• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಭ್ ಜ್ಯುವೆಲ್ಲರಿಗೆ 98.2 ಕೋಟಿ ರು ಲಾಭ

By Mahesh
|
 Vishnuvardhan in Shubh Jewellary

ಬೆಂಗಳೂರು, ಆ.14: ರಾಜೇಶ್ ಎಕ್ಸ್ ಪೋರ್ಟ್ ಲಿ (ಆರ್ ಇಎಲ್) ಸಂಸ್ಥೆಯ ರೀಟೈಲ್ ಉತ್ಪನ್ನವಾದ ಶುಭ್ ಜ್ಯುವೆಲ್ಲರಿಸ್, ಶ್ರಾವಣ ಮಾಸದಲ್ಲಿ ಭರ್ಜರಿ ವ್ಯಾಪಾರ ನಡೆಸುವ ಮೂಲಕ ಸಂಸ್ಥೆ ಉತ್ತಮ ಲಾಭ ತಂದಿದೆ. ಮೊದಲ ತ್ರೈಮಾಸಿಕ ದಲ್ಲಿ ಚಿನ್ನಾಭರಣ ಸಂಸ್ಥೆಯ ನಿವ್ವಳ ಲಾಭ 3.25 ರಷ್ಟು ಏರಿಕೆ ಕಂಡು 98.2 ಕೋಟಿ ರು ಲಾಭ ತಂದಿದೆ.

ರಾಜೇಶ್ ಎಕ್ಸ್ ಪೋರ್ಟ್ಸ್ ಆದಾಯ ಶೇ 5.15 ರಷ್ಟು ಏರಿಕೆಯಾಗಿದ್ದು ಒಟ್ಟಾರೆ 4,967.1 ಕೋಟಿ ಗಳಿಸಿದೆ. ಈ ತ್ರೈಮಾಸಿಕದಲ್ಲಿ Earnings Per Share (EPS) 3.33ರು ಗೆ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ 3.22 ರು. ನಷ್ಟಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಮ್ಮ ಸಂಸ್ಥೆ ವಿಸ್ತರಣೆಯತ್ತ ಗಮನ ಹರಿಸಲಿದೆ. ಕರ್ನಾಟಕದಲ್ಲಿ ಸುಮಾರು 40 ಕ್ಕೂ ಅಧಿಕ ಶುಭ್ ಜುವೆಲ್ಲರಿ ಶೋ ರೂಮ್ ಗಳನ್ನು ಆರಂಭಿಸಲಾಗುವುದು. ಬಹುಶಃ ಮುಂದಿನ ಎರಡು ತ್ರೈಮಾಸಿಕದಲ್ಲೇ ಮಳಿಗೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಸಂಸ್ಥೆ ಉತ್ತಮ ಪ್ರಗತಿ ಕಂಡಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮುಖ್ಯಸ್ಥ ರಾಜೇಶ್ ಮೆಹ್ತಾ ಹೇಳಿದ್ದಾರೆ.

2014ರ ಹೊತ್ತಿಗೆ ದಕ್ಷಿಣ ಭಾರತದಲ್ಲಿ ಚಿನ್ನದ ಮಳಿಗೆ ರೀಟೇಲ್ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿರಲಿದೆ. ಸುಮಾರು 500 ಶುಭ್ ಜುವೆಲ್ಲರಿ ಶೋ ರೂಮ್ ಗಳನ್ನು ಆರಂಭಿಸುವ ಯೋಜನೆಯಿದೆ. ಸದ್ಯ 80 ಮಳಿಗೆಗಳು ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ರಾಜೇಶ್ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಡಾ. ವಿಷ್ಣುವರ್ಧನ್ ಹಾಗೂ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿಸಿಕೊಂಡು ಸಂಸ್ಥೆ ಅಧಿಕ ಲಾಭ ಪಡೆದಿದೆ. ಇದಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಸಂಸ್ಥೆ ಚೇರ್ ಮನ್ ರಾಜೇಶ್ ಮೆಹ್ತಾ ಹೇಳಿದ್ದಾರೆ.

ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಸುಮಾರು 2000ಕ್ಕೂ ಅಧಿಕ ಮದುವೆ ಸಂಬಂಧಿಸಿದ ಆಭರಣಗಳ ವಿನ್ಯಾಸವನ್ನು ರೂಪಿಸುತ್ತಿದೆ.

ಬಿಎಸ್ ಇಯಲ್ಲಿ ಕಂಪನಿ ಷೇರುಗಳು ಮಂಗಳವಾರ 126.30 ರು ದರದಂತೆ ಶೇ 0.20ರ ಏರಿಕೆ ಜೊತೆಗೆ ಮುಕ್ತಾಯವಾಗಿದೆ. ದಿನದ ಮಧ್ಯಂತರ ಅವಧಿಯಲ್ಲಿ 127.50 ತನಕ ಷೇರು ಬೆಲೆ ಏರಿತ್ತು.

ರಾಜೇಶ್ ಎಕ್ಸ್ ಪೋರ್ಟ್ ದಾಖಲೆ: ಶುಭ್ ಜ್ಯುವೆಲ್ಲರಿಸ್, ಕಳೆದ ವರ್ಷಾಂತ್ಯದ ಹಬ್ಬದ ಸಂದರ್ಭದಲ್ಲಿ ಸುಮಾರು ಶೇ 232 ರಷ್ಟು ಆದಾಯ ಗಳಿಸಿ ಭರ್ಜರಿ ವ್ಯಾಪಾರ ನಡೆಸಿತ್ತು. ಡಿ.31, 2011ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ ಶೇ.51ರಷ್ಟು ಅಥವಾ 114.7ಕೋಟಿ ರು ಲಾಭ ಗಳಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಚಿನ್ನ ಸುದ್ದಿಗಳುView All

English summary
Rajesh Exports's revenues rose 5.15% to Rs 4,967.1 crore in the same quarter. EPS for the quarter stood at Rs 3.33 against Rs 3.22 for the corresponding period of previous year. The company has plans to open 40 more Shubh Jewellers showrooms in Karnataka, within the next two quarters

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more