• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೂಟರ್ ವಿಜಯ್ ಕುಮಾರ್ ಗೆ ರಜತ ಪದಕ

By Mahesh
|

ಲಂಡನ್, ಆ.3: ಲಂಡನ್ ಒಲಿಂಪಿಕ್ಸ್ 2012 ನಲ್ಲಿ ಆ.3 ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಗಗನ್ ನಾರಂಗ್ ಕಂಚಿನ ಪದಕ ಸಿಕ್ಕ ಮೇಲೆ, ಇಂದು ಶೂಟಿಂಗ್ ನಲ್ಲಿ ವಿಜಯ್ ಕುಮಾರ್ ರಜತ ಪದಕ ಗೆದ್ದ ಸಾಧನೆ ಮೆರೆದಿದ್ದಾರೆ.


ರಾಯಲ್ ಆರ್ಟಿಲರಿ ಬರಾಕ್ ನಲ್ಲಿ ನಡೆದ ಪುರುಷರ 25 ಮೀ rapid ಫೈರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ವಿಜಯ್ ಕುಮಾರ್ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಭಾರತ ಸತತ ನಾಲ್ಕನೇ ಪದಕ ಗಳಿಸಿದ ಕೀರ್ತಿ ಪಡೆದಿದೆ. ರಾಜವರ್ಧನ್ ರಾಥೋರ್ (ಅಥೆನ್ಸ್, 2004), ಅಭಿನವ್ ಬಿಂದ್ರಾ(ಚಿನ್ನ, ಬೀಜಿಂಗ್ 2008) ಹಾಗೂ ಲಂಡನ್ ಒಲಿಂಪಿಕ್ಸ್ 2012ನಲ್ಲಿ ಗಗನ್ ನಾರಂಗ್ ಹಾಗೂ ವಿಜಯ್ ಕುಮಾರ್.

'ನನ್ನ ಮೊದಲ ಒಲಿಂಪಿಕ್ಸ್ ನಲ್ಲೇ ಪದಕ ಗೆದ್ದಿರುವುದು ಅತೀವ ಸಂತಸ ತಂದಿದೆ. ನನ್ನ ಮೇಲೆ ಅಪಾರ ನಿರೀಕ್ಷೆ, ಒತ್ತಡ ಇದ್ದಿದ್ದು ನಿಜ. ನಾನು ನನ್ನ ಪ್ಲ್ಯಾನ್ ಗೆ ಬದ್ಧನಾಗಿದ್ದೆ ಅದರಂತೆ ಆಟವಾಡಿದೆ'ಎಂದು ವಿಜಯ್ ಕುಮಾರ್ ಪದಕ ಗೆದ್ದ ನಂತರ ಪ್ರತಿಕ್ರಿಯಿಸಿದ್ದಾರೆ.

ವಿಜಯ್ ಕುಮಾರ್ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಒಲಿಂಪಿಕ್ಸ್ ಬೆಳ್ಳಿ ವಿಜೇತ ರಾಥೋರ್ 'ಭಾರತೀಯ ಸೇನೆಯ ನಮ್ಮ ಬಂಧುವೊಬ್ಬ ಪದಕ ಗೆದ್ದಿರುವುದು ತುಂಬಾ ಸಂತಸಕೊಟ್ಟಿದೆ' ಎಂದು ರಾಥೋರ್ ಟ್ವೀಟ್ ಮಾಡಿದ್ದಾರೆ.(@Ra_THORe) "I am so proud to be indian today, so proud to be from the Indian Army and so proud to represent Indian Shooting; thank you Vijay Kumar :)."

ವಿಜಯ್ ಸಾಧನೆ ಹೀಗಿತ್ತು: 26 ವರ್ಷದ ವಿಜಯ್ 5, 4, 4, 3, 4, 4, 4 ಹಾಗೂ 2 ಒಟ್ಟು 30 ಅಂಕ ಗಳಿಸಿದರು.

ಹಿಮಾಚಲ ಪ್ರದೇಶದ ಹರ್ಸೌರ್ ಗ್ರಾಮದ ವಿಜಯ್ ನಿಜಕ್ಕೂ ಚಿನ್ನದಂಥ ಕ್ರೀಡಾಪಟು. ಕಾಮನ್ ವೆಲ್ತ್ ಕ್ರೀಡೆಯಲ್ಲಿ ದಾಖಲೆಯ 5 ಚಿನ್ನದ ಪದಕ ಗೆದ್ದ ಸಾಧನೆ ಮೆರೆದಿದ್ದಾರೆ. 2010 ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ 2 ಚಿನ್ನ ಗೆದ್ದಿದ್ದರು. ಆದರೆ, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಸ್ವಲ್ಪದರಲ್ಲೇ ಕೈತಪ್ಪಿ ರಜತ ಪದಕ ಕೈ ಸೇರಿದೆ.

ಇದಕ್ಕೂ ಮುನ್ನ ನಾರಂಗ್ ಕಂಚಿನ ಪದಕ ಗೆದ್ದ ನಂತರ ವಿಜಯ್ ಪದಕದ ಆಸೆ ಹುಟ್ಟಿಸಿದ್ದರು. ಶೂಟಿಂಗ್ ಫೈನಲ್ ನಲ್ಲಿ 30 ಅಂಕ ಗಳಿಸಿದರು.ಕ್ಯೂಬನ್ ಶೂಟರ್ ಲೂರಿಸ್ ಪುಪೊ 34 ಅಂಕಗಳಿಸಿ ಚಿನ್ನದ ಪದಕ ಗೆದ್ದರು. ಚೀನಾದ ಫೆಂಗ್ ಡಿಂಗ್ 27 ಅಂಕದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.

ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 585 ಅಂಕಗಳಿಸಿದ್ದ ವಿಜಯ್ ಒಲಿಂಪಿಕ್ಸ್ ದಾಖಲೆ (583) ಮುರಿದ ದಾಖಲೆ ಮೆರೆದಿದ್ದರು. 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅರ್ಹತಾ ಸುತ್ತ್ತಿನಲ್ಲೇ ನಿರ್ಗಮಿಸಿದ್ದ ವಿಜಯ್, ನಂತರ ಉತ್ತಮ ಆಟ ಪ್ರದರ್ಶನ ನೀಡಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India won its second medal at the London Olympics 2012 when shooter Vijay Kumar claimed silver in Men's 25m Rapid Fire Pistol here at the Royal Artillery Barracks on Friday(Aug.3).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more