ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ ಅಮೆರಿಕದ ಸಾಲ 16 ಲಕ್ಷ ಕೋಟಿ ಡಾಲರ್!

By Srinath
|
Google Oneindia Kannada News

america-national-debt-crosses-16-trillion-dollar
ವಾಷಿಂಗ್ಟನ್, ಸೆ.5: ಅಮೆರಿಕನ್ ಡ್ರೀಮ್ಸ್ ಭಗ್ನಗೊಂಡು ಯಾವುದೋ ಕಾಲವಾಯಿತು. ಅಲ್ಲಿನ ಸರಕಾರ ಹಣಕಾಸು ಕೊರತೆಯಿಂದ ನರಳುತ್ತಿದೆ. ಅಮೆರಿಕ ಸರಕಾರದ ರಾಷ್ಟ್ರೀಯ ಸಾಲ 16 ಟ್ರಲಿಯನ್ ಡಾಲರ್ (16 ಲಕ್ಷ ಕೋಟಿ ಡಾಲರ್) ಎಂದು ಅಲ್ಲಿನ ಖಜಾನೆ ಇಲಾಖೆ ಘೋಷಿಸಿದೆ. ಇದು ಸಾರ್ವಕಾಲಿಕ ಗರಿಷ್ಠ ಮೊತ್ತದ ಸಾಲವಾಗಿದೆ.

ಅಮೆರಿಕದಲ್ಲಿ ಹೇಳಿ ಕೇಳಿ ಚುನಾವಣೆ ಪರ್ವ. ಹಾಗಾಗಿ ಪ್ರತಿಪಕ್ಷಗಳು ಈ ಆಘಾತಕಾರಿ ಸಾಲದ ಪ್ರಮಾಣವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಹೌದು ಬರಾಕ್ ಒಬಾಮಾ ಅಮೆರಿಕಕ್ಕೆ ಅಧ್ಯಕ್ಷರಾಗಿ ಬಂದಿದ್ದೇ. ಕಳೆದ ಮೂರೂವರೆ ವರ್ಷಗಳಲ್ಲಿ ಈ ಸಾಲದ ಪ್ರಮಾಣ ವಿಪರೀತವಾಗಿದೆ ಎಂದು ರಿಪಬ್ಲಿಕನ್ನರು ಕೂಗಾಡಿದ್ದಾರೆ.

ಹಾಗೆ ನೋಡಿದರೆ ಅಮೆರಿಕದ ಈ ದುಬಾರಿ ಸಾಲ ಜಾರ್ಜ್ ಡಬ್ಲ್ಯು. ಬುಷ್ ಕಾಲದಿಂದಲೇ ಒಬಾಮಾಗೆ ಬಳವಳಿಯಾಗಿ ಬಂದಿತ್ತು. ಒಬಾಮಾ ಅಧಿಕಾರ ಸ್ವೀಕರಿಸಿದ ಕಾಲದಲ್ಲಿ ಅಮೆರಿಕದ ಆರ್ಥಿಕ ಪರಿಸ್ಥಿತಿ ತೀರಾ ಎಕ್ಕುಟ್ಟಿಹೋಗಿತ್ತು. ಆದರೆ ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಬಾಮಾ ಭಾರಿ ಭರವಸೆ ಮೂಡಿಸಿದ್ದರು.

ಆದರೆ ಸಾಹೇಬರು ಏನೂ ಮಾಡಲಿಲ್ಲ. ನಾಲ್ಕು ವರ್ಷವೂ ಕೋಟಿ ಕೋಟಿ ಗಟ್ಟಲೆ ಸಾಲದ ಮೂಟೆಯ ಮೇಲೆ ಹಾಗೇ ವಿರಾಜಮಾನರಾಗಿದ್ದರು ಎಂಬುದು ಅಲ್ಲಿನ ಪ್ರತಿಪಕ್ಷಗಳ ಕೂಗು.

