ಮಹಿಳೆಯ ಲೈಂಗಿಕ ಪೀಡನೆ : ವೈದ್ಯನ ಬಂಧನ

Doctor arrested for molesting patient's wife in Bangalore
ಬೆಂಗಳೂರು, ಆ. 9 : ತೀವ್ರ ನಿಗಾ ಘಟಕದಲ್ಲಿದ್ದ ರೋಗಿಯ ಹೆಂಡತಿಯೊಡನೆ ಅಸಭ್ಯವಾಗಿ ವರ್ತಿಸಿದ ಐಸಿಯು ಉಸ್ತುವಾರಿ ವೈದ್ಯ ಮತ್ತು ಅರವಳಿಕೆ ತಜ್ಞನನ್ನು ಪ್ರಜ್ಞೆ ತಪ್ಪುವಂತೆ ಉಳಿದ ರೋಗಿಗಳ ಸಂಬಂಧಿಗಳು ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ನಡೆದಿರುವುದು ಬೆಂಗಳೂರಿನ ಇಂದಿರಾನಗರದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ. ಮಂಗಳವಾರ ಮಧ್ಯರಾತ್ರಿಯ ನಂತರ. ಬಂಧಿತ ವೈದ್ಯ ಡಾ. ಶ್ರೀನಿವಾಸ್. 35 ವರ್ಷದ ಡಾ. ಶ್ರೀನಿವಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 92ರ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಲೈಂಗಿಕವಾಗಿ ಪೀಡನೆಗೊಳಗಾದ ಮಹಿಳೆಯ ಗಂಡನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆತನ ಹೆಂಡತಿ ಹೊರಗಡೆ ಮಲಗಿದ್ದರು. ಆ ಹೊತ್ತಿನಲ್ಲಿ ತಪಾಸಣೆಗೆಂದು ಬಂದಿದ್ದ ಡಾ. ಶ್ರೀನಿವಾಸ್ ಹೊರಗಡೆ ಮಲಗಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.

ಮಹಿಳೆಯ ಚೀರಾಟ ಕೇಳಿ ಅಲ್ಲಿದ್ದ ಉಳಿದ ರೋಗಿಗಳ ಸಂಬಂಧಿಗಳು ಮತ್ತು ಮತ್ತಿತರರು ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವೈದ್ಯನನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಒಯ್ಯಲಾಗಿತ್ತು. ಪೊಲೀಸರ ಪ್ರಕಾರ, ಡಾ. ಶ್ರೀನಿವಾಸ್ ಆಲ್ಕೋಹಾಲ್ ಸೇವನೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+