ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಿಷ್ಯದಲ್ಲಿ ಪಾಕ್ ಸೋಲಿಸೋದು ನಮ್ಗೆ ಕಷ್ಟ

By Mahesh
|
Google Oneindia Kannada News

Petrol Price
ಬೆಂಗಳೂರು, ಆ.28: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಕೇಂದ್ರ ಸರ್ಕಾರ ಕೈಚೆಲ್ಲಿರುವುದಕ್ಕೆ ಅವೈಜ್ಞಾನಿಕ ದರ ನಿಗದಿ ವ್ಯವಸ್ಥೆಯೇ ಕಾರಣ ಎನ್ನಲಾಗಿದೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ಹಾಗೂ ರಷ್ಯಾದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ತುಂಬಾ ಕಡಿಮೆ ಇದೆ. ಈ ವಿಷಯದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕುವುದು ಭಾರತಕ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದಾರೆ.

ಚೀನಾದಲ್ಲಿ ಪೆಟ್ರೋಲ್ ಖರೀದಿಸುವ ಗ್ರಾಹಕರು ಸರಿ ಸುಮಾರು ಭಾರತದಷ್ಟೇ ಬೆಲೆ ತೆರಬೇಕಾಗುತ್ತದೆ. ಅದರೆ, ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ 12 ರು/ಲೀ ಹಾಗೂ ರಷ್ಯಾದಲ್ಲಿ 20 ರು / ಲೀ ಕಡಿಮೆ ವೆಚ್ಚ ತಗುಲುತ್ತದೆ.

ಸಗಟು ದರದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಡಿಸೇಲ್, ಸೀಮೆಎಣ್ಣೆ, ಎಲ್ ಪಿಜಿ ಬೆಲೆ ಜೂನ್ 2011ರ ನಂತರ ಪರಿಷ್ಕರಿಸಿಲ್ಲ.

ಚೀನಾ ಮಾದರಿ ಸೂಕ್ತ: ಚೀನಾದಲ್ಲಿ 2009ರಲ್ಲಿ ಒಂದು ವ್ಯವಸ್ಥೆ ಮಾಡಿಕೊಳ್ಳಲಾಯಿತು. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಸತತವಾಗಿ 22 ದಿನಗಳಿಗೂ ಅಧಿಕ ಕಾಲ ಶೇ 4 ರಷ್ಟು ಏರಿಳಿತ ಕಂಡರೆ ಅದಕ್ಕೆ ಅನುಗುಣವಾಗಿ ದೇಶಿ ಸಗಟು ತೈಲ ಮಾರುಕಟ್ಟೆ ದರವನ್ನು ಬದಲಾಯಿಸಲಾಗುತ್ತ್ತಿತ್ತು. ಈ ರೀತಿ ಹಠಾತ್ ಬದಲಾವಣೆಯಿಂದ ಆಗಬಹುದಾದ ಸಂಚಲನವನ್ನು ಸಮತೋಲನಗೊಳಿಸಲಾಯಿತು.

ಪಾಕಿಸ್ತಾನದಲ್ಲೂ ಭಾರತದಲ್ಲಿದ್ದಂತೆ ಆಂತರಿಕ ವೆಚ್ಚ,ಡೀಲರ್ ಸುಂಕ, ಮಾರಾಟ ತೆರಿಗೆ ಎಲ್ಲವೂ ಇದೆ. ಆದರೆ, ಆಮದು-ರಫ್ತು ವಹಿವಾಟು ಉತ್ತಮವಾಗಿದ್ದು ಭಾರತಕ್ಕೆ ಸವಾಲು ಒಡ್ಡಿ ನಿಂತಿದೆ.

ಯುಎಸ್ ಡಾಲರ್ ಮೇಲೆ ಅವಲಂಬಿತವಾಗಿರುವ ಪೆಟ್ರೋಲ್/ ಡೀಸೆಲ್ ಬೆಲೆಗಳು ಸ್ಥಳೀಯ ಕರೆನ್ಸಿ ವ್ಸ್ ಡಾಲರ್ ಸಮರದ ಮೇಲೆ ಆಧಾರವಾಗಿರುತ್ತದೆ. ಹೀಗಾಗಿ ಭಾರತದಲ್ಲಿ ಮೊದಲಿಗೆ ಕರೆನ್ಸಿ ಏರುಪೇರು ಸಮತೋಲನ ಕಾಯ್ದುಕೊಳ್ಳಲು ವಿನಿಮಯ ದರ ನಿಯಮಗಳನ್ನು ಸಡಿಲಗೊಳಿಸಬೇಕು. ಇಲ್ಲದಿದ್ದರೆ, ರುಪಾಯಿ ಮೌಲ್ಯ ಏರುಪೇರು ಆಗುತ್ತಿದ್ದಂತೆ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ.

ಬೆಲೆ ನಿಗದಿ ಹೇಗೆ ? : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಮತ್ತು ಡಾಲರ್‌ಗೆ ಪ್ರತಿಯಾಗಿ ಇರುವ ರುಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸಲಾಗಿದೆ.

ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿಯೂ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿತ್ತು. ಪ್ರತಿ ಲೀಟರ್ ಪೆಟ್ರೋಲ್ ಗೆ 6.28 ರು ಕಳೆದುಕೊಳ್ಳುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

English summary
Consumers and Stakeholders are suffering due to illogical petroeum products pricing mechanism in india. The Petrol price in India and China looks similar but compare to Russia and Pakistan they are cheaper by about Rs 12/litre and Rs 20/litre, respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X