ಸುಳ್ಳು ಪ್ರಮಾಣ ಪತ್ರ ಸಲ್ಲಿಸಿಲ್ಲ, ತನಿಖೆಗೆ ಸಿದ್ಧ: ಶೋಭಾ

Shobha Karandlaje
ಬೆಂಗಳೂರು, ಆ.23: 'ನಾನು ಯಾವುದೇ ಚುನಾವಣಾ ಅಕ್ರಮ ಎಸೆಗಿಲ್ಲ. ಅಭ್ಯರ್ಥಿಯಾಗಿ ಸಲ್ಲಿಸಬೇಕಾದ ಎಲ್ಲಾ ವಿವರಗಳನ್ನು ನೀಡಿದ್ದೇನೆ. ಸುಳ್ಳು ಪ್ರಮಾಣ ಪತ್ರ ಸಲ್ಲಿಸಿಲ್ಲ. ತನಿಖೆಗೆ ಸಿದ್ಧ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

2008ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಜೊತೆಗೆ ಸುಳ್ಳು ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ಚುನಾವಣಾ ಅಯೋಗಕ್ಕೆ ಬುಧವಾರ(ಆ.22) ದೂರು ಸಲ್ಲಿಸಿದ್ದಾರೆ.

ರಾಜ್ಯ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೋಭಾ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಕೆಲವು ಅಂಶಗಳನ್ನು ದಾಖಲು ಮಾಡಿಲ್ಲ ಎಂದು ಎನ್.ಹನುಮೇಗೌಡ ಎಂಬುವರು ದೂರು ನೀಡಿದ್ದರು.

ಯಲ್ಲಮ್ಮ ಮಿನರಲ್ಸ್ ಪ್ರೈ. ಲಿಮಿಟೆಡ್‌ನ ನಿರ್ದೇಶಕರಾಗಿರುವ ಶೋಭಾ ಕರಂದ್ಲಾಜೆ ಅವರು ತಮ್ಮ ಆಸ್ತಿ ವಿವರ ದಾಖಲಿಸುವಾಗ ಈ ಸಂಸ್ಥೆಯನ್ನು ಹೆಸರಿಸಿಲ್ಲ. ಶೋಭಾ ಅವರು ಪ್ರಮಾಣ ಪತ್ರದಲ್ಲಿ ಯಲ್ಲಮ್ಮ ಸಂಸ್ಥೆಯ ಉಲ್ಲೇಖವೇ ಇಲ್ಲ.

ಇದು ಚುನಾವಣಾ ನಿಯಮ ಉಲ್ಲಂಘನೆ. ಶೋಭಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಲ್ಲಮ್ಮ ಮಿನಿರಲ್ಸ್ ಷೇರುಗಳನ್ನು ಹೊಂದಿರುವ ಶೋಭಾ ಅವರ ಒಟ್ಟು ಆಸ್ತಿ ಗಳಿಕೆ ವಿವರಗಳಿಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರಕ್ಕೂ ವ್ಯತ್ಯಾಸವಿದೆ ಎಂದು ಹನುಮೇಗೌಡರು ದೂರಿದ್ದಾರೆ.

ಚುನಾವಣಾ ಆಯೋಗ ಶೋಭಾ ಅವರ ಪ್ರಮಾಣ ಪತ್ರ ಪ್ರಮಾದ ಹಾಗೂ ಆಸ್ತಿ ವಿವರಗಳ ಕುರಿತು ತನಿಖೆ ನಡೆಸಬೇಕು ಎಂದು ಹನುಮೇಗೌಡ ಮನವಿ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿರುವ ಜಿಲ್ಲಾ ಚುನಾವಣಾಧಿಕಾರಿಗೆ ತನಿಖೆಗೆ ಸೂಚಿಸುವ ಸಾಧ್ಯತೆ ಇದೆ. ಒಂದು ವೇಳೆ ಶೋಭಾ ಅಕ್ರಮ ಪತ್ತೆಯಾದರೆ ಅವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎನ್ನಲಾಗಿದೆ.

2007 ರಿಂದ 2010ರ ಅವಧಿಯಲ್ಲಿ ಯಲ್ಲಮ್ಮ ಮಿನಿರಲ್ಸ್ ಪ್ರೈ.ಲಿನ ನಿರ್ದೇಶಕಿಯಾಗಿದ್ದ ಶೋಭಾ ಕರಂದ್ಲಾಜೆ ಅವರು ಸುಮಾರು 49,000 ರು. ಮೌಲ್ಯದ 4.900 ಷೇರುಗಳನ್ನು ಖರೀದಿಸಿದ್ದರು. ಈ ಸಂಸ್ಥೆ ಮೊಲಾಸಿಸ್ ವ್ಯಾಪಾರದಲ್ಲಿ ತೊಡಗಿದೆ.

ಯಲ್ಲಮ್ಮ ಸಂಸ್ಥೆಯ ವಾರ್ಷಿಕ ಆದಾಯ, ಆಸ್ತಿ ವಿವರ ತಿಳಿದಿಲ್ಲ. ಅಸಲಿಗೆ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿದೆಯೇ? ಗೊತ್ತಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ವಿಷಯ ಬಹಿರಂಗವಾಗಲಿದೆ.

ಆದರೆ, ಆರೋಪಗಳನ್ನು ತಳ್ಳಿ ಹಾಕಿರುವ ಶೋಭಾ ಕರಂದ್ಲಾಜೆ ಅವರು, ಈ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರವನ್ನೇ ನಾನು ಲೋಕಾಯುಕ್ತ ಸಂಸ್ಥೆಗೂ ಸಲ್ಲಿಸಿದ್ದೇನೆ. ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+