ಅಮೆರಿಕದಲ್ಲಿ ಈಜಾಡುತ್ತಾ ಜಲಸಮಾಧಿಯಾದ ಟೆಕ್ಕಿ

25 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಪೊಡಪಾಟಿ ರಾಜಾ ಚೌಧರಿ ಆಂಧ್ರದ ಪ್ರಕಾಶಂ ಜಿಲ್ಲೆಯ ಅದ್ದಾಂಕಿ ನಿವಾಸಿ. ಈತ ಸೆ. 1ರಂದು ಶನಿವಾರ ತನ್ನ 11 ಮಂದಿ ಸ್ನೇಹಿತರೊಂದಿಗೆ ಮೋಜಿನ ಈಜಿನಲ್ಲಿ ಮೈಮರೆತಿದ್ದಾಗ ಜೀವಂತ ಜಲಸಮಾಧಿಯಾಗಿದ್ದಾರೆ.
ಹರಿಯುವ ಹೊಳೆಯಲ್ಲಿ ಆಳಕ್ಕೆ ಇಳಿದಿದ್ದ ರಾಜಾ ಚೌಧರಿ ಆಯತಪ್ಪಿದ್ದಾನೆ. ಆಗ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ಆದರೆ ಆತ ಅದಾಗಲೇ ಸ್ನೇಹಿತರಿಂದ ತುಂಬ ದೂರ ಸಾಗಿದ್ದ. ಆದರೂ ಸ್ನೇಹಿತರು ರಾಜಾ ಚೌಧರಿ ಸಹಾಯಕ್ಕೆ ಮುಂದಾದರು. ಇಬ್ಬರು ರಾಜಾ ಚೌಧರಿಯನ್ನು ನೀರಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾದರು.
ತಕ್ಷಣ ರಾಜಾ ಚೌಧರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆ ವೇಳೆಗೆ ರಾಜಾ ಚೌಧರಿ ಪ್ರಾಣ ನೀಗಿದ್ದ. ಶನಿವಾರವೇ ರಾಜಾ ಚೌಧರಿ ಮೃತಪಟ್ಟಿದ್ದರೂ ಆತನ ಪೋಷಕರಿಗೆ ವಿಷಯ ಸೋಮವಾರವಷ್ಟೇ ತಿಳಿದುಬಂದಿದೆ. ರಾಜಾ ಚೌಧರಿ ಸಾವು ಆಕಸ್ಮಿಕ ಎಂದು ನ್ಯೂಯಾರ್ಕ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ
ಮೃತ ರಾಜಾ ಚೌಧರಿ 2010ರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ರಾಜಾ ಚೌಧರಿ ಸಾಫ್ಟ್ ವೇರ್ ಉದ್ಯೋಗ ಸಿಗುತ್ತಿದ್ದಂತೆ ಅಮೆರಿಕಕ್ಕೆ ತೆರಳಿದರು. ರಾಜಾ ಚೌಧರಿ ಅವರ ತಂದೆ TDP ನಾಯಕರು.












Click it and Unblock the Notifications