ಈ ಹೋಟೆಲ್ ಎಲ್ಲಕ್ಕಿಂತ ವಿಭಿನ್ನ, ಯಾಕಂದ್ರೆ...

ಅದೇನೆಂದರೆ, 'ಆಶೋದಯ' ಎಂದು ಕರೆಯಲಾಗಿರುವ ಈ ಹೋಟೆಲನ್ನು ನಿರ್ವಹಿಸುತ್ತಿರುವುದು ಲೈಂಗಿಕ ಕಾರ್ಯಕರ್ತರು ಮತ್ತು ಹಿಜಡಾಗಳು. ಹನ್ನೆರಡು ಜನರು ನಡೆಸುತ್ತಿರುವ ಈ ಹೋಟೆಲಿನಲ್ಲಿ ಪುರುಷರೂ ಇದ್ದಾರೆ ಸ್ತ್ರೀಯರು ಇದ್ದಾರೆ. ಅಡುಗೆ ತಯಾರಿಸುವವರು ಯಾರಾದರೇನು, ಬಡಿಸುವವರು, ಸ್ವಚ್ಛಗೊಳಿಸುವವರು ಯಾರಾದರೇನು ಹೋಟೆಲು ಸ್ವಚ್ಛ ಸ್ವಚ್ಛವಾಗಿದೆ, ತಿಂಡಿಯೂ ಅಷ್ಟೇ ರುಚಿಯಾಗಿರುತ್ತದೆ.
ಈ ಹೋಟೆಲ್ ಇರುವುದು ಮೈಸೂರಿನಲ್ಲಿ, ಅರಮನೆ ಪಕ್ಕದಲ್ಲಿ. ಇದು ಪ್ರಾರಂಭವಾಗಿರುವುದು ವಿಶ್ವ ಏಡ್ಸ್ ದಿನಾಚರಣೆಯಂದು ಎಂಬುದು ಮತ್ತೊಂದು ವಿಶೇಷ. ಲೈಂಗಿಕ ಅಲ್ಪಸಂಖ್ಯಾತರು ಇಚ್ಛಿಸದೆ, ಅವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ, ಸೂಕ್ತ ಮಾರ್ಗದರ್ಶನದಲ್ಲಿ ಪ್ರಯತ್ನಪಟ್ಟರೆ ಸ್ವತಂತ್ರವಾಗಿ ಮತ್ತು ಗೌರವಯುತವಾಗಿ ಬದುಕು ಸಾಗಿಸುವುದು ಸಾಧ್ಯ ಎಂಬುದನ್ನು ಇಡೀ ಜಗತ್ತಿಗೇ ಈ ಹನ್ನೆರಡು ಜನರು ಸಾಧಿಸಿ ತೋರಿಸಿದ್ದಾರೆ.
ವಿಶ್ವ ಬ್ಯಾಂಕ್‌ನ ಸಹಕಾರದಿಂದ ಈ ಹೋಟೆಲನ್ನು ಆರಂಭಿಸಲಾಗಿದೆ. ಈ ಉದ್ಯಮಕ್ಕಾಗಿ 4.5 ಲಕ್ಷ ರು. ಹೂಡಲಾಗಿದ್ದು, ಖರ್ಚು ವೆಚ್ಚಗಳನ್ನು ಹೊರತುಪಡಿಸಿ, ಪ್ರತಿ ತಿಂಗಳು ಸಂಪಾದಿಸುವ ಲಾಭದ ಗಳಿಕೆಯನ್ನು ಮಂಡ್ಯದಲ್ಲಿರುವ ಆಶೋದಯ ಸಮಿತಿಯ ಶೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.












Click it and Unblock the Notifications