ಸೆಪ್ಟೆಂಬರಿನಿಂದ ರಾಜ್ಯದಲ್ಲಿ ಮತ್ತೆ ನಿಲೇಕಣಿ ಆಧಾರ್-2

nilekani-uid-adhar-card-phase-2-in-karnataka-september
ಬೆಂಗಳೂರು, ಆ.6: ನಂದನ್ ನಿಲೇಕಣಿ ನೇತೃತ್ವದ ವಿಶಿಷ್ಟ ಗುರುತು ಸಂಖ್ಯೆ (ಯುಐಡಿ) ಯೋಜನೆ ಕರ್ನಾಟಕದಲ್ಲಿ ಮುಂದಿನ ತಿಂಗಳಿಂದ ಮತ್ತೆ ಚಾಲನೆ ಪಡೆದುಕೊಳ್ಳಲಿದೆ. ರಾಜ್ಯ ಸರಕಾರವು ಕೇಂದ್ರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಹಮತ ವ್ಯಕ್ತಪಡಿಸಿದ್ದು, ಯೋಜನೆಯಡಿ ಕರ್ನಾಟಕದ ಎಲ್ಲಾ ಜನರಿಂದ ಜೈವಿಕ ಮತ್ತು ಪ್ರದೇಶವಾರು ದತ್ತಾಂಶ ಪಡೆಯಲು ಅಂಕಿತವಾಗಿದೆ. ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್ (RGI) ಮತ್ತು ಆಧಾರ್ (UID) ಜಂಟಿಯಾಗಿ ಈ ಯೋಜನೆಯನ್ನು ಮುಂದುವರಿಸಲಿವೆ.

'ಸೆಪ್ಟೆಂಬರಿನಿಂದ ಆಧಾರ್ ಕಾರ್ಡ್ ನೋಂದಣಿ ಮುಂದುವರಿಯಲಿದು, ಈ ಬಾರಿ ಕ್ಷಿಪ್ರವಾಗಿ ನೋಂದಣಿ ಮತ್ತು ಕಾರ್ಡುಗಳ ವಿತರಣೆಯಾಗಲಿದೆ. ಇದರಿಂದ ಸಾಮಾಜಿಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪ್ರಾಪ್ತಿಯಾಗುವುದಕ್ಕೆ ನೆರವಾಗಲಿದೆ' ಎಂದು UID ಪ್ರಾಧಿಕಾರದ ಉಪ ಮಹಾ ನಿರ್ದೇಶಕ ಡಾ. ಅಶೋಕ್ ದಳವಾಯಿ ಅವರು ತಿಳಿಸಿದ್ದಾರೆ.

ಆಧಾರ್ (ಯುಐಡಿ) ಯೋಜನೆಯು ಅಸಂಬದ್ಧ ಎಂದು ಕೇಂದ್ರ ಸಚಿವಾಲಯಗಳ ನಡುವೆಯೇ ಗುದ್ದಾಟ ನಡೆದ ಬಳಿಕ ಕೊನೆಗೂ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಸಂಪೂರ್ಣ ಅನುಮೋದನೆ ಪಡೆಯುವಲ್ಲಿ ನಂದನ್ ನಿಲೇಕಣಿ ಸಾರಥ್ಯದ ಯುಐಡಿ ಯಶಸ್ವಿಯಾಗಿತ್ತು.

ಆದರೆ ಅಂದಿನ ಗೃಹ ಸಚಿವ (ಈಗಲೂ ಅವರೇ) ಪಿ. ಚಿದಂಬರಂ ಅವರು ನಿಲೇಕಣಿಯ ಆಧಾರ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, RGI ಜತೆಜತೆಗೆ UID ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಕೇಂದ್ರ ಸರಕಾರವೂ ಅನುಮೋದನೆ ನೀಡಿದ್ದು, ಇದೀಗ ರಾಜ್ಯದ 5 ಜಿಲ್ಲೆಗಳಲ್ಲಿ RGI ಮಾಹಿತಿ ಕಲೆಹಾಕಿದರೆ ಉಳಿದ 25 ಜಿಲ್ಲೆಗಳಲ್ಲಿ UID ಆ ಕೆಲಸವನ್ನು ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+