• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಡುಗಿ ಜೀನ್ಸ್ ಧರಿಸಿದರೆ ಆಸಿಡ್ ದಾಳಿ ಗ್ಯಾರಂಟಿ!

By Prasad
|

ರಾಂಚಿ (ಜಾರ್ಖಂಡ್), ಆ. 7 : "ಹುಡುಗಿಯರು ಜೀನ್ಸ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಥವಾ ದುಪಟ್ಟಾ ಇಲ್ಲದೆ ಓಡಾಡುವುದು ಕಂಡರೆ ಅವರ ಮುಖದ ಮೇಲೆ ಆಸಿಡ್ ಹಾಕುವುದು ಗ್ಯಾರಂಟಿ."

ಹೀಗೊಂದು ಕೈಬರಹದಲ್ಲಿ ಬರೆಯಲಾಗಿರುವ ಬೆದರಿಕೆಯ ಭಿತ್ತಿಪತ್ರಗಳನ್ನು, ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತವರೂರು, ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಗರದ ಗೋಡೆಗೋಡೆಯ ಮೇಲೆ ಮಂಗಳವಾರ ಅಂಟಿಸಲಾಗಿದೆ.

"ಹುಡುಗಿಯರು ಜೀನ್ಸ್ ಧರಿಸುವುದನ್ನು ಅಥವಾ ದುಪಟ್ಟಾ ಇಲ್ಲದೆ ಅಡ್ಡಾಡುವುದನ್ನು ಆಗಸ್ಟ್ 20ರಿಂದ ನಗರದಲ್ಲಿ ನಿಷೇಧಿಸಲಾಗಿದೆ. ನಿಷೇಧ ಉಲ್ಲಂಘಿಸಿದವರ ಮುಖದ ಮೇಲೆ ಆಸಿಡ್ ದಾಳಿ ಮಾಡಲಾಗುವುದು" ಎಂಬ ಸಂದೇಶವಿರುವ ಭಿತ್ತಿಪತ್ರಗಳನ್ನು ಸೇ. ಜೇವಿಯರ್ಸ್ ಕಾಲೇಜು ಮುಂತಾದ ಪ್ರದೇಶಗಳಲ್ಲಿ ಅಂಟಿಸಲಾಗಿದ್ದು, ಯುವತಿಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಈ ಬಗೆಯ ಸಂದೇಶಗಳ ಜೊತೆಗೆ, ಉದ್ಯಮ ಸ್ಥಾಪನೆಗಾಗಿ ಭೂಮಿ ಕಬಳಿಕೆ ಮಾಡುವವರಿಗೂ ಇದೇ ಗತಿಯಾಗುತ್ತದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಈ ಎಲ್ಲ ಭಿತ್ತಿಪತ್ರಗಳಲ್ಲಿ ಜಾರ್ಖಂಡ್ ಮುಕ್ತಿ ಸಂಘ ಎಂದು ನಮೂದಿಸಲಾಗಿದೆ. ಇಂಥ ಸಂಘಟನೆ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವ ಪೊಲೀಸರು, ಇದೊಂದು ಪುಂಡ ಹುಡುಗರ ಕೀಟಲೆ ಇರಬಹುದು ಎಂದು ಅಂದಾಜು ಮಾಡಿದ್ದಾರೆ.

ದೇಶದಲ್ಲಿ 'ನೈತಿಕ ಪೊಲೀಸ'ರ ದಬ್ಬಾಳಿಕೆ ಮತ್ತು ಮಹಿಳೆಯರ ಮೇಲೆ ಹಲ್ಲೆಗಳು ಜಾಸ್ತಿಯಾಗುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ. ಕೆಲ ದಿನಗಳ ಹಿಂದೆ ಪುಂಡರ ಗುಂಪೊಂದು ಆಸ್ಸಾಂನಲ್ಲಿ 19 ವರ್ಷದ ಯುವತಿಯನ್ನು ವಿವಸ್ತ್ರಗೊಳಿಸಿ ಲೈಂಗಿಕ ಹಲ್ಲೆ ನಡೆಸಿತ್ತು. ಕರ್ನಾಟಕದ ಮಂಗಳೂರಿನಲ್ಲಿ ಕೂಡ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೋಂ ಸ್ಟೇ ಮೇಲೆ ದಾಳಿ ಮಾಡಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದರು.

ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ : ಕಳೆದ ವರ್ಷ ಮೂವರು ಯುವತಿಯರ ಮೇಲೆ ನಡೆಸಲಾಗಿದ್ದ ಆಸಿಡ್ ದಾಳಿಗೆ ಸಂಬಂಧಿಸಿದ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಹರ್ಯಾಣಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆ.7ರಂದು ಮಂಗಳವಾರ ಆದೇಶಿಸಿದೆ. ಇಡೀ ಪ್ರಕರಣವನ್ನು ಮುಚ್ಚಲು ಯತ್ನಿಸಿದ್ದ ಪೊಲೀಸರ ವಿರುದ್ಧ ಹೈಕೋರ್ಟ್ ಕೆಂಡ ಕಾರಿದೆ. ಮೊತ್ತಮೊದಲ ಬಾರಿಗೆ ಆಸಿಡ್ ದಾಳಿಯನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಕೆಲ ದಿನಗಳ ಹಿಂದೆ ಕರ್ನಾಟಕದ ಬೆಳಗಾವಿಯ ಗೃಹಿಣಿಯ ಮೇಲೆ ಕಾಮುಕನೊಬ್ಬ ಆಸಿಡ್ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಕ್ಷಣೆಗಾಗಿ ಜೀನ್ಸ್ : ಭಾರತದಲ್ಲಿ ಈಗ ಜೀನ್ಸ್ ಧರಿಸುವುದು ಪಾಶ್ಚಿಮಾತ್ಯರ ಅನುಕರಣೆಯಾಗಿ ಉಳಿದಿಲ್ಲ. ಜೀನ್ಸ್ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಕಾಲೇಜು ಹುಡುಗ ಹುಡುಗಿಯರು ಜೀನ್ಸ್ ಇಲ್ಲದೆ ಕಾಲೇಜು ಕ್ಯಾಂಪಸ್ಸಿನಲ್ಲಿ ಕಾಲಿಡುವುದಿಲ್ಲ. ತಮ್ಮ ದೇಹದ ಆಕಾರಕ್ಕೆ ಹೊಂದಲಿ, ಹೊಂದದಿರಲಿ ನಾನಾ ವಯಸ್ಸಿನ ಮಹಿಳೆಯರೆಲ್ಲ ಇಂದು ಜೀನ್ಸ್ ಧರಿಸುತ್ತಾರೆ. ಸ್ಟೈಲಿಗಾಗಿ ಮಾತ್ರವಲ್ಲ ರಕ್ಷಣೆಗಾಗಿಯೂ ಹುಡುಗಿಯರು ಜೀನ್ಸ್ ತೊಡುತ್ತಾರೆ. ಜೀನ್ಸ್ ಧರಿಸಿದ ಮಹಿಳೆಯನ್ನು ಅತ್ಯಾಚಾರ ಮಾಡುವುದು ಅಸಾಧ್ಯ ಎಂದು ಅಮೆರಿಕ ಕೋರ್ಟ್ ಕೂಡ ತೀರ್ಪು ನೀಡಿತ್ತು. ಇಂದಿನ ಪೀಳಿಗೆಯ ಯುವಕ ಯುವತಿಯರೆಲ್ಲ ಜೀನ್ಸನ್ನು ಅಪ್ಪಿಕೊಂಡಿರುವಾಗ, ಈ ನೈತಿಕ ಪೊಲೀಸರಿಗೇಕೆ ಜೀನ್ಸ್ ಮೇಲೆ ಕೋಪ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Posters with threatening messages have been pasted all over Ranchi in Jharkhand. They say, the women wearing jeans or appear without dupatta would be attacked with acid. Who will bell these moral police in India?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more