ಹಾಸನ ಬಿಟ್ಟು ಕದಲಲ್ಲ ಎಂದ ಈಶಾನ್ಯ ವಿದ್ಯಾರ್ಥಿಗಳು

ಹಾಸನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಇತರ ಕೋರ್ಸ್ ಗಳನ್ನು ಓದುತ್ತಿರುವ ನೂರಾರು ವಿದ್ಯಾರ್ಥಿಗಳು ತಮಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಪಾಯಗಳೂ ಉಂಟಾಗಿಲ್ಲ. ಇಲ್ಲಿ ಯಾವ ರೀತಿಯಲ್ಲೂ ಸುಳ್ಳು ವದಂತಿ ಹಬ್ಬಿಲ್ಲ. ಹೀಗಾಗಿ ನಾವು ಹಾಸನ ಬಿಟ್ಟು ನಮ್ಮೂರಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ.
"ನಮ್ಮ ಪೋಷಕರು ಸಾಕಷ್ಟು ಆತಂಕಗೊಂಡಿದ್ದಾರೆ. ದೂರವಾಣಿ ಕರೆ ಮಾಡಿ ಊರಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಕೂಡ. ಆದರೆ ಜಿಲ್ಲಾ ಪೊಲೀಸರು ಇಲ್ಲಿ ಸೂಕ್ತ ಭದ್ರತೆ ನೀಡಿರುವದರ ಜೊತೆಗೆ ಕಾಲೇಜಿನಲ್ಲಿ ಆಡಳಿತ ಮಂಡಳಿ ಕೂಡ ಯಾವುದೇ ತೊಂದರೆಯಾಗದಂತೆ ಅಭಯ ನೀಡಿರುವುದರಿಂದ ನಮಗೇನೂ ಭಯವಿಲ್ಲ.
ನಾವು ನಮ್ಮ ಪೋಷಕರಿಗೆ ಈ ಕಾರಣಕ್ಕೆ ಊರಿಗೆ ಬರುವುದಿಲ್ಲ ಎಂದೇ ಹೇಳುತ್ತಿದ್ದೇವೆ. ಸಹಜವಾಗಿ ಆತಂಕಗೊಂಡಿರುವ ನಮ್ಮ ಪೋಷಕರು ವಾಪಸ್ಸಾಗುವಂತೆ ಹೇಳಿ ವಿಮಾನ ಯಾನದ ಟಿಕೆಟ್ ಕೊಡಿಸಿದ್ದಾರೆ. ಆದರೆ ನಮಗೇನೂ ತೊಂದರೆ ಇಲ್ಲದ ಕಾರಣ ನಾವು ಊರಿಗೆ ಹೋಗುವುದಿಲ್ಲ" ಎಂದಿದ್ದಾರೆ.












Click it and Unblock the Notifications