ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗ್ ದೇ ಮೂಲಕ ಹರಿದ ರಘು ಸಂಗೀತದ ಹೊನಲು

By Prasad
|
Google Oneindia Kannada News

ಬೆಂಗಳೂರು, ಆ. 24 : ಈ ವರ್ಷದ ಸ್ವಾತಂತ್ರ್ಯ ದಿನೋತ್ಸವ ಹೊಸಬಗೆಯ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದೆ. ಆ ಪುಟ್ಟ ಹಳ್ಳಿಯಲ್ಲಿ ವಿನೂತನ ಸಂಚಲನ ಮೂಡಿತ್ತು. ಅಲ್ಪಸ್ವಲ್ಪ ಸಾಲ ಪಡೆದು ಬದುಕು ಕಟ್ಟಿಕೊಳ್ಳುತ್ತಿರುವವರಲ್ಲಿ ವಿಶ್ವಾಸದ ನಗೆ ಮೂಡಿತ್ತು. ಜೊತೆಗೆ ರಾಕ್ ಸ್ಟಾರ್ ರಘು ದೀಕ್ಷಿತ್ ಅವರ ಸಂಗೀತ ಕೇಳುಗರನ್ನೆಲ್ಲ ಗುಂಗು ಹಿಡಿಸಿತ್ತು.

Raghu Dixit with villagers

ಇಂತಹ ವಿನೂತನ ಪ್ರಯೋಗ ಮಾಡಿದ್ದು ರಂಗ ದೇ ಬೆಂಗಳೂರು ಮೂಲದ ಎಂಬ ಲಾಭರಹಿತ ಸಂಸ್ಥೆ. ಆರ್ಥಿಕವಾಗಿ ಹಿಂದುಳಿದ ಜನತೆಯಲ್ಲಿ ಬದುಕಿನ ಕುರಿತು ಚೈತನ್ಯ ಮೂಡಿಸಲು ಶ್ರಮಿಸುತ್ತಿರುವ ಸಂಸ್ಥೆ ಬಡಜನತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿತ್ತಿದೆ. ಈ ಸಂಸ್ಥೆ ರಂಗ್ ದೇ ಫ್ರೀಡಂ ಬಸ್ ಕನ್ಸರ್ಟ್ ಎಂಬ ಅಭಿಯಾನವನ್ನು ಆಗಸ್ಟ್ 15ರಂದು ಆಯೋಜಿಸಿತ್ತು.

ಇದಕ್ಕೆ ಹುರುಪಿನಿಂದ ಸಿದ್ಧರಾದವರು 43 ಯುವಕ ಯುವತಿಯರು. ಇವರಿಗೆ ಬೆಂಬಲವಾಗಿ ಮುಂದೆ ಬಂದಿದ್ದು, ರಂಗ್ ದೇ ಸಂಸ್ಥೆಯ ರಾಯಭಾರಿಯಾಗಿರುವ ಮತ್ತು ಸಾಮಾಜಿಕ ಹೂಡಿಕೆದಾರರಾಗಿರುವ ಸಂಗೀತಗಾರ ರಘು ದೀಕ್ಷಿತ್ ಅವರು. ಒಟ್ಟು ಮೂರು ದಿನಗಳ ಕಾಲ, ಮೂರು ರಾಜ್ಯಗಳನ್ನು ಕ್ರಮಿಸಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಸಾಲ ಪಡೆದ ಸುಮಾರು 500ಕ್ಕೂ ಹೆಚ್ಚಿನ ಜನರ ಜೊತೆ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಆಗಸ್ಟ್ 13ರಿಂದ ಬೆಂಗಳೂರಿನಿಂದ ಮಹಾರಾಷ್ಟ್ರದ ಹಳ್ಳಿಯಾದ ಪುಸಾದ್ ಅನ್ನು ತಲುಪಿದ್ದು ಆಗಸ್ಟ್ 14ರ ಬೆಳಿಗ್ಗೆ. ಅಂದು ಸಾಲ ಪಡೆದವರ ಜೊತೆ ಸಂಸ್ಥೆಯ ಕಾರ್ಯಕರ್ತರಿಂದ ಸಂವಾದ ನಡೆಸಲಾಯಿತು. ಜನರ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು. ಆ ಬಡಜನರಿಗೆ ವಿಭಿನ್ನ ಭಾರತದ ದರ್ಶನವಾಗಿತ್ತು. ಇಂತಹ ಅನುಭವ ಅವರಿಗೆ ಯಾವತ್ತೂ ಆಗಿರಲಿಲ್ಲ. ಅವರಿಗೆಲ್ಲ ಸಣ್ಣ ಪ್ರಮಾಣದ ಉದ್ಯಮದಲ್ಲಿ ಹಣ ಹೂಡುವ ಬಗ್ಗೆ ಮಾಹಿತಿ ಒದಗಿಸಲಾಯಿತು.

ಆಗಸ್ಟ್ 15ರ ಮುಂಜಾವು ಅವರಿಗೆ ಮತ್ತೊಂತು ಲೋಕದ ದರ್ಶನ ನೀಡಲಾಯಿತು. ಅದು ಮೈಸೂರಿನ ಕನ್ನಡಿಗ ರಘು ದೀಕ್ಷಿತ್ ಅವರ ಸಂಗೀತ ಲೋಕ. ಹಳ್ಳಿಗರಿಗೆ ಇದು ವಿಭಿನ್ನ ಅನುಭವವಾದರೆ, ರಘು ದೀಕ್ಷಿತ್ ಅವರು ಈ ಬಗೆಯ ಪ್ರೇಕ್ಷಕರ ಮುಂದೆ ಎಂದು ಸಂಗೀತ ಕಚೇರಿ ನಡೆಸಿರಲಿಲ್ಲ. "ರಘು ದೀಕ್ಷಿತ್ ಅವರ ಲೈವ್ ಕನ್ಸರ್ಟ್ ಯಾವತ್ತೂ ನೋಡಿರಲಿಲ್ಲ. ಸಂಸ್ಥೆಯ ಈ ವಿಭಿನ್ನ ಪ್ರಯೋಗ ಲೈವ್ ಸಂಗೀತ ನೋಡುವ ಅವಕಾಶವನ್ನೂ ಒದಗಿಸಿಕೊಟ್ಟಿತು" ಎಂದು ಸಂಸ್ಥೆಯ ಕಾರ್ಯಕರ್ತ ವಿಜಯ್ ಪಡಗುರಿ ಹರ್ಷ ವ್ಯಕ್ತಪಡಿಸಿದರು.

English summary
Rang De and the Freedom Bus took the road not taken and this journey saw the beginnings of new friendships, a greater belief in social change and a collective will to be the change that India needs! Raghu Dixit live music concert was the highlight of the initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X