ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನದು ನಿರ್ವಿಕಾರ: 'ಪ್ರಧಾನಿ ಅಭ್ಯರ್ಥಿ' ಮೋದಿ

By Srinath
|
Google Oneindia Kannada News

iam-nirvikar-pm-candidate-gujarat-cm-narendra-modi
ಅಹಮದಾಬಾದ್,ಆ. 18: ಮುಂದಿನ ತಿಂಗಳು (ಸೆ. 17) ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನದು ''ನಿರ್ವಿಕಾರ'' ಎಂದಿದ್ದಾರೆ.

10 ವರ್ಷದಿಂದ ಮುಖ್ಯಮಂತ್ರಿ ಸ್ಥಾನ ಅನುಭವಿಸುತ್ತಿರುವ ಮೋದಿ ಸಾಹೇಬರು ಯಾಕಪ್ಪಾ ಇಂತಹ ಮಾತು ಹೇಳಿದ್ದಾರೆ ಅಂದರೆ ಪತ್ರಕರ್ತರೊಬ್ಬರು 'ಸಾರ್, ನೀವು ಪ್ರಧಾನಿ ಅಭ್ಯರ್ಥಿಯಲ್ವಾ?' ಅಂತ ಕೇಳಿದ್ದಕ್ಕೆ ನನ್ನದು 'ನಿರ್ವಿಕಾರ ಭಾವ. ಅದರ (ಪ್ರಧಾನಿ ಹುದ್ದೆ) ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

'ಯೋಗ ಮತ್ತು ಪ್ರಾಣಾಯಾಮ ಮಾಡುವವರಿಗೆ ಸುತ್ತಲಿನ ಹಕ್ಕಿಗಳ ಚಿಲಿಪಿಲಿ ಸೇರಿದಂತೆ ಯಾವುದೇ ಸದ್ದು ಕೇಳಿಸುವುದಿಲ್ಲ. ಕತ್ತಲೋ, ಬೆಳಕೋ ಯಾವುದೇ ಇದ್ದರೂ ಅದು ಪರಿಣಾಮ ಬೀರದು. ಅವರು ನಿರ್ವಿಕಾರವಾಗುತ್ತಾರೆ. ಹಾಗೆಯೇ ನಾನು ಪ್ರಧಾನಿ ಅಭ್ಯರ್ಥಿ ಹೌದೇ, ಅಲ್ಲವೇ ಎಂಬುದರ ಬಗ್ಗೆ ನಿರ್ವಿಕಾರವಾಗಿದ್ದೇನೆ' ಎಂದು 'ವೇದಾಂತಿ' ನರೇಂದ್ರ ಮೋದಿ ಹೇಳಿದ್ದಾರೆ.

'ರಾಜ್ಯದ 6 ಕೋಟಿ ಜನರ ಪ್ರತಿನಿಧಿಯಾಗಿ ಅವರ ಕ್ಷೇಮೋಭ್ಯುದಯ ಮಾಡುವುದಷ್ಟೇ ನನ್ನ ಆದ್ಯ ಕರ್ತವ್ಯ. ನಾನು ಆ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತೇನೆ ಎಂಬುದನ್ನು ಅವಲಂಬಿಸಿ ನನಗೆ ಯಶಸ್ಸು ದೊರಕುತ್ತದೆ' ಎಂದು ಭಾವಿ ಪ್ರಧಾನಿ ಎಂದು ಬಿಂಬಿತವಾಗಿರುವ ಮೋದಿ ತಿಳಿಸಿದ್ದಾರೆ.

ಪಕ್ಷದಲ್ಲಿ ಆರು ಮಂದಿ ಪ್ರಧಾನಿ ಅಭ್ಯರ್ಥಿಗಳು: ನರೇಂದ್ರ ಮೋದಿ ಅವರು ಬಿಜೆಪಿಯಲ್ಲಿನ ಆರು ಮಂದಿ ಪ್ರಧಾನಿ ಅಭ್ಯರ್ಥಿಗಳ (ಆಡ್ವಾಣಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೆಟ್ಲಿ, ಎಂಎಂ ಜೋಶಿ) ಪೈಕಿ ಒಬ್ಬರು. ಆದರೆ ಪಕ್ಷವು ಯಾವುದೇ ಒಬ್ಬ ಅಭ್ಯರ್ಥಿಯನ್ನು ಇನ್ನೂ ಆಖೈರುಗೊಳಿಸಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ಗುರುವಾರವಷ್ಟೇ ಹೇಳಿದ್ದಾರೆ.

2014ರ ಮಹಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಲ್ಲಿ ಪ್ರಧಾನಿ ಅಭ್ಯರ್ಥಿಗಾಗಿ ಮುಸುಕಿನ ಗುದ್ದಾಟ ನಡೆದಿರುವುದು ಬಹಿರಂಗ ಸತ್ಯವಾಗಿದೆ. ಬಿಜೆಪಿ ಸಾರಥ್ಯದ ಎನ್ ಡಿಎ ಮೈತ್ರಿಯಲ್ಲಿ ಬಿಜೆಪಿ ನಾಯಕರೊಬ್ಬರು ಪರಧಾನಿ ಹುದ್ದೆ ಅಲಂಕರಿಸುವುದಕ್ಕೆ ಈಗಿನಿಂದಲೇ ವಿರೋಧವೂ ವ್ಯಕ್ತವಾಗಿದೆ.

English summary
Gujarat Chief Minister Narendra Modi has said that he was a Nirvikar on PM candidature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X