Get Updates
Get notified of breaking news, exclusive insights, and must-see stories!

ಅಮೆರಿಕದ ಪೆಂಟಗನ್ ಕಚೇರಿಯಲ್ಲೂ ಬ್ಲೂಬಾಯ್ಸ್!

us-mda-defense-officials-caught-watching-porn-warned
ಪೆಂಟಗನ್ (ಅಮೆರಿಕ), ಆ.3: ಅಮೆರಿಕದ ಪವರ್ ಹೌಸ್ ಪೆಂಟಗನ್ ನಲ್ಲೂ ಬ್ಲೂಬಾಯ್ಸ್ ಇದ್ದಾರೆ. ಅಲ್ಲಿನ ಹಿರಿಯ ಅಧಿಕಾರಿಗಳು ಯಾವುದೇ ಎಗ್ಗಿಲ್ಲದೆ ಅಶ್ಲೀಲ ವಿಡಿಯೋ ನೋಡುವ ಚಟ ಅಂಟಿಸಿಕೊಂಡಿದ್ದಾರೆ.

ಇದಕ್ಕೆ ಕಡಿವಾಣ ಹಾಕಲು 'ಕಚೇರಿಯ ಕೆಲಸದ ವೇಳೆ ಅಶ್ಲೀಲ ಚಿತ್ರಗಳನ್ನು (ಪೋರ್ನ್ ವಿಡಿಯೋ) ನೋಡಬಾರದು' ಎಂದು ಅಮೆರಿಕದ ಕ್ಷಿಪಣಿ ರಕ್ಷಣಾ ಏಜೆನ್ಸಿಯು (MDA) ತನ್ನ ಉದ್ಯೋಗಿಗಳಿಗೆ ನಿಷೇಧ ಹೇರಿದೆ.

ಇಂಟರ್ ನೆಟ್ ನಲ್ಲಿ ಪೋರ್ನ್ ಚಿತ್ರ/ ವಿಡಿಯೋಗಳನ್ನು ನೋಡುವುದಕ್ಕೆ ಕಚೇರಿಯ ಕಂಪ್ಯೂಟರುಗಳನ್ನು ಬಳಸದಂತೆ ತಾಕೀತು ಮಾಡಿದೆ. ಕಾರ್ಯಕಾರಿ ನಿರ್ದೇಶಕ ಜಾನ್ ಜೇಮ್ಸ್ ಅವರು ಹೊರಡಿಸಿರುವ ಕಚೇರಿ ಸುತ್ತೋಲೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ: ಇತ್ತೀಚಿನ ತಿಂಗಳುಗಳಲ್ಲಿ ಸರಕಾರಿ ನೌಕಕರು ಮತ್ತು ಕಾಂಟ್ರಾಕ್ಟುದಾರರು MDA ನೆಟ್ ವರ್ಕ್ ಅನ್ನು ಅಸಮಂಜಸವಾಗಿ ಬಳಸುತ್ತಿರುವುದು ಪತ್ತೆಯಾಗಿದೆ. ನಿರ್ದಿಷ್ಟವಾಗಿ ಪೋರ್ನ್ ಚಿತ್ರ/ ವಿಡಿಯೋಗಳನ್ನು ನೋಡಲು, ಅಂತಹ ಸಂದೇಶಗಳನ್ನು ರವಾನಿಸಲು, ಲೈಂಗಿಕ ಚಿತ್ರಗಳನ್ನು ರವಾನಿಸಲು ವೆಬ್ ಸೈಟ್ ಗಳನ್ನು ಜಾಲಾಡುವುದು ಕಚೇರಿಯಲ್ಲಿ ಸಾಮಾನ್ಯವಾಗಿದೆ.

ಈ ಕೃತ್ಯಗಳು ವೃತ್ತಿಪರವಲ್ಲ. ಜತೆಗೆ, ಸೂಚಿತ ಕರ್ತವ್ಯಗಳನ್ನು ನಿಭಾಯಿಸಲು ಸಾಧ್ಯವಾಗದೆ ಸಮಯ ವ್ಯರ್ಥವಾಗುತ್ತಿರುವುದೂ ಕಂಡುಬಂದಿದೆ. ಇದು ಸರಕಾದರ ನೀತಿ ನಿಯಮಗಳಿಗೆ ವ್ಯತಿರಿಕ್ತವಾಗಿದೆ. ಇದರಿಂದ ನಮ್ಮ ಕಂಪ್ಯೂಟರ್ ನೆಟ್ ವರ್ಕ್ ಸಂಪನ್ಮೂಲವೂ ಹಾಳಾಗುತ್ತಿದೆ. ಇದು ಅಂತರ್ಜಾಲದ ಭದ್ರತೆಗೂ ಬಾಧಕವಾಗಿದೆ.

ಕಚೇರಿಯ ಕಂಪ್ಯೂಟರ್ ನೀತಿ-ನಿಯಮಗಳನ್ನು ಉಲ್ಲಂಘಿಸುವ ಪ್ರಕರಣ ಇನ್ನು ಮುಂದೆ ಪತ್ತೆಯಾದರೆ ಅಂತಹ ಉದ್ಯೋಗಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅವರನ್ನು MDA ಸೇವೆಯಿಂದ ತೆಗೆದುಹಾಕುವ ಸಾಧ್ಯತೆಯೂ ಇದೆ' ಎಂದು ಕಟ್ಟೆಚ್ಚರ ಹೊರಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+