ಟೀಚರ್ ಟಾರ್ಚರ್: ಅಮಾಯಕ ವಿದ್ಯಾರ್ಥಿ ಬಲಿ

ಇಷ್ಟಕ್ಕೂ ಮೊಹಮದ್ ಇಸ್ಮಾಯಿಲ್ (14) ಎಂಬ ದುರದೃಷ್ಟವಂತ ಬಾಲಕ ಮಾಡಿದ ಮಹಾಪರಾಧವೆಂದರೆ ಅವನು ಶಾಲೆಯಲ್ಲಿ ಹೆಚ್ಚು ಮಾತನಾಡುತ್ತಿದ್ದುದು. 'ನನ್ನ ಮಗ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ. ಆಗ ಅವನ ಕಾಲುಗಳಿಗೆ ರಾಡ್ ಅಳವಡಿಸಲಾಗಿತ್ತು' ಎಂದು ಆತನ ತಂದೆ ಮೊಹಮದ್ ಸಿದ್ದಿಖಿ ಹುಸೇನ್ ತಿಳಿಸಿದ್ದಾರೆ.
ಕಳೆದ ಮಂಗಳವಾರ ನಗರದ ಮಾದನ್ನಪೇಟೆಯಲ್ಲಿರುವ Royal Embassy ಹೈಸ್ಕೂಲಿನ ಈ ಬಾಲಕನಿಗೆ ಶಿಕ್ಷಕನೊಬ್ಬ 300 ಬಸ್ಕಿಗಳನ್ನು ತೆಗೆಯುವ ಶಿಕ್ಷೆಯನ್ನು ವಿಧಿಸಿದ್ದನೆನ್ನಲಾಗಿದೆ.
ಶಕ್ತಿ ಮೀರಿ ಹಲವಾರು ಬಸ್ಕಿ ತೆಗೆದ ಬಾಲಕ ತೀವ್ರವಾಗಿ ನಿತ್ರಾಣಗೊಂಡು ತರಗತಿಯಲ್ಲೇ ಕುಸಿದು ಬಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಲ್ಲಿ ಆತ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಮೃತ ಬಾಲಕನ ಬಂಧುಗಳು ಹಾಗೂ ಸಾರ್ವಜನಿಕರು ರಾಯಲ್ ಎಂಬಸಿ ಹೈಸ್ಕೂಲ್‌ನ ಹೊರಗೆ ಭಾರಿ ಪ್ರತಿಭಟನೆ ನಡೆಸಿದರು. ಕೆಲವರು ತರಗತಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದುಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.












Click it and Unblock the Notifications