• search

ಪ್ರಿನ್ಸ್ ಹ್ಯಾರಿ ಮೇಲ್ಯಾಕೆ ತಾಲಿಬಾನಿಗಳ ಕಣ್ಣು?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Taliban issues 'kill notice' for Prince Harry
  ಕಾಬೂಲ್, ಸೆ.11: ಬೆತ್ತಲೆ ಫೋಟೋ ಪ್ರಕರಣ, ಫೇಸ್ ಬುಕ್ ಖಾತೆ ಬಂದ್ ನಂತರ ಮತ್ತೊಮ್ಮೆ ಬ್ರಿಟಿಷ್ ರಾಜಕುಮಾರ್ ಹ್ಯಾರಿ ಸುದ್ದಿಯಲ್ಲಿದ್ದಾನೆ. ಅಮೆರಿಕದ ಸಂಗ ಮಾಡಿದ ತಪ್ಪಿಗೆ ಹ್ಯಾರಿ ಈಗ ತಾಲಿಬಾನಿ ಉಗ್ರ ಸಂಘಟನೆಯ ಪ್ರಮುಖ ಟಾರ್ಗೆಟ್ ಆಗಿದ್ದಾನೆ.

  ಅಮೆರಿಕದ ಹೆಲ್ಮಾಂಡ್ ನ ಕ್ಯಾಂಪ್ ಬಾಸ್ಟಿಯನ್ ನಲ್ಲಿ ಪೈಲಟ್ ತರಬೇತಿಗೆ ಬಂದಿರುವ ಹ್ಯಾರಿ, ಅಫ್ಟಾನಿಸ್ತಾನದಲ್ಲಿ ತಮ್ಮ ತರಬೇತಿಯ ಕೊನೆಯ ಪಾಠಗಳನ್ನು ಕಲಿಯಲು ಉತ್ಸುಕರಾಗಿದ್ದರು. ಆದರೆ, ತಾಲಿಬಾನಿಗಳ ಬೆದರಿಕೆ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ಇನ್ನೊಂದು ವಾರವಾದರೂ ಹ್ಯಾರಿ ಅತ್ತ ಕಡೆ ಹೆಲಿಕಾಪ್ಟರ್ ಹಾರಿಸುವಂತಿಲ್ಲ.

  ಅಫ್ಘಾನ್‌ನಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಗೆ ನ್ಯಾಟೊ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಪಾಚೆ ದಾಳಿ ಹೆಲಿಕಾಪ್ಟರ್‌ನ ಪೈಲಟ್ ಆಗಿ ಎರಡನೆ ಬಾರಿ ನಿಯೋಜನೆಗೊಂಡಿರುವ ಬ್ರಿಟನ್‌ನ ರಾಜಕುಮಾರ ಹ್ಯಾರಿಯವರನ್ನು ಹತ್ಯೆಗೈಯುವಂತೆ ತಾಲಿಬಾನ್ ಬೆದರಿಕೆ ಒಡ್ಡಿದೆ ಎಂದು 'ಸ್ಕೈ ನ್ಯೂಸ್' ವರದಿ ಮಾಡಿದೆ.

  27ರ ಹರೆಯದ ರಾಜಕುಮಾರ ಹ್ಯಾರಿಯವರನ್ನು ತನ್ನ ಪ್ರಮುಖ ಗುರಿ ಎಂದು ಹೇಳಿಕೊಂಡಿರುವ ತಾಲಿಬಾನ್‌ನ ವಕ್ತಾರ, ಹ್ಯಾರಿಯವರನ್ನು ಬಂಧಿಸುವ ಅಥವಾ ಕೊಲ್ಲುವ ನಿಟ್ಟಿನಲ್ಲಿ ಗರಿಷ್ಠ ಯತ್ನ ನಡೆಸಲಾಗುವುದು ಎಂದು ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

  ಸೇನಾ ಕ್ಯಾಪ್ಟನ್ ಆಗಿರುವ ಬ್ರಿಟನ್ ರಾಜವಂಶದ ಮೂರನೆಯ ತಲೆಮಾರಿನ ಹ್ಯಾರಿ ತನ್ನ ದ್ವಿತೀಯ ಅವಧಿಯ ಕರ್ತವ್ಯ ನಿರ್ವಹಣೆಗಾಗಿ ಕಳೆದ ವಾರ ಅಫ್ಘಾನ್ ತಲುಪಿದ್ದಾರೆ.

