ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುಕುಳ ಕೇಸ್: ಪಾಮರನ ಮೆಟ್ಟಿ ನಿಂತ ಇನ್ಫೋಸಿಸ್

By Mahesh
|
Google Oneindia Kannada News

Infosys
ಕ್ಯಾಲಿಫೋರ್ನಿಯಾ, ಆ.21: ವೀಸಾ ವಂಚನೆ, ಕಿರುಕುಳ ಆರೋಪ ಹೊತ್ತಿದ್ದ ಇಲ್ಲಿನ ಇನ್ಫೋಸಿಸ್ ಸಂಸ್ಥೆ ಈಗ ನಿರಾಳವಾಗಿದೆ. ಅಲಬಾಮದ ಕೋರ್ಟ್ ಇನ್ಫೋಸಿಸ್ ವಿರುದ್ಧದ ಕಿರುಕುಳದ ಕೇಸ್ ವಜಾಗೊಳಿಸಿದೆ.

ಅಮೆರಿಕದ ವೀಸಾ ನೀತಿ, ಬಿಸಿನೆಸ್ ವೀಸಾ ನಿಯಮಗಳನ್ನು ಮೀರಿ ಭಾರತದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುವ ಮೂಲಕ ದೊಡ್ಡ ವಂಚನೆ ಜಾಲದಲ್ಲಿ ಇನ್ಫೋಸಿಸ್ ಮುಳುಗಿದೆ. ಉದ್ಯೋಗಿಗಳಿಗೆ ಇನ್ಫೋಸಿಸ್ ಕಿರುಕುಳ ನೀಡಿದೆ ಎಂದು ಯುಸ್ ಇನ್ಫೋಸಿಸ್ ನ ಮಾಜಿ ಉದ್ಯೋಗಿ ಜಾಕ್ ಪಾಮರ್ ಆರೋಪಿಸಿದ್ದರು.

ಜಾಕ್ ಪಾಮರ್ ಆರೋಪ ಆಧಾರಿಸಿ US Department of Homeland Security ತನಿಖೆ ಆರಂಭಿಸಿತ್ತು. ತನಿಖೆ ಅವಧಿ ಸಂದರ್ಭದಲ್ಲಿ ಇನ್ಫೋಸಿಸ್ ಸಂಸ್ಥೆ ಷೇರುಗಳು ದಾಖಲೆ ಪ್ರಮಾಣದಲ್ಲಿ ಇಳಿಮುಖ ಕಂಡಿತ್ತು. ಆದರೆ, ಮಂಗಳವಾರ(ಆ.21) ಇನ್ಫಿ ಷೇರುಗಳು ಬಿಎಸ್ ಇನಲ್ಲಿ 2,409.30 ರು.ನಂತೆ ಶೇ3.34ರಷ್ಟು ಏರಿಕೆ ಕಂಡಿತ್ತು.

ಜಾಕ್ ಜೇ ಪಾಮರ್ ಜೂ. ಅವರು ಮಾಡಿರುವ ಆರೋಪಗಳಿಗೆ ಸರಿಯಾದ ಸಾಕ್ಷಿ ಆಧಾರಗಳಿಲ್ಲದ ಕಾರಣ ಇನ್ಫೋಸಿಸ್ ಟೆಕ್ನಾಲಜೀಸ್ ಲಿ. ಸಂಸ್ಥೆಯನ್ನು ನಿರ್ದೋಷಿಯಾಗಿ ಘೋಷಿಸಬಹುದು ಎಂದು ಯುಸ್ ಡಿಸ್ಟ್ರಿಕ್ಟ್ ಜಡ್ಜ್ ಮೈರಾನ್ ಎಚ್ ಥಾಮನ್ಸ್ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಇನ್ಫೋಸಿಸ್ ಸಂಸ್ಥೆ ವಕ್ತಾರರು, ನಾವು ಮೊದಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೆವು. ಸತ್ಯ ಹೊರಬಿದ್ದಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಅಮೆರಿಕದ ಅತಿದೊಡ್ಡ ವೀಸಾ ವಂಚನೆ ಜಾಲ ಇದಾಗಿದ್ದು ಉತ್ತರ ಅಮೆರಿಕ ಮಾರುಕಟ್ಟೆಯಿಂದ ಶೇ 60 ರಷ್ಟು ಆದಾಯವನ್ನು ಇನ್ಫೋಸಿಸ್ ಗಳಿಸುತ್ತಿದೆ.

ಹೊರಗುತ್ತಿಗೆ ಬಗ್ಗೆ ಅಮೆರಿಕದಲ್ಲಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಇನ್ಫೋಸಿಸ್ ಸಂಸ್ಥೆ H-1B ವೀಸಾ ನಿಯಮಗಳನ್ನು ಗಾಳಿಗೆ ತೂರಿ ಅಲ್ಪ ಜ್ಞಾನ ಇರುವ ಸಿಬ್ಬಂದಿಗಳನ್ನು ಬಿ1 ವೀಸಾ ಮೂಲಕ ಅಮೆರಿಕಕ್ಕೆ ಕರೆಸಿಕೊಳ್ಳುತ್ತಿದೆ ಎಂದು ಪಾಮರ್ ಆರೋಪಿಸಿದ್ದರು.

ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಬರೆದಿರುವ ಇಮೇಲ್ ಪತ್ರಗಳ ಪ್ರತಿಯನ್ನು ಕೋರ್ಟಿಗೆ ಪಾಮರ್ ಸಲ್ಲಿಸಿದ್ದಾರೆ. ಆದರೆ, ಇಮೇಲ್ ಗಳನ್ನು ತಿದ್ದಲಾಗಿದೆ. ಮೂಲ ಪ್ರತಿಯ ಬದಲಿಗೆ ಬೇರೆ ವಾಕ್ಯಗಳನ್ನು ಸೇರಿಸಲಾಗಿದೆ ಎಂದು ಇನ್ಫೋಸಿಸ್ ಸಂಸ್ಥೆ ಪ್ರತಿವಾದ ಮಾಡಿತ್ತು.

ಮತ್ತೊಂದು ಪ್ರಕರಣದಲ್ಲಿ ಸತ್ಯ ದೇವ್ ತ್ರಿಪುರನೇನಿ ಎಂಬ ಹೆಸರಿನ ವ್ಯಕ್ತಿ ಇನ್ಫೋಸಿಸ್ ಸಂಸ್ಥೆ B1 ವೀಸಾ ವಂಚನೆ ಜಾಲದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಇನ್ಫೋಸಿಸ್ ನ ಯುಎಸ್ ವಿಭಾಗದಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದ ಸತ್ಯದೇವ್ ಸುಮಾರು 5 ವರ್ಷ ಕಾಲ ಇನ್ಫೋಸಿಸ್ ನ ಉದ್ಯೋಗಿಯಾಗಿದ್ದರು.

English summary
A US court in Alabama has dismissed harassment charges filed against Infosys the major Indian IT company by one of its American employee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X