50 ಉದ್ಯೋಗಿಗಳ ಹೊರದಬ್ಬಿದ ಎನ್ ಡಿಟಿವಿ

ಅನೇಕ ಕಂಪನಿಗಳು ಈ ರೀತಿ ಆಂತರಿಕ ಬದಲಾವಣೆ, ಪುನರ್ ರಚನೆಗೆ ಇಳಿಯುವುದು ಸಾಮಾನ್ಯ ಸಂಗತಿ. ಕಾರ್ಯಕ್ಷಮತೆ ಹೆಚ್ಚಿಸಲು ಈ ಕ್ರಮ ಅನಿವಾರ್ಯ ಎಂದು ಎನ್ ಡಿಟಿವಿ ಸಮೂಹದ ಕಾರ್ಯಕಾರಿ ಉಪಾಧ್ಯಕ್ಷ ಕೆವಿಎಲ್ ನಾರಾಯಣ ರಾವ್ ಹೇಳಿದ್ದಾರೆ.
ಒಟ್ಟಾರೆ 1800 ಶಕ್ತಿಯುತ ಉದ್ಯೋಗಿಗಳನ್ನು ಹೊಂದಿರುವ ಎನ್ ಡಿಟಿವಿ ಶೇ 3 ರಷ್ಟು ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಇದು ಅತ್ಯಂತ ಸಣ್ಣ ಮಟ್ಟದ ಬದಲಾವಣೆ ಎಂದು ಎನ್ ಡಿಟಿವಿ ಹೇಳಿಕೊಂಡಿದೆ.
ಆದರೆ, 50 ಜನರಲ್ಲಿ ವಿವಿಧ ವಿಭಾಗದ ಪ್ರಮುಖ ಅಧಿಕಾರಿಗಳು, ಪತ್ರಕರ್ತರು ಸೇರಿದ್ದಾರೆ ಎಂಬುದು ಗಮನಾರ್ಹ. ಆದರೆ, ಎನ್ ಡಿ ಟಿವಿಗೆ ಸಿಬ್ಬಂದಿ ಕಡಿತ ಅನಿವಾರ್ಯವಾಗಿದೆ.
ಜೂ.30,2012ಕ್ಕೆ ಅನ್ವಯವಾಗುವ ತ್ರೈಮಾಸಿಕದಲ್ಲಿ ಎನ್ ಡಿಟಿವಿ ನಿವ್ವಳ ನಷ್ಟ 22.71 ಕೋಟಿ ರು ನಷ್ಟಿತ್ತು. ಆದಾಯ 82.77 ಕೋಟಿ ರು ದಾಖಲಾಗಿತ್ತು.
ಭಾರತದ ಟಿವಿ ರೇಟಿಂಗ್ ನಿಯಂತ್ರಣ ಸಂಸ್ಥೆ TAM ಹಾಗೂ ಅದರ ಪ್ರೋತ್ಸಾಹಕ ಸಂಸ್ಥೆಗಳಾದ ನೆಲ್ಸನ್ ಹಾಗೂ ಕಂತಾರ್ ಮೀಡಿಯಾ ರಿಸರ್ಜ್ ಸಂಸ್ಥೆ ವಿರುದ್ಧ 42ಕ್ಕೂ ಅಧಿಕ ಮೊಕದ್ದಮೆಗಳನ್ನು ಎನ್ ಡಿಟಿವಿ ಸಂಸ್ಥೆ ಹೂಡಿದೆ. ಅಮೆರಿಕದಲ್ಲಿ ಈ ಕಾನೂನು ಸಮರ ನಡೆಯುತ್ತಿರುವುದು ಎನ್ ಡಿಟಿವಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಎನ್ ಡಿಟಿವಿ ವಿರುದ್ಧ ಟಿವಿ ರೇಟಿಂಗ್ ನೀಡಿರುವ ಆರೋಪವನ್ನು TAM ಮೇಲೆ ಹೊರೆಸಿ 810 ಮಿಲಿಯನ್ ಡಾಲರ್ ಪರಿಹಾರ ಕೋರಿದೆ ಹಾಗೂ ನೆಲ್ಸನ್ ಹಾಗೂ ಕಂತಾರ್ ಮೀಡಿಯಾ ರಿಸರ್ಜ್ ಸಂಸ್ಥೆ ನಿರ್ಲಕ್ಷ್ಯ ಧೋರಣೆ ವಿರುದ್ಧ ಎನ್ ಡಿಟಿವಿ 580 ಮಿಲಿಯನ್ ಡಾಲರ್ ಪರಿಹಾರ ಕೋರಿದೆ.
The time for complacency is over. Each one of us needs to increase our productivity, our efficiency, our desire to learn and improve. This is the time to streamline our operations, excise any flab that the system may have gained in the boom times and return to being a lean, tough, strong, efficient and compassionate organisation. ಎಂದು 2009ರಲ್ಲಿ ಸಿಬ್ಬಂದಿ ನೇಮಕಾತಿಗೆ ಬ್ರೇಕ್ ಹಾಕಿ ಪ್ರಣಯ್ ರಾಯ್ ಹೇಳಿದ್ದ ಮಾತು ಇಂದಿಗೂ ಪ್ರಸ್ತುತವಾಗಿದೆ.












Click it and Unblock the Notifications