  ಅಫ್ಘಾನ್‌ನ ಅತಿ ಪ್ರಕ್ಷುಬ್ಧ ಪ್ರದೇಶವಾಗಿರುವ ದಕ್ಷಿಣ ಹೆಲ್ಮಂಡ್ ಪ್ರಾಂತ್ಯದಲ್ಲಿ ಕಾರ್ಯಾಚರಣೆ ನಡೆಸಲು ಹ್ಯಾರಿಯವರು ನಿಯೋಜನೆಗೊಂಡಿದ್ದಾರೆ.

  'ಅಮೆರಿಕದ ಜೊತೆಗೂಡಿ ನಮ್ಮ ವಿರುದ್ಧ ಹೋರಾಡುವ ಎಲ್ಲರೂ ನಮ್ಮ ಶತ್ರುಗಳೇ ಆಗಿದ್ದಾರೆ. ಅಂತಹವರನ್ನು ಬಂಧಿಸುವುದು ಅಥವಾ ಹತ್ಯೆಗೈಯುವುದು ನಮ್ಮ ಗುರಿಯಾಗಿದೆ' ಎಂದು ತಾಲಿಬಾನ್ ವಕ್ತಾರನನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

  ಯಾವುದೇ ಅಪಾಯ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ತಾಲಿಬಾನ್ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ.

  ಅಮೆರಿಕದ ವೆಬ್ ಸೈಟ್ ಟಿಎಂಜಡ್ಜ್, ಪ್ರಿನ್ಸ್ ಹ್ಯಾರಿ ತನ್ನ ಗೆಳತಿಯೊಂದಿಗೆ ಲಾಸ್ ವೆಗಾಸ್ ನ ಹೋಟೆಲ್ ನಲ್ಲಿ ನಗ್ನನಾಗಿ ಕುಣಿಯುತ್ತಿರುವ ಚಿತ್ರವನ್ನು ಪ್ರಕಟಿಸಿತ್ತು. ಇದರಿಂದ ಬ್ರಿಟನ್ ನಲ್ಲಿ ಹೊಸ ವಿವಾದ ಹುಟ್ಟುಕೊಂಡಿತ್ತು.

  ಲಾಸ್ ವೆಗಾಸ್ ಗೂ ಮುನ್ನ ಸರ್ ರಿಚರ್ಡ್ ಬ್ರಾಸ್ನನ್ ಅವರ ಖಾಸಗಿ ದ್ವೀಪದಲ್ಲಿ ಹ್ಯಾರಿ ಹಾಗೂ ಸ್ನೇಹಿತರು ತಂಗಿದ್ದರು. ಇಲ್ಲಿಂದಲೇ ಇನ್ನೂ ಅನೇಕ ಚಿತ್ರಗಳು ಪಸರಿಸಬಹುದು ಎಂಬ ಭಯದಿಂದ ಬಕಿಂಗ್ ಹ್ಯಾಮ್ ಅರಮನೆ ಥರಗುಟ್ಟಿತ್ತು.

  ಹ್ಯಾರಿ ಫೇಸ್ ಬುಕ್ ಪುಟಕ್ಕೆ ಕತ್ತರಿ ಬೀಳುತ್ತಿದ್ದಂತೆ ಹ್ಯಾರಿ ಅವರ ಆಪ್ತರ ಖಾತೆಗಳಿಗೂ ಕತ್ತರಿ ಹಾಕಲಾಗಿತ್ತು. 25 ವರ್ಷದ ಲಾಸ್ ವೆಗಾಸ್ ನ ಟಾಪ್ 'ಸ್ಕಿಪ್ಪಿ' ಇನ್ಸ್ ಕಿಪ್ ಹಾಗೂ 30 ವರ್ಷದ ಆರ್ಥರ್ ಅವರ ಫೇಸ್ ಬುಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.

  ಮಿಲಿಟರಿ ಕಾರ್ಯಾಚರಣೆ ಬಗ್ಗೆ ಅರಿವು ಪಡೆಯಲು ಬಂದಿದ್ದ ಹ್ಯಾರಿ ಮಾಡಿಕೊಂಡಿರುವ ಅನಾಹುತಕ್ಕೆ ಈಗಾಗಲೇ ತಲೆತಗ್ಗಿಸಿರುವ ಬ್ರಿಟನ್ನಿನ ರಾಜಮನೆತನದವರು ಈಗ ಹ್ಯಾರಿ ಜೀವಕ್ಕೆ ಕುತ್ತು ಬಂದಿರುವುದನ್ನು ಕಂಡು ಹೌರಾರಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Taliban on Monday threatened to kill Britain's Prince Harry, who is serving a fresh deployment in Afghanistan as an Apache attack helicopter pilot, four years after his previous battle stint in the war-torn country was cut short over similar threats.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more