ಮದುರೈ ಅಧೀನಂ ಪೀಠದಿಂದ ನಿತ್ಯಾನಂದ ವಜಾ ಸನ್ನಿಹಿತ?

Swamy Nityananda likely to axe from Madhurai Adheenam Peetam
ಮದುರೈ, ಆ 8: ಈ ಹಿಂದೆ ಮದುರೈ ಅಧೀನಂ ಪೀಠಕ್ಕೆ ನೀಡಿದ್ದ ವಾಗ್ದಾನವನ್ನು ಈಡೇರಿಸದ ಹಿನ್ನಲೆಯಲ್ಲಿ ಬಿಡದಿ ನಿತ್ಯಾನಂದ ಸ್ವಾಮಿಯನ್ನು ಮದುರೈ ಅಧೀನಂ ಪೀಠದ ಉತ್ತರಾಧಿಕಾರಿ ಸ್ಥಾನದಿಂದ ಕೆಳಗಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರುಣಗಿರಿನಾಥ ಅವರು ಹೇಳಿಕೆ ನೀಡಿದ್ದಾರೆ.

ನಿತ್ಯಾನಂದ ಸ್ವಾಮಿ ಈ ಹಿಂದೆ ಪೀಠಕ್ಕೆ ಹತ್ತು ಕೋಟಿ ರೂಪಾಯಿ ನೀಡುವುದಾಗಿ ಆಶ್ವಾಸನೆ ನೀಡಿದ್ದ. ಆದರೆ ಅದು ಆಶ್ವಾಸನೆ ರೂಪದಲ್ಲೇ ಉಳಿದಿದ್ದರಿಂದ ನಾವು ಈ ನಿತ್ಯಾರನ್ನು ಪೀಠದಿಂದ ಕೆಳಗಿಳಿಸುವ ಚಿಂತನೆ ನಡೆಯುತ್ತಿದೆ. ನಿತ್ಯಾ ಪೀಠಕ್ಕೆ 10 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದರು.

ಅವರ ಜೊತೆ ಮಾತನಾಡಿದಾಗ ಅವರಿಂದ ಸಕಾರಾತ್ಮಕ ಉತ್ತರ ಬಂದಿಲ್ಲ. ಅವರ ನಡುವಳಿಕೆ ನಮಗೆ ಬೇಸರ ತಂದಿದೆ ಎಂದು ಪೀಠಾಧಿಪತಿ ಅರುಣಗಿರಿನಾಥ ಹೇಳಿಕೆ ನೀಡಿದ್ದಾರೆ.

ನಿತ್ಯಾ ನೀಡಿದ ಭರವಸೆಯ ಬಗ್ಗೆ ಅರುಣಗಿರಿನಾಥ ಅವರು ಕೇಳಿದಾಗ ನಿತ್ಯಾ ಬೆಂಬಲಿಗರು ಮತ್ತು ಪೀಠದ ಅನುಯಾಯಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ನಿತ್ಯಾ ಬೆಂಬಲಿಗರು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಸುಮಾರು 1500 ವರ್ಷ ಇತಿಹಾಸ ಹೊಂದಿರುವ ಶೈವ ಮಠದ ಈ ಪೀಠಕ್ಕೆ ನಿತ್ಯಾನಂದ 293ನೇ ಸ್ವಾಮೀಜಿಯಾಗಿ ಪೀಠವೇರಿದ್ದರು.

ಇತ್ತೀಚಿಗೆ ತಮಿಳುನಾಡು ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+