ಬಜೆಟ್ ಸಮತೋಲನ 2020ರ ವೇಳೆಗೆ: 'ಅಮೆರಿಕದ ಆರ್ಥಿಕ ಸವಾಲುಗಳನ್ನು, ಅದರಲ್ಲೂ ಸಾಲದ ಹೊರೆಗಳನ್ನು ಇಳಿಸುವುದು ಮುಖ್ಯವಾಗಬೇಕು. ದುಡ್ಡೇ ಇಲ್ಲದಿದ್ದರೂ ಖರ್ಚು ಮಾಡುವ ಪ್ರವೃತ್ತಿಯನ್ನು ಬಿಡಬೇಕು. ಅಮೆರಿಕವು ಒಂದು ಡಾಲರ್ ಖರ್ಚು ಮಾಡಬೇಕೆಂದರೆ ಅದರಲ್ಲಿ 33 ಸೆಂಟ್ ಗಳನ್ನು ಸಾಲ ರೂಪದಲ್ಲಿ ಪಡೆಯಬೇಕಾದ ದುಃಸ್ಥಿತಿ ಎದುರಾಗಿದೆ' ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದಿನ ಜನವರಿ ವೇಳೆಗೆ ಅಮೆರಿಕ ಸರಕಾರ ಸ್ಪಷ್ಟ, ನಿರ್ದಿಷ್ಟ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಮುಂದಿನ ಬಾರಿ ಅಧ್ಯಕ್ಷಗಾದಿಗೆ ಯಾರೇ ಬಂದರೂ ಅವರೆದುರು ಅಮೆರಿಕದ ದುರ್ಭರ ಆರ್ಥಿಕ ಪರಿಸ್ಥಿತಿ ಅವರನ್ನು ಎದುರುಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿದ್ದಾರೆ.

ಮಕ್ಕಳು, ಮೊಮ್ಮಕ್ಕಳ ಭವಿಷ್ಯ ಭೀಕರ: 'ರಾಷ್ಟ್ರದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಒಬಾಮಾರಿಂದ ಏನೂ ಆಗಿಲ್ಲ. ಸಾಲದ ಪ್ರಮಾಣ ನೋಡಿದರೆ ಭಯವಾಗುತ್ತದೆ. ಯುವಜನತೆಗೆ ಉದ್ಯೋಗಾವಕಾಶಗಳೇ ಇಲ್ಲವಾಗಿವೆ. ನಮ್ಮ ಮಕ್ಕಳು, ಮೊಮ್ಮಕ್ಕಳ ಭವಿಷ್ಯ ನೆನೆಪಿಸಿಕೊಂಡರೆ ಭೀಕರವೆನಿಸುತ್ತದೆ' ಎಂದು ರಿಪಬ್ಲಿಕನ್ ಮುಖಂಡರು ಭೀತಿಗೊಳಗಾಗಿದ್ದಾರೆ.

ನಾನು ಅಧ್ಯಕ್ಷನಾಗಿ ಆಯ್ಕೆಗೊಂಡರೆ ಮೊದಲು ಖರ್ಚುಗಳಿಗೆ ಕಡಿವಾಣ ಹಾಕುತ್ತೇನೆ. ಆ ನಂತರ 2020ರ ವೇಳೆಗೆ ಬಜೆಟ್ ಅನ್ನು ಸಮತೋಲನಗೊಳಿಸುವೆ ಎಂದು ಅಮೆರಿಕದ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಅಭ್ಯರ್ಥಿ ಮಿಟ್ ರೋಮ್ನಿ ರಾಜಕೀಯ ಭರವಸೆ ನೀಡಿದ್ದಾರೆ. ಅಮೆರಿಕದ ಸಾಲ: ಆತಂಕಕಾರಿ ವಿಷಯಗಳು... ಕ್ಲಿಕ್ಕಿಸಿ.

English summary
US national debt hits $16 trillion. The Treasury Department said Tuesday that the national debt has topped $16 trillion, the result of chronic government deficits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X