• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಂಟಿಎಫ್ ಶರ್ಮ ವರ್ಗ ರದ್ದು, ಸರ್ಕಾರಕ್ಕೆ ಗುದ್ದು

By Mahesh
|
CAT relief to BMTF Sharma
ನವದೆಹಲಿ, ಸೆ.7: ಬಿಎಂಟಿಎಫ್ ಮುಖ್ಯಸ್ಥ ಆರ್ ಪಿ ಶರ್ಮಾ ಅವರ ವರ್ಗಾವಣೆಯನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಶುಕ್ರವಾರ(ಸೆ.7) ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಆರ್ ಪಿ ಶರ್ಮಾ ಅವರ ವರ್ಗಾವಣೆ ಕಾನೂನಿಗೆ ವಿರುದ್ಧವಾದುದು ಎಂದು ಸಿಎಟಿ ಸಮಿತಿ(ಬೆಂಗಳೂರು ವಿಭಾಗ) ಸದಸ್ಯ ಕೆಬಿ ಸುರೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ ಪಿ ಶರ್ಮಾ ಅವರು ಬಿಎಂಟಿಎಫ್ ಮುಖ್ಯಸ್ಥರಾಗಿ ಅಧಿಕಾರ ಅವಧಿ ಪೂರ್ಣಗೊಳಿಸಬೇಕು. ಶರ್ಮಾ ಅವರ ವರ್ಗಾವಣೆಗೆ ಸರ್ಕಾರ ಯಾವ ಮಾನದಂಡ ಅನುಸರಿಸಿದೆ ತಿಳಿಯುತ್ತಿಲ್ಲ ಎಂದು ಸುರೇಶ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಿಎಟಿ ನ್ಯಾಯಮಂಡಳಿ ನೀಡಿರುವ ಈ ತೀರ್ಪಿನಿಂದ ಕರ್ನಾಟಕ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ. ಬಿಬಿಎಂಪಿ ಇಂಜಿನಿಯರ್ ಗಳ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬಹುಕೋಟಿ ಹಗರಣವನ್ನು ಶರ್ಮ ಅವರು ಬಯಲಿಗೆಳೆದಿದ್ದರು.

ಇಂಜಿನಿಯರ್ ಗಳು ಮುಷ್ಕರ ಹೂಡಿ, ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ, ಅವಧಿಗೆ ಮುನ್ನ ಆರ್ ಪಿ ಶರ್ಮ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಶರ್ಮ, ತಮ್ಮ ವರ್ಗಾವಣೆ ಆದೇಶ ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರ್ವಕವಾಗಿದೆ ಎಂದು ಕರ್ನಾಟಕ ಆಡಳಿತ್ಮಾಕ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮಂಡಳಿ ಸರ್ಕಾರದ ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಆದೇಶ ನೀಡಿರುವುದಲ್ಲದೆ, ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಆರ್ ಪಿ ಶರ್ಮ ಅವರನ್ನು ಬಿಎಂಟಿಎಫ್ ಎಡಿಜಿಪಿಯಾಗಿ ಜನವರಿ, 2012ರಲ್ಲಿ ನೇಮಕ ಮಾಡಲಾಗಿದೆ. ಅವರ ಅಧಿಕಾರ ಅವಧಿ ಡಿ,31,2012ರ ತನಕ ಇದೆ.

ಮೇಯರ್ ವೆಂಕಟೇಶಮೂರ್ತಿ ಕಾನೂನು ಬಾಹಿರವಾಗಿ ಬಗರ್ ಹುಕುಂ ಜಮೀನು ಖರೀದಿ, ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಎಂಜಿನಿಯರ್ ಗಳ ವಿರುದ್ದದ ತನಿಖೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದರು.

ಮೇಯರ್ ಪ್ರಕರಣದಲ್ಲಿ ಸಾಕ್ಷಿಯಾಗುವಂತೆ ಕಚೇರಿಗೆ ಬರುವಂತೆ ತಮ್ಮ ಬಾಸ್ ಗೃಹ ಸಚಿವ ಆರ್ ಅಶೋಕ್ ಅವರಿಗೆ ಸಮನ್ಸ್ ಕಳಿಸಿ ಸುದ್ದಿಯಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬಿಎಂಟಿಎಫ್ ಸುದ್ದಿಗಳುView All

English summary
The Central Administrative Tribunal on Friday quashed the transfer of Bangalore Metropolitan Task Force Chief ADGP R P Sharma, observing that the amendment to the Police Act cannot in any way concern the applicant's (Sharma) transfer as it does not cover an ADGP rank officer.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more