ಬೆಂಗಳೂರು: ಶಾಲಾ ಮಹಡಿಯಿಂದ ಹಾರಿದ ಬಾಲಕಿ

ದೊಮ್ಮಲೂರಿನ ಸರಕಾರಿ ಪಿಯುಸಿ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ಈ ವಿಲಕ್ಷಣ ಘಟನೆ ನಡೆದಿದೆ. 10ನೇ ತರಗತಿಯ ರೇವತಿ ನಾರಾಯಣ್ ಶಾಲೆಯ 2ನೆಯ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ.
ಏನಾಯಿತೆಂದರೆ ರೇವತಿಯ ಸಹಪಾಠಿಗಳು ಅವಳ ಮುಖದ ಮೇಲೆ ತಮಾಷೆಗಾಗಿ ಚಾಕ್ ಪೀಸ್ ಪುಡಿಯನ್ನು ತೂರಿದ್ದಾರೆ. ಸರಿ ಅಷ್ಟಕ್ಕೇ ಕೋಪಗೊಂಡ ರೇವತಿ ಸೀದಾ ಕ್ಲಾಸ್ ಟೀಚರ್ ಹತ್ತಿರ ಹೋಗಿ ಹೀಗೀಗೆ ಎಂದು ದೂರು ನೀಡಿದ್ದಾಳೆ. ಇದಕ್ಕೆ ಬೇಜಾರು ಮಾಡಿಕೊಂಡ ಆ ವಿದ್ಯಾರ್ಥಿನಿಯರು ರೇವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಡುಗಾಟಿಕೆ ಮಾಡಲು ಹೋಗಿ...:
'ಏನೇ ನಮ್ಮ ವಿರುದ್ಧವೇ ಕ್ಲಾಸ್ ಟೀಚರ್ ಗೆ ದೂರು ನೀಡುತ್ತೀಯಾ' ಎಂದು ದಬಾಯಿಸಿದ್ದಾರೆ. ಅಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ರೇವತಿಯನ್ನು ಇನ್ನಷ್ಟು ಗೋಳುಹೊಯ್ದುಕೊಳ್ಳಲು ಮುಂದಾದ ಆ ವಿದ್ಯಾರ್ಥಿನಿಯರು 'ನೀನು ಹೀಗೆ ಟೀಚರ್ ಗೆ ಚಾಡಿ ಹೇಳಿದ್ದರಿಂದ ನಮಗೆಲ್ಲ ಅವಮಾನವಾಗಿದೆ. ಹಾಗಾಗಿ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದಕ್ಕೂ ಮುನ್ನ ನಮ್ಮ ಸಾವಿಗೆ ನೀನೇ ಕಾರಣ ಎಂದು ಲೆಟರ್ ಬರೆದಿಡುತ್ತೇವೆ' ಎಂದಿದ್ದಾರೆ.
ಅಷ್ಟೇ. ರೇವತಿ ಒಂದೇ ಧಾವಂತಕ್ಕೆ ಸಿಕ್ಕಿಕೊಂಡಿದ್ದಾಳೆ. ಆತಂಕ ಹೆಚ್ಚಾಗುತ್ತಿದ್ದಂತೆ ಏನು ಮಾಡಬೇಕೋ ತೋಚದೆ ಸೀದಾ ಶಾಲಾ ಕಟ್ಟಡದ ಎರಡನೆಯ ಮಹಡಿಗೆ ಹತ್ತಿ ಅಲ್ಲಿಂದ ಕೆಳಕ್ಕೆ ಡೈವ್ ಹೊಡೆದಿದ್ದಾಳೆ.
ತಕ್ಷಣ ಶಾಲಾ ಟೀಚರುಗಳು ರೇವತಿಯನ್ನು ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೆಲ್ಲ ಆಗುವ ವೇಳೆಗೆ ಮಧ್ಯಾಹ್ನ 3.30 ಆಗಿದೆ. ಸುದೈವ ಮಗುಗೆ ತಲೆಗೆ ಪೆಟ್ಟು ಬಿದ್ದಿಲ್ಲ. ಇಲ್ಲಾಂದ್ರೆ ಅಷ್ಟೇ ಎಂದು ವೈದ್ಯರು ತಕ್ಷಣ ರೇವತಿಯ ಕಾಲುಗಳನ್ನು ಆಪರೇಟ್ ಮಾಡಲು ಮುಂದಾಗಿದ್ದಾರೆ.












Click it and Unblock the Notifications