊದಲಾ ದಿನ. ಹೇಗೋ ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ಆದರೆ ಇಂದು ...

English summary
KSRTC workers union strike enters 2nd day today (Sept 14) as talks between striking KSRTC workers union and govt failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X