ಉಸ್ತಾದ್ ಬಾಲೆ ಖಾನ್ 70-ಸಂಗೀತ ಸ್ಮರಣೆ

ಬೆಂಗಳೂರಿನ ಉಸ್ತಾದ್ ಬಾಲೆ ಖಾನ್ ಸ್ಮರಣ ಸಂಸ್ಥೆ ಆಯೋಜಿಸಿರುವ ಈ ಸಂಗೀತ ಕಾರ್ಯಕ್ರಮ ಜೆಎಸ್ ಎಸ್ ಸಭಾಂಗಣದಲ್ಲಿ ಶನಿವಾರ(ಸೆ.1) ನಡೆಯಲಿದೆ.
ಕಾರ್ಯಕ್ರಮ ವಿವರ:
ಕಾರ್ಯಕ್ರಮದ ಹೆಸರು: ಸ್ಮರಣೆ
ಹಿಂದೂಸ್ತಾನಿ ಗಾಯನ: ಪಂಡಿತ್ ಶ್ರೀನಿವಾಸ ಜೋಶಿ
ಪಕ್ಕವಾದ್ಯ: ತಬಲ: ಪ್ರಶಾಂತ್ ಪಾಂಡವ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ
ಮೋಹನ ವೀಣಾ: ಪಂಡಿತ್ ವಿಶ್ವಮೋಹನ್ ಭಟ್, ಗ್ರ್ಯಾಮಿ ಪ್ರಶಸ್ತಿ ವಿಜೇತರು
ಪಕ್ಕವಾದ್ಯ: ತಬಲ: ಪಂಡಿತ್ ರಾಮಕುಮಾರ್ ಮಿಶ್ರಾ
ಮುಖ್ಯ ಅತಿಥಿ: ಕೆಆರ್ ರಾಮಕೃಷ್ಣ, ಐಎಎಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಟಿಕೆಟ್ ದರ: 100 ಹಾಗೂ 200 ರು.
ಸ್ಥಳ: ಜೆಎಸ್ ಎಸ್ ಸಭಾಂಗಣ, ಜೆಎಸ್ಎಸ್ ಸರ್ಕಲ್, 1ನೇ ಮುಖ್ಯರಸ್ತೆ
8ನೇ ಬ್ಲಾಕ್, ಜಯನಗರ, ಬೆಂಗಳೂರು 560 070
ಸಮಯ: 5.30 ಸಂಜೆ
ಟಿಕೆಟ್ ಗಳಿಗಾಗಿ ಸಂಪರ್ಕಿಸಿ:
ಹಫೀಜ್ ಬಾಲೆ ಖಾನ್: 98861 55663
ಶಾರದಾ ಶ್ರೀನಿವಾಸನ್ : 98800 88455
ಮನೋಜ್ ಎಲ್ : 97311 22443
ಉಸ್ತಾದ್ ಬಾಲೆ ಖಾನ್ : 'ಖಾನ್ ಸಾಹೇಬ್' ಎಂದೇ ಆಪ್ತರಿಂದ ಕರೆಸಿಕೊಳ್ಳುತ್ತಿದ್ದ ಖ್ಯಾತ ಸಿತಾರ್ ವಾದಕ ಬಾಲೆ ಖಾನ್ ಅವರು ಕಲಾ ಪ್ರಪಂಚವನ್ನು 2007ರಲ್ಲಿ ತ್ಯಜಿಸಿದರು. ಅವರಿಗೆ ಆಗ 64 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಸೇರಿದಂತೆ ಸೇರಿದಂತೆ ಅಪಾರ ಅಭಿಮಾನಿಗಳು ಮತ್ತು ಶಿಷ್ಯವರ್ಗವನ್ನು ಖಾನ್ ಸಾಹೇಬ್ ಅಗಲಿದ್ದರು.
ಉಸ್ತಾದ್ ರೆಹಮತ್ ಖಾನ್ ಸಾಹೇಬ್, ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬ್ ನಂತರ ಸಿತಾರ್ ವಾದನದ ನಾದವನ್ನು ಎಲ್ಲೆಡೆ ಹರಿಡಿದ ಕೀರ್ತಿ ಉಸ್ತಾದ್ ಬಾಲೆ ಖಾನ್ ಅವರಿಗೆ ಸಲ್ಲುತ್ತದೆ. ಉಸ್ತಾದ್ ಬಾಲೆ ಖಾನ್ ಅವರ ಸ್ಮರಣಾರ್ಥ ಪ್ರತಿ ವರ್ಷ ಅವರ ಹೆಸರಿನ ಟ್ರಸ್ಟ್ ಸ್ಮರಣೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಸಂಗೀತ ಪ್ರೇಮಿಗಳಿಗೆ ಇದಕ್ಕಿಂತ ಸೌಭಾಗ್ಯ ಇನ್ನುಂಟೆ...












Click it and Unblock the Notifications