• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಎಸ್ ವರ್ಗ: ಯಡಿಯೂರಪ್ಪನ ಚಾಳಿ ಮುಂದುವರಿಕೆ

By Mahesh
|
ಬೆಂಗಳೂರು, ಆ.28: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾಲದಲ್ಲಿ ಆರಂಭವಾದ ಅಧಿಕಾರಿಗಳ ರಾಶಿಗಟ್ಟಲೆ ವರ್ಗಾವಣೆ ಚಾಳಿಯನ್ನು ಸದಾನಂದ ಗೌಡರ ನಂತರ ಜಗದೀಶ್ ಶೆಟ್ಟರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 19 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ನಂತರ ಕರ್ನಾಟಕ ಸರ್ಕಾರ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಯಡಿಯೂರಪ್ಪ ಅವರ ಕಾಲದಲ್ಲಿ 20-30ಕ್ಕೆ ನಿಂತಿದ್ದ ಅಧಿಕಾರಗಳ ವರ್ಗಾವಣೆ ಸಂಖ್ಯೆಯನ್ನು ಮೀರಿಸಿದ ಖ್ಯಾತಿಗೆ ಡಿವಿ ಸದಾನಂದ ಅವರು ಪಡೆದಿದ್ದರು. ಸುಮಾರು 36 ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಸದಾನಂದ ಗೌಡರು ವರ್ಗಾವಣೆ ಮಾಡಿದ್ದರು.

ಈ ಇಬ್ಬರು ಮಾಜಿ ಸಿಎಂಗಳನ್ನು ವರ್ಗಾವಣೆ ಸಂಖ್ಯೆಯಲ್ಲಿ ಜಗದೀಶ್ ಶೆಟ್ಟರ್ ಮೀರಿಸದಿದ್ದರೂ, ಆಯಾಕಟ್ಟಿನ ಜಾಗದಲ್ಲಿ ಕರ್ತವ್ಯಕ್ಕೆ ಲೋಪ ತಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಲ್ಲಿ ಮುಂದಿದ್ದಾರೆ. ಇದಕ್ಕೆ ಬಿಬಿಎಂಪಿ ಆಯುಕ್ತರ ವರ್ಗಾವಣೆಯೇ ಸಾಕ್ಷಿ.

ಪದೇ ಪದೇ ವರ್ಗಾವಣೆ ಅನಿವಾರ್ಯ: ಆಡಳಿತ ಯಂತ್ರ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಬಡ್ತಿ ನೀಡುವುದು ಸಾಮಾನ್ಯ ವಿಷಯವಾಗಿದೆ. ಅಧಿಕಾರಿಗಳ ಸೇವೆ ರಾಜ್ಯದ ಎಲ್ಲಾ ಭಾಗದ ಜನಕ್ಕೂ ಸಿಗುವಂತಾಗಲಿ ಎಂಬುದು ನಮ್ಮ ಆಶಯ ಎಂದು ಎಲ್ಲಾ ಮುಖ್ಯಮಂತ್ರಿಗಳು ಹೇಳುವ ಹಳೆ ಡೈಲಾಗ್ ಅನ್ನು ಶೆಟ್ಟರ್ ಅವರ ಕಚೇರಿ ವಕ್ತಾರರು ಹೇಳಿದ್ದಾರೆ.

ರಾಜ್ಯ ಸರ್ಕಾರ 9 ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
* ಮುದ್ದುಮೋಹನ್:ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ.,
* ಕರೀಗೌಡ: ಉಪ ನಿರ್ದೇಶಕರು(ಯೋಜನೆ), ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
* ಆರ್.ಲತಾ:ಹಿರಿಯ ಉಪ ವಿಭಾಗಾಧಿಕಾರಿ, ಪಾಂಡವಪುರ ಉಪ ವಿಭಾಗ, ಪಾಂಡವಪುರ, ಮಂಡ್ಯ.
* ಎಚ್.ಬಸವರಾಜೇಂದ್ರ:ಮುಖ್ಯ ಆಡಳಿತಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ.
* ಕೆ.ಜ್ಯೋತಿ: ಮುಖ್ಯ ಆಡಳಿತಾಧಿಕಾರಿ, ಆಯುಷ್ ನಿರ್ದೇಶನಾಲಯ, ಬೆಂಗಳೂರು.
* ಡಾ.ಅರುಂಧತಿ ಚಂದ್ರಶೇಖರ್:ಹೆಚ್ಚುವರಿ ನಿರ್ದೇಶಕ, ನೆಮ್ಮದಿ, ಕಂದಾಯ ಇಲಾಖೆ, ಬೆಂಗಳೂರು.
* ಜಿ.ಅನುರಾಧಾ: ಉಪ ವಿಭಾಗಾಧಿಕಾರಿ, ತರೀಕೆರೆ ಉಪ ವಿಭಾಗ, ತರೀಕೆರೆ, ಚಿಕ್ಕಮಗಳೂರು.
* ಶಶಿಧರ ಕುರೇರ: ಉಪ ವಿಭಾಗಾಧಿಕಾರಿ, ಕುಮಟಾ ಉಪ ವಿಭಾಗ, ಕುಮಟಾ, ಉತ್ತರ ಕನ್ನಡ.
* ಬಿ.ಶಿವಯ್ಯ:ವಿಶೇಷ ಭೂ ಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.

ಐಪಿಎಸ್ ಅಧಿಕಾರಿಗಳು: ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
* ದಿವ್ಯಾ ವಿ.ಗೋಪಿನಾಥ್: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ರಾಯಚೂರು ಉಪ ವಿಭಾಗ, ರಾಯಚೂರು.
* ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್.:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.
* ವರ್ತಿಕಾ ಕಾಟಿಯಾರ್:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಗೋಕಾಕ್ ಉಪ ವಿಭಾಗ, ಬೆಳಗಾವಿ ಜಿಲ್ಲೆ.
* ಚೇತನ್ ಆರ್.:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿಜಾಪುರ ಉಪ ವಿಭಾಗ, ಬಿಜಾಪುರ ಜಿಲ್ಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕೆಎಎಸ್ ಸುದ್ದಿಗಳುView All

English summary
After major bureaucratic shake up, the BJP Government in Karnataka today (Aug.29) transferred 9 KAS officers. Muddu Mohan has been transferred to women welfare department. One can recall Couple of days back 19 IAS officers transferred including BBMP commissioner.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more