ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಡಾ ಕೇಸ್ : ಸಂಜಯ್ ದತ್ ಗೆ 5 ವರ್ಷ ಜೈಲು ?

By Mahesh
|
Google Oneindia Kannada News

Sanjay Dutt
ಮುಂಬೈ/ನವದೆಹಲಿ, ಆ.23: ಬಾಲಿವುಡ್ ನ ಜನಪ್ರಿಯ ನಟ ಸಂಜಯ್ ದತ್ ಅವರು ಮತ್ತೊಮ್ಮೆ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ. 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಜಯ್ ಅವರು ಈಗಾಗಲೇ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಸಂಜಯ್ ದತ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿದ್ದ ಸಿಬಿಐ ತಂಡಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. 1993ರ ಮುಂಬೈ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿ ಹಿಡಿಯುವಂತೆ ಸಿಬಿಐ ತಂಡ ಸುಪ್ರೀಂಕೋರ್ಟ್ ಅನ್ನು ಸಿಬಿಐ ತಂಡ ಕೋರಿತ್ತು.

ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಸಂಜಯ್ ದತ್ ಅವರನ್ನು ಬಂಧಿಸಲಾಗಿತ್ತು ಹಾಗೂ 2006ರಲ್ಲಿ ವಿಶೇಷ ಟಾಡಾ ಕೋರ್ಟ್ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಉಳಿದ ಟಾಡಾ ಪ್ರಕರಣಗಳಿಂದ ಸಂಜಯ್ ಬಚಾವಾಗಿದ್ದರು.

ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸಂಜಯ್ ದತ್ ಅವರಿಗೆ ಜಾಮೀನು ಸಿಕ್ಕಿತ್ತು. ಅದರೆ, ಇತ್ತೀಚೆಗೆ ಸುಪ್ರೀಂಕೋರ್ಟ್ ಮುಂದೆ ನಿಂತ ಸಂಜಯ್ ದತ್,'ನಾನು ದಾವೂದ್ ಇಬ್ರಾಹಿಂ ಜೊತೆ ಡಿನ್ನರ್ ಮಾಡಿದ್ದು ನಿಜ. ಅದರೆ, ಅದು ಗೆಳೆತನಕ್ಕಾಗಿ ಮಾತ್ರ ನನಗೆ ಆತನ ಭೂಗತ ಚಟುವಟಿಕೆಗಳ ಬಗ್ಗೆ ಅರಿವಿರಲಿಲ್ಲ ಎಂದಿದ್ದರು.

1992ರ ಮಸೀದಿ ಧ್ವಂಸ ಹಾಗೂ 1993ರ ಸರಣಿ ಸ್ಫೋಟದ ಪ್ರಮುಖ ರುವಾರಿಯಾಗಿರುವ ದಾವೂದ್ ಜೊತೆಗೆ ಇದ್ದಿದ್ದನ್ನು ಸಂಜಯ್ ಒಪ್ಪಿಕೊಂಡಿರುವುದರಿಂದ ಶಿಕ್ಷೆ ಖಚಿತ ಎನ್ನಲಾಗಿದೆ.

1993ರ ಮುಂಬೈ ಸರಣಿ ಸ್ಫೋಟ ಘಟನೆಗೂ ಮುನ್ನ ನಾನು ದಾವೂದ್ ರನ್ನು ಭೇಟಿದ್ದು ನಿಜ ನಂತರ ಜೈಲುಶಿಕ್ಷೆ ಅನುಭವಿಸಿದ್ದೇನೆ. ಪಶ್ಚಾತ್ತಾಪ ಪಟ್ಟಿದ್ದೇನೆ ಎಂದು ಸಂಜಯ್ ಹೇಳಿದ್ದರು,

1993ರ ಸ್ಫೋಟಕ್ಕೆ ಸಂಬಂಧಿಸಿದಂತೆ ಮುಂಬೈನ ಉಗ್ರಗಾಮಿ ನಿಗ್ರಹ ಕೋರ್ಟ್ ನಲ್ಲಿ ಸುಮಾರು 50 ಜನರ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕಾರಣ, ಸುಮಾರು ಆರು ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ವಿಧಿಸಲಾಗಿತ್ತು. ನಾಯಕನಿಂದ ಖಳನಾಯಕ್ ಪಟ್ಟಕ್ಕೇರಿದ್ದ ಸಂಜಯ್ ಒಂದು ವರ್ಷ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು.

ನಂತರ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್ ತಮ್ಮ ತಂದೆ ಸುನಿಲ್ ದತ್ ರಂತೆ ಸಾತ್ವಿಕ ರಾಜಕಾರಣಿಯಾಗುವ ಭರವಸೆ ನೀಡಿದ್ದರು. ಅದರೆ, ಲೋಕಸಭಾ ಚುನಾವಣೆಯಲ್ಲಿ ಸಂಜಯ್ ಸ್ಪರ್ಧೆಗೆ ಲಖ್ನೋ ಕೋರ್ಟ್ ಅನುಮತಿ ನೀಡಿರಲಿಲ್ಲ. 2009ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್, ಒಂದು ವರ್ಷ ಬಳಿಕ ಪಕ್ಷ ತೊರೆದಿದ್ದರು.

2012 ವರ್ಷದ ಆರಂಭದಲ್ಲಿ ಸಂಜಯ್ ದತ್ ಅವರು ಕಾಂಗ್ರೆಸ್ ಪರ ಪ್ರಚಾರಕ್ಕೆ ನಾನು ಕೂಡಾ ರೆಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದರು.
ಸಮಾಜವಾದಿ ಪಕ್ಷ ಸೇರಿ ನಾನು ತಪ್ಪು ಮಾಡಿದೆ.

ನನಗೆ ಮೊದಲಿನಿಂದಲೂ ಕಾಂಗ್ರೆಸ್ ಮೇಲೆ ಒಲವು. ಪಂಡಿತ್ ಜವಾಹರ್ ಲಾಲ್ ನೆಹರೂ ಚಿಂತನೆಯನ್ನು ನಮ್ಮ ಅಪ್ಪ ಸುನೀಲ್ ದತ್ ಬಹುವಾಗಿ ಮೆಚ್ಚಿಕೊಂಡಿದ್ದರು. ಯುಪಿಎ ಸರ್ಕಾರ 2004-2005ರಲ್ಲಿ ಅಧಿಕಾರದಲ್ಲಿದ್ದಾಗ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ನಾನು ಕಾಂಗ್ರೆಸ್ ಸೇರಿ ಉತ್ತರ ಪ್ರದೇಶ ಜನತೆ ಏನಾದರೂ ಒಳ್ಳೆಯದು ಮಾಡುವೆ ಎಂದು ಸಂಜಯ್ ಹೇಳಿದ್ದರು.

English summary
Bollywood actor Sanjay Dutt may face a real legal trouble once again and may face imprisonment for five years if the Supreme Court accepts the demand of the investigative agency Central Bureau of Investigation (CBI)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X