ಸಂಭೋಗ ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಆಸಿಡ್ ಸುರಿದ

ಬಗ್ದೆಹರಿ ಗ್ರಾಮದ 24 ವರ್ಷ ವಿವಾಹಿತ ಮಹಿಳೆಯ ಮೇಲೆ ನಿನ್ನೆ ಭಾನುವಾರ ಈ ಹೇಯಕೃತ್ಯ ನಡೆದಿದೆ. ಮಹಿಳೆಯ ಮುಖ ಮತ್ತು ದೇಹದ ಮೇಲ್ಭಾಗದಲ್ಲಿ ಆಸಿಡ್ ಗಾಯಗಳಾಗಿವೆ.
ನೀರಿನ ಹೊಂಡವೊಂದರ ಬಳಿ ಸದರಿ ಮಹಿಳೆ ಬಹಿರ್ದೆಸೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಹೊಂಡದ ಬಳಿ ಸಾಗುತ್ತಿದ್ದ ಹಿಳೆಯನ್ನು ಅನತಿ ದೂರಲ್ಲಿ ನೋಡಿದ ಯುವಕರು ಆಕೆಯ ಬಳಿ ಬಂದು ಸಂಭೋಗಕ್ಕೆ ಒತ್ತಾಯಿಸಿದ್ದಾರೆ. ಆಕೆ ಅದಕ್ಕೆ ಸೊಪ್ಪು ಹಾಕದೆ ತಿರಸ್ಕರಿಸಿದ್ದಾಳೆ. ಇದರಿಂದ ವ್ಯಘ್ರರಾದ ಕಾಮುಕರು ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದಾರೆ.
ಗ್ರಾಮದಲ್ಲಿ ನನ್ನ ತವರುಮನೆಗೆ ಬಂದಿದ್ದೆ. ಆಗ ಕೊಖಾನ್ ಮತ್ತು ಸ್ವಪನ್ ಎಂಬಿಬ್ಬರು ದುರುಳರು ನನ್ನ ಮೇಲೆ ಆಸಿಡ್ ದಾಳಿ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಬಾಧಿತ ಮಹಿಳೆಯ ಕುಟುಂಬದವರ ಪ್ರಕಾರ ಮದುವೆಗೂ ಮುಂಚೆ ಆರೋಪಿಗಳಿಬ್ಬರೂ ಮಹಿಳೆಯ ಹಿಂದೆ ಬಿದ್ದಿದ್ದರು. ಈ ಮಧ್ಯೆ, ಧನಬಾದಿನಲ್ಲೂ ಬಾಲಕಿಯೊಬ್ಬಳ ಮೇಲೆ ಇಂತಹುದೇ ದಾಳಿ ನಡೆದಿದೆ.
ಆಸಿಡ್ ಎರಚಿದ ವ್ಯಕ್ತಿಗೆ ಅತಿ ಹೆಚ್ಚಿನ ಶಿಕ್ಷೆ ವಿಧಿಸಬೇಕೆಂಬ ಸರ್ವೋಚ್ಛ ನ್ಯಾಯಾಲಯದ ಇಂಗಿತವನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications